ಶಿಕಾರಿಪುರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೋಣಿ ಮಾಲತೇಶ್ ಹೆಚ್ಚಿನ ಮತಗಳಿಂದ ಗೆಲುವು ನಿಶ್ಚಿತ : ಹುಲ್ಮಾರ್ ಮಹೇಶ್

ಶಿಕಾರಿಪುರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೋಣಿ ಮಾಲತೇಶ್ ಹೆಚ್ಚಿನ ಮತಗಳಿಂದ ಗೆಲುವು ನಿಶ್ಚಿತ : ಹುಲ್ಮಾರ್ ಮಹೇಶ್

ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಕಾಂಗ್ರೇಸ್ ಬಿಜೆಪಿ ಪಕ್ಷೇತರ ಅಭ್ಯರ್ಥಿಯಿಂದ ತ್ರಿಕೋನದ ಸ್ಪರ್ಧೆ ಇಲ್ಲ ನಮಗೆ ನೇರ ಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅವರನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ತಿಳಿಸಿದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಆರಂಭವಾಗಿದ್ದು, ಬಿಜೆಪಿ ಪಕ್ಷದವರನ್ನೊಳಗೊಂಡಂತೆ ತಾಲ್ಲೂಕಿನಾದ್ಯಂತ ಜನರಿಂದ ಅಪ್ಪ ಮಕ್ಕಳ ಪಕ್ಷವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಬಿಎಸ್ ವೈ ರವರ ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ ಆದ್ದರಿ೦ದ ಈ ಬಾರಿ ಕಾಂಗ್ರೇಸ್ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.

ಅಭಿವೃದ್ಧಿಯ ಹೆಸರಲ್ಲಿ ಮತ ಯಾಚನೆ ಮಾಡುತ್ತಿರುವ ಬಿಜೆಪಿಗರು, ತಾಲ್ಲೂಕಿನಲ್ಲಿ ವಿವಿಧ ಸಮಾಜದ ಮುಖಂಡರನ್ನ ಹಣದಿಂದ ಖರೀದಿಸುತ್ತಿದ್ದಾರೆ. ಹಾಗಿದ್ದಲ್ಲಿ ಇವರು ತಾಲ್ಲೂಕಿನಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಹೆಚ್ ಎಸ್ ಶಾಂತವೀರಪ್ಪ ಗೌಡರು ಬಿಜೆಪಿ ಪಕ್ಷವನ್ನು ತೆಜಿಸಿ ಕಾಂಗ್ರೇಸ್ಸಿಗೆ ಬಂದಾಗ ಇವರಿಗೆ ಕೆಪಿಸಿಸಿ ಸದಸ್ಯತ್ವ ನೀಡಿ ಎರಡು ಬಾರಿ ವಿಧಾನಸಭೆಯ ಚುನಾವಣೆಗೆ ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು.

ಇದೇ ಪಕ್ಷೇತರ ಅಭ್ಯರ್ಥಿಯು ಕಾಂಗ್ರೇಸ್ ಪಕ್ಷದಿಂದ ಪುರಸಭಾ ಸದಸ್ಯರಾಗಿ ಅಧಿಕಾರಕ್ಕಾಗಿ ಬಿಜೆಪಿ ಪಕ್ಷಕ್ಕೆ ವಲಸೆ ಹೋಗಿದ್ದರು. ಅಲ್ಲಿ ಅಧಿಕಾರ ಮುಗಿದ ನಂತರ ಮತ್ತೆ ಕಾಂಗ್ರೇಸ್ ಪಕ್ಷಕ್ಕೆ ಬಂದರು. ಈರೀತಿ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುವವರನ್ನು ತಾಲ್ಲೂಕಿನ ಜನತೆ ತಿರಸ್ಕರಿಸಲಿದ್ದಾರೆ.

ಕಾಂಗ್ರೇಸ್ ಅಭ್ಯರ್ಥಿ ಗೋಣಿಮಾಲತೇಶ್ ರವರು ಸುಮಾರು 40 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲೇ ಇದ್ದು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ದಿವಂಗತ ಎಸ್ ಬಂಗಾರಪ್ಪ ರವರ ಕಟ್ಟಾ ಅನುಯಾಯಿ ಆಗಿದ್ದ ಮಾಲತೇಶ್ ರವರು ಬಂಗಾರಪ್ಪನವರು ಕಾಂಗ್ರೇಸ್ ಪಕ್ಷ ತೆಜಿಸಿ ಸಮಾಜವಾದಿ ಹಾಗೂ ಬಿಜೆಪಿಯಂತಹಾ ಪಕ್ಷಕ್ಕೆ ವಲಸೆ ಹೋದರೂ, ಮಾಲತೇಶ್ ರವರು ಕಾಂಗ್ರೇಸ್ ಪಕ್ಷದಲ್ಲೇ ಇದ್ದು, ಪಕ್ಷಕ್ಕಾಗಿ ತಾಲ್ಲೂಕಿನಲ್ಲಿ ನಿರಂತರ ಜನಪರ ಹೋರಾಟ ಮಾಡಿದ್ದುಲ್ಲದೇ, ಸಾಕಷ್ಟು ಬಾರಿ ಪುರಸಭಾ ಸದಸ್ಯರಾಗಿ ಪಕ್ಷದ ಸಿದ್ಧಾತ ಮತ್ತು ಪಕ್ಷದ ಹಿತವನ್ನು ಕಾಪಾಡಿದ್ದಕ್ಕಾಗಿ ಪಕ್ಷ ಎರಡನೇ ಅವಧಿಗೂ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ಈ ಹಿಂದೆ ಹಲವಾರು ಮುಖಂಡರುಗಳು ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ಪಡೆದು ಚುನಾವಣೆಯಲ್ಲಿ ಸೋತು ಬಿಜೆಪಿ ಪಕ್ಷದೊಂದಿಗೆ ಹೋದಂತವರು ತುಂಬಾ ಜನರಿದ್ದಾರೆ. ಇವರಿಗೂ ಸಹ ಬೇರೆ ಪಕ್ಷಕ್ಕೆ ಹೋಗಲು ಬೇಕಾದಷ್ಟು ಅವಕಾಶಗಳಿದ್ದರೂ ಸಹ ಇವರು ಯಾವಕಡೆಗೂ ಹೋಗದೆ ಕಾಂಗ್ರೇಸ್ ಪಕ್ಷಕ್ಕಾಗಿ ದುಡಿದು ಶ್ರಮಿಸುತ್ತಿದೊದಾರೆ.

ಮೊದಲ ಬಾರಿ ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ಪಡೆದು ಸೋತರೂ ಸಹ ನಿರಾಶೆಗೊಳ್ಳದೆ ಎದೆಗುಂದದೆ ಎರಡನೇ ಅವದಿಗೆ ಅಭ್ಯರ್ಥಿಯಾಗಲು ಯಶಸ್ವಿಯಾಗಿದ್ದಾರೆ. ಈ ಅವದಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಇವರು ವಿಧಾನಸಭೆಗೆ ಹೋಗುವದು ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಅಷ್ಟು ಸತ್ಯ ಎಂದರು.

ಈ ವೇಳೆ‌ ಪುರಸಭಾ ಸದಸ್ಯ ರೋಷನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ತಿಮ್ಮಣ್ಣ, ಮಂಜುನಾಥ್, ಶಿವರಾಜ್, ಮಂಜುನಾಯ್ಕ್ ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!