ತುಪ್ಪ ಸೇವನೆ ಮಾಡದಿರುವುದೇ ರಕ್ತದೊತ್ತಡಕ್ಕೆ ಕಾರಣ…?

ತುಪ್ಪ ಸೇವನೆ ಮಾಡದಿರುವುದೇ ರಕ್ತದೊತ್ತಡಕ್ಕೆ ಕಾರಣ…?

ಪ್ರಶ್ನೆ:
Hello sir..
ನಾನು ನಿಮ್ಮ ಆಸ್ಪತ್ರೆ ರಹಿತ ಜೀವನ telegram ಚಾನೆಲ್ ನ ನಿತ್ಯ ಓದುಗಾರ ಹಾಗು ಅದರ ಅನುಸರಣೆಗಾರ…
ನಿಮ್ಮ ಅನೇಕ ಆರೋಗ್ಯ ಸಲಹೆಗಳನ್ನು ಪಾಲಿಸಿದ ನಂತರ ನನ್ನ ಹೈ ಬಿ.ಪಿ ತಹಬದಿಗೆ ಬಂದಿದೆ…
Telmisartan ಮಾತ್ರೆಗೆ 2 ವರ್ಷ ದಿಂದ ಒಗ್ಗಿಕೊಳ್ಳುವ ಹಾಗೇ ಈ ಆಸ್ಪತ್ರೆಗಳು ಮಾಡಿದವು. ಈಗ 10 mg ಮಾತ್ರ ತೆಗೆದುಕೊಳ್ಳುತ್ತೀದ್ದೇನೆ…


ಬಿ.ಪಿ. ಬಂದ ನಂತರ ತೂಕವನ್ನು 86kg ಇಂದ 73kg ಗೆ ಇಳಿಸಿದೆ. ಅದರೆ ಇತ್ತೀಚೆಗೆ ದೇಹವು ಬೇಗ ಆಯಾಸಗೂಳ್ಳುತ್ತದೆ…
ಶುದ್ಧ ದೇಸಿ ತುಪ್ಪದ ಮಹತ್ವವನ್ನು ಆಸತ್ರೇ ರಹಿತ ಜೀವನ ಸರಣಿ ಇಂದ ತಿಳಿದ ನಂತರ ಅದನ್ನು ಸೆವೀಸಬೇಕೆಂದು ನಿರ್ಧರಿಸಿದ್ದೇನೆ…
ಬಿ.ಪಿ. ಇರುವುದರಿಂದ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದೇ ಎಂದು ನಿಮ್ಮಿಂದ ತಿಳಿಯಲು ಬಯಸುತ್ತಿದ್ದೇನೆ…
ಹಾಗು ನಿಮ್ಮ ಉತ್ತರಕ್ಕಾಗಿ ಎದುರು ನೋಡುತ್ತಿದ್ದೇನೆ….

ಧನ್ಯವಾದಗಳು…

  • Dharmendra P Ram

ಉತ್ತರ:
• ರಕ್ತದೊತ್ತಡ ಇರುವವರು ದೇಸೀ ಹಸುವಿನ ಶುದ್ಧ ತುಪ್ಪವನ್ನು ನಿತ್ಯವೂ ಬಳಸಬಹುದು.‌

ಹಾಗೆಯೇ,
ನಿತ್ಯವೂ ಬೆವರು ಬರುವಂತೆ ವ್ಯಾಯಾಮ‌ ಮಾಡುವುದು.

ಉದರದಲ್ಲಿ ಗ್ಯಾಸ್ ಉಂಟಾಗದಂತೆ ನೋಡಿಕೊಂಡು,

ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಸಾಕು

ಇನ್ನು ಆರು ತಿಂಗಳಲ್ಲಿ ಪೂರ್ಣ ಗುಣವಾಗುತ್ತದೆ.
••••••••••••••••••••
ವಿವರಣೆ:

ರಕ್ತದೊತ್ತಡದಲ್ಲಿ ಯಾವ ತುಪ್ಪ ಅಯೋಗ್ಯ?:
ಆತ್ಮೀಯರೇ,
ಅಂಗಡಿಯಲ್ಲಿ ಸಿಗುವ ಸಿದ್ಧ ತುಪ್ಪ ಎಂದಿಗೂ ಯೋಗ್ಯವಲ್ಲ, ಅದನ್ನು ತುಪ್ಪ ಎನ್ನುವ ಬದಲು ಹಾಲಿನ ಕೊಬ್ಬು ಎನ್ನಬಹುದು.

ಸಂಸ್ಕರಿತ ತುಪ್ಪ ಎಂದರೆ, ಹಾಲು ಮೊಸರಾಗಿ, ಮೊಸರು ಮಜ್ಜಿಗೆ ಬೆಣ್ಣೆಯಾಗಿ, ಕಾಯಿಸಿ ತೆಗೆದರೆ ಬರುವ ಸಾರ ಅಂಶವಾದರೆ ಮಾತ್ರ ತುಪ್ಪ.
Milk fat… ಇದು ತುಪ್ಪವಲ್ಲ ಹಾಲಿನ‌ಕೊಬ್ಬು
ಮತ್ತು
ಇಂತಹ ಹಾಲಿನ ಕೊಬ್ಬನ್ನು ಪರೀಕ್ಷೆಗೆ ಒಳಪಡಿಸಿ ಅದು ಕೊಬ್ಬನ್ನು ಹೆಚ್ಚಿಸುತ್ತದೆ ಎಂಬ ಪುರಾವೆಯನ್ನು ಹಿಡಿದು, ಸಂಸ್ಕರಿತ ಶುದ್ಧ ದೇಸೀ ತುಪ್ಪ ತಿನ್ನದಂತೆ ಮಾಡಿರುವುದೇ ರಕ್ತದೊತ್ತಡ ಹೆಚ್ಚಲು ಕಾರಣ.

√ ಶುದ್ಧ ತುಪ್ಪ ಸೇವನೆ ರಕ್ತದೊತ್ತಡ ಗುಣಪಡಿಸಲು ಹೇಗೆ ಸಹಾಯಕ?:
ರಕ್ತನಾಳಗಳ ಗಡುಸುತನವೇ BP ಎನುವುದು ಎಲ್ಲರ ಮತದಂತೆಯೂ ಸತ್ಯ. ಅದರ ಪರಿಹಾರ ಎಂದರೆ ರಕ್ತನಾಳಗಳನ್ನು ಮೃದು ಮತ್ತು ದೃಢಗೊಳಿಸಬೇಕು, ಆಗ ಅದು ಶಾಶ್ವತ ಪರಿಹಾರ ಆಗುತ್ತದೆ.

ರಕ್ತನಾಳಗಳನ್ನು ಮೃದುಗೊಳಿಸಲು ಶುದ್ಧ ದೇಸೀ ಹಸುವಿನ ಶುದ್ಧ ತುಪ್ಪ ಸರ್ವದಾ ಶ್ರೇಷ್ಠ.
ರಕ್ತನಾಳಗಳ ದೃಢತೆಗೆ, ಬೆವರು ಬರುವವರೆಗೆ ನಿತ್ಯವೂ ಮಾಡುವ ಶಾರೀರಿಕ ವ್ಯಾಯಾಮ ಅತ್ಯಂತ ಶ್ರೇಷ್ಠ.

ಹಾಗಾಗಿ,
ಯಾವುದೇ ಒಂದು ಆಹಾರ ಒಳ್ಳೆಯದೆಂದು ಕೇವಲ ಸೇವನೆ ಮಾಡಿದರೆ ಖಂಡಿತಾ ಲಾಭವಿಲ್ಲ, ಅದನ್ನು ಲಾಭದಾಯಕ ಮಾಡಿಕೊಳ್ಳಬೇಕೆಂದರೆ ಜೊತೆಗೆ ಕಲಸ ಮಾಡಿ ಬೆವರು ಸುರಿಸಬೇಕಾದುದು ಅತ್ಯಂತ ಅನಿವಾರ್ಯ

8792290274
9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴

Admin

Leave a Reply

Your email address will not be published. Required fields are marked *

error: Content is protected !!