ಚಹಾ ಮತ್ತು ಕಾಫಿಗಳು ಜೀವನದ ಉತ್ಸಾಹವನ್ನು ಶಾಶ್ವತವಾಗಿ ಕಳೆಯುತ್ತವೆ..!
ಸಂಕ್ಷಿಪ್ತ ಸಾರಾಂಶ:
“ಚಹಾ ಮತ್ತು ಕಾಫಿಗಳಲ್ಲಿ ಸ್ವಂತ ಶಕ್ತಿ ಇಲ್ಲದಿದ್ದರೂ ಕುಡಿದ ತಕ್ಷಣ ಉತ್ಸಾಹ, ಉಲ್ಲಾಸಗಳು ಬರುವುದು ಅವುಗಳ ಉತ್ತೇಜಕ ಗುಣದಿಂದ. ಈ ಗುಣಗಳು ನಮ್ಮ ಮೂಳೆ ಮತ್ತು ಮಜ್ಜೆಯೊಳಗಿನ ಸಾರ ಅಂಶಗಳನ್ನು ಹೊರಹಾಕಿ ಶರೀರಕ್ಕೆ ಉತ್ಸಾಹವನ್ನು ತುಂಬುತ್ತವೆ. ಇದರಿಂದ ನಮ್ಮ ಆರೋಗ್ಯದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೇವೆ…”
ಇದೇನಿದು ವೈದ್ಯರು ಹೀಗೆ ಹೇಳುತ್ತಿದ್ದಾರೆ — ಎಷ್ಟೋ ಜನರಿಗೆ ಚಹಾ ಅಥವಾ ಕಾಫಿ ಕುಡಿಯದಿದ್ದರೆ ಮನಸ್ಸೇ ಓಡಲ್ಲ, ಬೆಳಿಗ್ಗೆ ಮಲಪ್ರವೃತ್ತಿ ಆಗಲ್ಲ, ಅತ್ಯಂತ ದಾರುಣವಾಗಿ ತಲೆನೋವು ಬರುತ್ತದೆ, ಮನೆಗೆಲಸ ಸಾಧ್ಯವೇ ಇಲ್ಲ, ಆಫೀಸ್‌ನಲ್ಲಿ ಬರೀ ಎಡವಟ್ಟುಗಳೇ ಆಗುತ್ತವೆ… 🤔
ಒಂದು ಚಹಾ/ಕಾಫಿ ಎಷ್ಟೆಲ್ಲಾ ಕೆಲಸಗಳನ್ನು ಮಾಡಿಸುತ್ತದೆ, ಇಂತದ್ದನ್ನು ಒಳ್ಳೆಯದಲ್ಲ ಎನ್ನುತ್ತಾರಲ್ಲ ಎಂದು ಆಶ್ಚರ್ಯ ಹಲವರಿಗೆ, ಅಲ್ಲವೇ? ಮುಂದೆ ಓದಿ…
ನಿಮ್ಮ ಈಗಿನ ಈ ಅನುಭವವನ್ನು ನಿತ್ಯವೂ ಸಾಕಷ್ಟು ಚಹಾ/ಕಾಫಿ ಕುಡಿಯುತ್ತಿದ್ದ 50-60 ವರ್ಷದ ಹಿರಿಯರ ಅನುಭವಗಳೊಂದಿಗೆ ತಾಳೆ ನೋಡಿಕೊಳ್ಳಿ…
ಹಿಂದೆ ತಮ್ಮ ಹರೆಯದಿಂದಲೂ ಯಥೇಚ್ಛವಾಗಿ ಚಹಾ/ಕಾಫಿ ಕುಡಿದ ಆ 50-60 ವರ್ಷದ ಹಿರಿಯರು ಈಗ ಪಡುತ್ತಿರುವ ಈ ಕೆಳಗೆ ಹೆಸರಿಸಿದ ಆರೋಗ್ಯದ ದುರವಸ್ಥೆಗಳಿಗೆ ಚಹಾ/ಕಾಫಿಯ ಚಟದ ಹೊರತಾಗಿ ಬೇರೆ ಕಾರಣ ಸಿಗುವುದೇ ಇಲ್ಲ!! ಇದ್ದರೆ ಹುಡುಕಿಕೊಡಿ ನೋಡೋಣ…
ನಮ್ಮ ಈ 21 ವರ್ಷಗಳ ವೈದ್ಯಕೀಯ ಅನುಭವದಲ್ಲಿ ಸಾಕಷ್ಟು ಚಿಕಿತ್ಸೆ ಮಾಡಿರುವುದೇ ಮೈಗ್ರೇನ್ ತಲೆನೋವಿನ ರೋಗಿಗಳನ್ನು….! ಅಲ್ಲಿಂದ ಆರಂಭವಾಗಿದ್ದ ಈ ರೋಗವೆಂಬ ಗಿಡ ಚಿಗುರು ಸ್ತ್ರೀಯರಲ್ಲಿ ಮುಟ್ಟು ನಿಂತ ತಕ್ಷಣ ಆ ತಲೆನೋವು ಮಾಯವಾಗಿ ಅವರ ಮುಂದಿನ ಸಂಪೂರ್ಣ ಜೀವನವನ್ನು ನರಕದಂತಹ ದಾರುಣ ಅವಸ್ಥೆಗೆ ತಳ್ಳಿಬಿಡುತ್ತದೆ…
ಅನುಭವಿಸುತ್ತಿರುವ ಆರೋಗ್ಯದ ದುರವಸ್ಥೆಗಳು:
• ಮೂಳೆ ಸವೆತದಿಂದ ಮನೆಯ ಹೊರಗೆ ಕಾಲಿಡಲು ಸಾಧ್ಯವಾಗದು…
• ಮಧುಮೇಹ — ಏನೇ ಇನ್ಸುಲಿನ್ ಕೊಟ್ಟರೂ ನಿಯಂತ್ರಣಕ್ಕೆ ಬಾರದು…
• ಬಿಪಿ ಹೆಚ್ಚುವುದು, ಪಾರ್ಶ್ವವಾಯು ಬಾಧಿಸುವುದು…
• ನರಗಳ ಸಂವೇದನೆ ಹಾಳಾಗಿರುವುದು…
• ಹೈಪೋಥೈರಾಯ್ಡಿಸಮ್ ಬಾಧಿಸುತ್ತಿದೆ…
• ರಕ್ತೋತ್ಪತ್ತಿ ಕ್ಷೀಣಿಸಿದೆ…
• ಸರ್ವ ಶರೀರವೂ ಉರಿ ಅಥವಾ ತುರಿಕೆಯಿಂದ ಬಾಧಿಸುತ್ತಿದೆ…
• ಶಾಂತವಾಗಿರಬೇಕಾದ ಮನಸ್ಸು ಕ್ಷೋಭೆಗೊಂಡು ಮಾನಸಿಕ ಕಿರಿಕಿರಿಯಂತೂ ತೀವ್ರವಾಗಿದೆ…! 🙄
• ಹೃದ್ರೋಗಕ್ಕೆ 3-4 ಮಾತ್ರೆಗಳ ಸೇವನೆ ನಿರಂತರವಾಗಿದೆ…
• ನಡೆಯಲು ಬ್ಯಾಲೆನ್ಸ್ ಆಗುತ್ತಿಲ್ಲ, ಎಲ್ಲದಕ್ಕೂ ಮಗಳು, ಸೊಸೆ, ಮೊಮ್ಮಕ್ಕಳ ಮೇಲೆ ಅವಲಂಬಿತರಾಗಬೇಕಿದೆ…
• ಕಾಲು ಬಾವುಗಳು ತೊಂದರೆ ಕೊಡುತ್ತಿವೆ…
• ಹತ್ತು ನಿಮಿಷ ನಿಲ್ಲಲೂ ಸಾಧ್ಯವಾಗುತ್ತಿಲ್ಲ…
• ಮನೆಯಲ್ಲಿ ದುಡಿವ ಜನರಿಗೆ ಸಹಾಯ ಮಾಡುವುದಿರಲಿ, ಸ್ವಂತ ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿತರಾಗಿ, ಅವರ ಇಂದಿನ ಅವಸರದ ಜೀವನದಲ್ಲಿ ಅನಿವಾರ್ಯವಾಗಿ ಅವಕೃಪೆಗೆ ಈಡಾಗುತ್ತಿರುವುದು ಸತ್ಯ…
• ಗರ್ಭಾಶಯದ ಫೈಬ್ರಾಯ್ಡ್ ಗಡ್ಡೆಗಳ ಮೂಲ ಇದೇ ಚಹಾ/ಕಾಫಿ!
• ಅಕಾಲದಲ್ಲಿ ಅನಿಯಂತ್ರಿತ ಮುಟ್ಟು ಹೋಗುವುದು…
• ಮರೆವು ಯಥೇಚ್ಛವಾಗಿ ಬಾಧಿಸುವುದು…
• ಮೂತ್ರ ಉರಿ, ಪದೇ ಪದೇ ಮೂತ್ರದ ಸೋಂಕು, ಕೊನೆಗೆ ಡಯಾಬಿಟೀಸ್ ಇಲ್ಕದಿದ್ದರೂ ಕಿಡ್ನಿ ಹಾಳಾಗುವುದು…
• ರಕ್ತಹೀನತೆ ಮತ್ತು ಪಲ್ಮನರಿ ಹೈಪರ್‌ಟೆನ್ಷನ್(PAH) ದಾರುಣವಾಗಿ ಕಾಡುವುದು…
• ವೆರಿಕೋಸ್ ವೇನ್‌ಗಳ ಬಾಧೆ ತೀವ್ರವಾಗಿರುವುದು…
ಚಹಾ/ಕಾಫಿ ಪ್ರಿಯರು ಇವುಗಳಲ್ಲಿ 1 ಅಥವಾ 2 ರಿಂದ ಬಾಧೆಗೊಳಗಾಗಿರುವುದು ಸತ್ಯ. ಕೆಲವರಂತೂ 10-12 ರೀತಿ ತೀವ್ರ ಬಾಧೆಗೊಳಗಾಗಿದ್ದಾರೆ!
ಏನ್ ಡಾಕ್ಟ್ರೇ ಇರೋ-ಬರೋ ಎಲ್ಲಾ ಕಾಯಿಲೆಗಳಿಗೂ ಚಹಾ/ಕಾಫಿಗಳನ್ನೇ ಕಾರಣವಾಗಿ ಕೊಟ್ಟಿದ್ದೀರಲ್ಲ ಎನ್ನಿಸಿದರೆ ಮುಂದೆ ಓದಿ…
ಮೇಲಿನ ರೋಗಗಳು 85-90 ವರ್ಷದಲ್ಲಿ ಕಾಡಿದರೆ ವಯೋಸಹಜ ಎನ್ನಬಹುದು, ನಾವಿಲ್ಲಿ ಜೀವನ ದಾರುಣ ಎನ್ನುತ್ತಿರುವುದು ಮುಟ್ಟು ನಿಲ್ಲುವ ಸಮಯವನ್ನು ಆಧಾರವಾಗಿಟ್ಟುಕೊಂಡು, ಅಂದರೆ 45-55ರ ಆಸುಪಾಸಿನ ಮಹಿಳೆಯರ ದುರವಸ್ಥೆಯನ್ನು ನೋಡಿ ಹೇಳುತ್ತಿದ್ದೇವೆ. ಮುಂದಿನ ಜೀವನ ಅಂದರೆ ಬರೋಬ್ಬರಿ ಅರ್ಧ ಆಯಸ್ಸು ಅಲ್ಲವೇ?
50 ರಿಂದ ಆರಂಭವಾದ ಈ ಅವಸ್ಥೆಗಳು ಎಂಭತ್ತೋ, ತೊಂಭತ್ತೋ, ನೂರೋ ಅಂತೂ ಆಯುಷ್ಯ ಮುಗಿವ ತನಕ ಅನುಭವಿಸಬೇಕಲ್ಲ!!
ಇದನ್ನೇ ಇಲ್ಲಿ ನಾವು ನರಕಯಾತನೆ ಎಂದು ಒತ್ತಿ ಹೇಳುತ್ತಿರುವುದು…
ಅದು ಹೇಗೆ ಚಹಾ/ಕಾಫಿಗಳೇ ಇಷ್ಟಕ್ಕೆಲ್ಲಾ ಕಾರಣ? ಎಂಬ ಸಂಶಯವೇ?
ವಿಶೇಷ ವಿವರಣೆಗಳನ್ನು ನಾಳೆ ನೋಡೋಣ…
ನಿಮ್ಮ ಸಂಪರ್ಕಕ್ಕೆ:
📞 8792290274
9148702645
ವಿಶ್ವ ಹೃದಯಾಶೀರ್ವಾದವಂ ಬಯಸಿ
ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research