ಬಿ ಎಸ್ ವೈ ಆಪ್ತರಾಗಿದ್ದ ದಿ. ಎಸ್ ಪಿ ಶಿವಕುಮಾರ್ ನಿವಾಸಕ್ಕೆ ಬಿ ವೈ ವಿಜಯೇಂದ್ರ ಭೇಟಿ

ಬಿ ಎಸ್ ವೈ ಆಪ್ತರಾಗಿದ್ದ ದಿ. ಎಸ್ ಪಿ ಶಿವಕುಮಾರ್ ನಿವಾಸಕ್ಕೆ ಬಿ ವೈ ವಿಜಯೇಂದ್ರ ಭೇಟಿ

ಶಿಕಾರಿಪುರ ಪಟ್ಟಣದ ಕಾನೂರು ಹೊಸಕೇರಿಯ ದಿವಂಗತ ಎಸ್ ಪಿ ಶಿವಕುಮಾರ್ ನಿವಾಸಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ನೀಡಿ ಕುಟುಂಬದೊಂದಿಗೆ ಸಮಾಲೋಚನೆ ನಡೆಸಿದರು.

ಶಿಕಾರಿಪುರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಅತ್ಯಪ್ತರು ಅವರ ಬಲಗೈ ಎಂದು ಕರೆಸಿಕೊಳ್ಳುತ್ತಿದ್ದ ದಿವಂಗತ ಎಸ್ ಪಿ ಶಿವಕುಮಾರ್ ಅವರ ನಿವಾಸದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಬುಧವಾರ ಬೆಳಗ್ಗೆ ಭೇಟಿ ನೀಡಿ ಬೆಳಗಿನ ಉಪಹಾರವನ್ನು ಸೇವಿಸಿದರು.

ಈ ಸಂದರ್ಭದಲ್ಲಿ ದಿ.ಎಸ್ ಪಿ ಶಿವಕುಮಾರ್ ಅವರ ಪತ್ರ ರಾಘವೇಂದ್ರ ಎಸ್ ಎಸ್ ಮಾಜಿ ,‌ಎಂಐಡಿಬಿ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ, ಪುರಸಭಾ ಸದಸ್ಯರಾದ ಟಿಎಸ್ ಮೋಹನ್, ಪುರಸಭಾ ಅಧ್ಯಕ್ಷರ ರೇಖಾಬಾಯಿ, ತಾಲೂಕ್ ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಪುರಸಭಾ ಮಾಜಿ ಅಧ್ಯಕ್ಷ ಲಕ್ಷ್ಮಿ ಮಾಲಿಂಗಪ್ಪ, ಸದಸ್ಯರಾದ ಪ್ರಶಾಂತ್ ಜಿನಳ್ಳಿ ಗುರುರಾಜ ಜಗತಾಪ್ ಸೇರಿದಂತೆ ಅನೇಕ‌ ಮುಖಂಡರು ಕಾರ್ಯಕರ್ತರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!