ಶಿಕಾರಿಪುರ: ಜಕ್ಕ‌ನಹಳ್ಳಿ ಗ್ರಾಮದ ಬಳಿ ಬೊಲೆರೋ-ಬೈಕ್ ನಡುವೆ ಡಿಕ್ಕಿ ಇಬ್ಬರ ಸಾವು

ಶಿಕಾರಿಪುರ: ಜಕ್ಕ‌ನಹಳ್ಳಿ ಗ್ರಾಮದ ಬಳಿ ಬೊಲೆರೋ-ಬೈಕ್ ನಡುವೆ ಡಿಕ್ಕಿ ಇಬ್ಬರ ಸಾವು

ಶಿಕಾರಿಪುರ: ತಾಲೂಕಿನ ಜಕ್ಕನಹಳ್ಳಿ ಸಮೀಪ ಬೊಲೇರೋ, ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ವ್ಯಕ್ತಿಗಳು ಮೃತಪಟ್ಟ ದುರ್ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಸಂತೋಷ್ (26) ಅಪಘಾತ ನಡೆದ ಸ್ಥಳದಲ್ಲಿ ಮೃತಪಟ್ಟ ಯುವಕ. ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಈತ ಶಾಲಾ ವಾಹನ ಚಾಲಕನಾಗಿದ್ದ ಅಕ್ಕನ ಮನೆ ಕರ್ನಲ್ಲಿಯಿಂದ ಊರಿಗೆ ವಾಪಸ್ ಬರುತ್ತಿರುವಾಗ ದುರ್ಘಟನೆ ನಡೆದಿದೆ.

ಕೆರೆಬಸಪ್ಪ(82) ಅಪಘಾತದಲ್ಲಿ ಗಾಯಗೊಂಡು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮೃತರು ಪಟ್ಟಣದ ರೇಣುಕಾ ಟ್ರಾಕ್ಟರ್ ಮಾಲೀಕ ಬಸವರಾಜ್ ಅವರ ತಂದೆ. ಅದೇ ವಾಹನದಲ್ಲಿದ್ದ ತಾಯಿ ಹುಚ್ಚಮ್ಮ, ಮೊಮ್ಮಗ ದೀಕ್ಷಿತ್ ಗಾಯಗೊಂಡಿದ್ದು ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರಾಳಕೊಪ್ಪ ಕಡೆಗೆ ಬೊಲೆರೋ ವಾಹನದಲ್ಲಿದ್ದ ಅವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ ಈ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!