ಶಿಕಾರಿಪುರ: ಆರ್ ಪ್ರಸನ್ನ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ವಿಲ್ ಚೇರ್ ವಿತರಣೆ

ಶಿಕಾರಿಪುರ: ಆರ್ ಪ್ರಸನ್ನ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ವಿಲ್ ಚೇರ್ ವಿತರಣೆ

ಶಿಕಾರಿಪುರ: ಮಾಜಿ ಎಂಎಲ್ ಸಿ ಆರ್ ಪ್ರಸನ್ನಕುಮಾರ್ ಅವರ ಜನ್ಮದಿನದ ಅಂಗವಾಗಿ ಉಳ್ಳಿ ಫೌಂಡೇಶನ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳಿಗೆ ಅನುಕೂಲವಾಗುವ ಸಲುವಾಗಿ ವೀಲ್ ಚೇರನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಿ ಫೌಂಡೇಶನ್ ನ ಅಧ್ಯಕ್ಷರಾದ ಉಳ್ಳಿ ದರ್ಶನ್ ಶಿಕಾರಿಪುರಕ್ಕೆ ಆರ್.ಪ್ರಸನ್ನ ಕುಮಾರ್ ರವರ ಕೊಡುಗೆ ಅಪಾರವಾಗಿದ್ದು, ಅವರ ಹುಟ್ಟು ಹಬ್ಬದ ಪ್ರಯುಕ್ತ ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಗೆ ಸಾಕಷ್ಟು ರೋಗಿಗಳು ಪ್ರತಿನಿತ್ಯ ಚಿಕಿತ್ಸೆಗಾಗಿ ಬರುತ್ತಿದ್ದು ಅವರಿಗೆ ಸಹಾಯವಾಗಲು ವೀಲ್ ಚೇರ್ ಅನ್ನು ನೀಡುವ ಮೂಲಕ ನಮ್ಮ ನಾಯಕರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ಆಸ್ಪತ್ರೆಯ ಸಿಬ್ಬಂದಿಗಳು, ರೋಗಿಗಳಿಗೆ ಈ ಸೌಲಭ್ಯವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಣಿ ಮಾಲತೇಶ್ ರವರು ಮಾತನಾಡಿ ಆರ್ ಪ್ರಸನ್ನಕುಮಾರ್ ರವರು ಶಿಕಾರಿಪುರ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಆ ದೇವರು ಅವರಿಗೆ ಆಯುರಾರೋಗ್ಯ ಆಯಸ್ಸು ನೀಡಲಿ, ಇನ್ನೂ ಹೆಚ್ಚಿನ ಅಧಿಕಾರ ಅವರಿಗೆ ದೊರಕಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಕಸಬಾ ಬ್ಯಾಂಕ್ ನ ನಿರ್ದೇಶಕರಾದ ಬಡಗಿ ಪಾಲಾಕ್ಷಪ್ಪ, ಕಿಸಾನ್ ಸೆಲ್ ಅಧ್ಯಕ್ಷರಾದ ದಯಾನಂದ್, ಎಪಿಎಂಸಿಯ ನಿರ್ದೇಶಕರಾದ ನಗರದ ರವಿ ಕಿರಣ್ ರವರು, ಬುಡೇನ್ ಖಾನ್ , ಗಣೇಶ್ ಕೆಂಗಟ್ಟೆ, ಸಂತೋಷ್ ಮಡಿವಾಳ್, ಜುನೈದ್ ಅಪ್ಸರ್, ಸುಹಾಸ್, ನಾಗರಾಜ್, ದ್ವಾರಕೀಶ್ ಮುಂತಾದ ಮುಖಂಡರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!