ಯಡಿಯೂರಪ್ಪನವರಿಗೆ ಕಂಳಕ ತಂದ ವ್ಯಕ್ತಿ ಬಿ ವೈ ವಿಜಯೇಂದ್ರ : ಅಶ್ವಿನ್ ಪಾಟೀಲ್

ಯಡಿಯೂರಪ್ಪನವರಿಗೆ ಕಂಳಕ ತಂದ ವ್ಯಕ್ತಿ ಬಿ ವೈ ವಿಜಯೇಂದ್ರ : ಅಶ್ವಿನ್ ಪಾಟೀಲ್

ಶಿಕಾರಿಪುರ ಪಟ್ಟಣ ಪತ್ರಿಕಾ‌ ಭವನದಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡರ ಸ್ವಾಭಿಮಾನಿ ಅಭಿಮಾನಿ ಬಳಗದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ‌‌ ಅಶ್ವಿನ್‌ ಪಾಟೀಲ್‌ ಮಾತನಾಡಿದರು.

ಶಿಕಾರಿಪುರ ತಾಲೂಕಿನಲ್ಲಿ ಯಡಿಯೂರಪ್ಪನವರನ್ನು‌ ಲಿಂಗಾಯತ ಸಮಾಜ‌‌ದ ನಾಯಕನೆಂದು ಮತ ನೀಡಿ ಆರ್ಶಿವಾದ ಮಾಡಿದ್ದೇವೆ ಬಿಜೆಪಿಯಲ್ಲಿ ಅಟಲ್ ಜೀ, ಅಡ್ವಾಣಿ, ಶಾಮ್ ಪ್ರಕಾಶ್ ಮುಖರ್ಜಿ ಅವರಂತಹ ಮಹಾನ್ ನಾಯಕರು ಪಕ್ಷದಲ್ಲಿ ಸಿದ್ದಾಂತ ಗಳನ್ನು ಹಾಕಿಕೊಂಟಿದ್ದಾರೆ ಅದರೆ ಶಿಕಾರಿಪುರದಲ್ಲಿ ವಂಶ ರಾಜಕಾರಣದಿಂದ ಬೇಸತ್ತು ಬಿಜೆಪಿಯ‌ ನಿಷ್ಠಾವಂತ ಕಾರ್ಯಕರ್ತರಾದ ನಾವು ಹೊರಗೆ ಬಂದು ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇವೆ ಎಂದರು.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಒಬ್ಬ ಉತ್ತಮ ನಾಯಕರು ಯಾವುದೇ ಕಳಂಕ ಇಲ್ಲದ ನಾಯಕರಾಗಿ ಇನ್ನೂ ರಾಷ್ಟ್ರಮಟ್ಟದಲ್ಲೂ ಬೆಳೆಯುತ್ತಿದ್ದರು. ಆದರೆ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಅವರ ಹೆಸರಿಗೆ ಕಳಂಕವನ್ನು ತರುವ ಕೆಲಸವನ್ನು ಮಾಡಿದ್ದಾರೆ ಅಲ್ಲದೇ ಜೈಲಿಗೆ ಕೂಡ ಕಳಿಸಿದ್ದಾರೆ ಇಂತಹ ವ್ಯಕ್ತಿಯನ್ನು ತಾಲೂಕಿನ‌‌ ಜನತೆ ಒಪ್ಪುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಹೆಚ್ ಎಸ್ ರವೀಂದ್ರ ಮಾತನಾಡಿ
ದೊಡ್ಡ ದೊಡ್ಡವರ ಹೊಂದಣಿಕೆ‌ಯಿಂದ ಎಸ್ ಪಿ‌ ನಾಗರಾಜ್ ಗೌರರಿಗೆ ಟಿಕೆಟ್ ಸಿಗುವ ಅವಕಾಶ ವಂಚಿತರಾಗಿದ್ದು ಅದರೆ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲುವ ಅಭ್ಯರ್ಥಿ ನಾಗರಾಜ್ ಗೌಡರ ಪರವಾಗಿ ನಿಂತು ಅವರನ್ನು ಗೆಲ್ಲಿಸಬೇಕು‌ ಎಂದು ನಿರ್ಧಾರ ಮಾಡಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ‌‌ ನೀಡಿ ಅವರ ಜೊತೆ‌‌ ನಿಂತಿದ್ದಾರೆ.

ತಾಲೂಕಿನ ಹಳ್ಳಿಗಳಲ್ಲಿ ನಾಗರಾಜ್ ಗೌಡರನ್ನು ಬೆಂಬಲಿಸಿ ದೇಣಿಗೆ ನೀಡುತ್ತಿದ್ದಾರೆ ಅಭೂತಪೂರ್ವ ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ ಅಚ್ಚರಿಯ ರೀತಿಯಲ್ಲಿ ಜನರು ಗೆಲ್ಲಿಸುವ ವಿಶ್ವಾಸ ತೊರಿದ್ದಾರೆ.

ಈ ಮಟ್ಟದ ಜನ ಬೆಂಬಲವನ್ನು ನೋಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ನಾಗರಾಜ್ ಗೌಡ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.ನಾಗರಾಜ್ ಗೌಡರು ಬಿಜೆಪಿಗೆ ಹೊಗುತ್ತಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿಸುವ ಮೂಲಕ‌ ಮತದಾರರ ಗೊಂದಲ‌ ಮೂಡಿಸುವ ಕುತಂತ್ರವನ್ನು ಮಾಡಿದ್ದಾರೆ. ನಾವು ಬಿಜೆಪಿ ಪಕ್ಷಕ್ಕೆ ಸೇರುವುದು ಇರಲಿ ಕನಸ್ಸು ಕೂಡ ಕಾಣುವುದಿಲ್ಲ ಅದ್ದರಿಂದ ಜನರು ಗೊಂದಲಕ್ಕೆ ಒಳಗಾಗಬೇಡಿ ಎಂದರು.

ಬಿ ವೈ ವಿಜಯೇಂದ್ರ ಪರವಾಗಿ ಹೊರ ಜಿಲ್ಲೆ ಗಳಿಂದ ಬಿಲ್ಡರ್ ಗಳು ಗುತ್ತಿಗೆದಾರರ ಭ್ರಷ್ಟಾಚಾರದ ಹಣವನ್ನು ತಂದು‌ ಜನರಿಗೆ‌ ಹಣದ‌‌‌ ಹೊಳೆಯನ್ನು‌ ಹರಿಸುವ ಮೂಲಕ‌ ಚುನಾವಣೆಯಲ್ಲಿ‌ ಗೆಲ್ಲುವ ಉನ್ನಾರ ನಡೆಸಿದ್ದಾರೆ.

ನಾಗರಾಜ್ ಗೌಡ ನಿವೇಶನ ಮಾರಟ ಮಾಡಲು ನಮಗೆ ಅವಕಾಶ‌ ಇಲ್ಲ. ಖರೀದಿಗೆ ಬಂದವರಿಗೆ ತೆಗೆದುಕೊಳ್ಳಲು ಬಿಡುತ್ತಿಲ್ಲ ಇನ್ನೂ ಎರಡು ದಿನಗಳಲ್ಲಿ 2000 ಯುವಕರು ಯುವತಿಯರು ಹೊರ ಜಿಲ್ಲೆಗಳಿಂದ ಬರಲಿದ್ದಾರೆ ಹಣದಿಂದ ತಾಲೂಕಿನ‌ ಜನರನ್ನು ಕೊಂಡುಕೊಳ್ಳುವ ಉನ್ನಾರವನ್ನು ನಡೆಸಿದ್ದಾರೆ.

ಬಿವೈ ವಿಜಯೇಂದ್ರನ‌ ಕೊಡುಗೆ ತಾಲೂಕಿಗೆ ಏನೂ ಇಲ್ಲ ತಾಲೂಕಿನ ಜ್ವಲಂತ ಸಮಸ್ಯೆಗಳಾದ ಯುಜಿಡಿ,ಈ‌ಸ್ವತ್ತು ಭೂಮಿ, ರೈಲ್ವೆ ಯೊಜನೆಗೆ‌ ಭೂಮಿ ನೀಡಿದ ಜನರ ಸಮಸ್ಯೆ, ರಿಂಗ್ ರೋಡ್ ಸಮಸ್ಯೆ, ಬಗರ ಹುಕ್ಕುಂ ಸಮಸ್ಯೆ ಬಗ್ಗೆ ವಿಜಯೇಂದ್ರಗೆ ಜ್ಞಾನವಿಲ್ಲ ಈ ಚುನಾವಣೆ ನಡೆಸುವುದು ವ್ಯಾಪರ ಮಾಡಿಕೊಂಡಿದ್ದಾರೆ ಅದ್ದರಿಂದ ತಾಲೂಕಿನ ಮಗ ಎಸ್ ಪಿ ನಾಗರಾಜ್ ಗೌಡರಿಗೆ ಜನರು ಆರ್ಶಿವಾದ ಮಾಡಬೇಕು ಹೆಚ್ಚಿನ ಮತದಿಂದ ಗೆಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ನಾಗರಾಜ್ ಗೌಡರ ಸ್ವಾಭಿಮಾನಿ ಬಳಗದ ಡಿ ಹೆಚ್ ಈಶ್ವರಪ್ಪ, ಅಶ್ವಿನ್ ,ಪಿಂಟು‌ಸಾಬ್ ಶಿವು ಹುಲ್ಮಾರ್, ಸತೀಶ್, ಮುಕ್ತಿಯರ್, ಜಿಯುಉಲ್ಲಾ. ಮುನಿಯಪ್ಪ ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!