ವೈರಸ್ ನಿವಾರಣೆಗೆ ಸರಳ, ಸಮಯೋಚಿತ, ಪರಿಣಾಮಕಾರೀ ಚಿಕಿತ್ಸೆ..!

ವೈರಸ್ ನಿವಾರಣೆಗೆ ಸರಳ, ಸಮಯೋಚಿತ, ಪರಿಣಾಮಕಾರೀ ಚಿಕಿತ್ಸೆ..!

ಆರೋಗ್ಯದ ಸ್ವಾವಲಂಬನೆ, ಅಂದರೆ ಔಷಧ ರಹಿತ ಜೀವನ ನಮ್ಮದಾಗಬೇಕು.

ವೈರಸ್ ನಿವಾರಣೆಗೆ ಸರಳ, ಸಮಯೋಚಿತ, ಪರಿಣಾಮಕಾರಿ ಚಿಕಿತ್ಸೆ ಇದೆ-
• ಇದಕ್ಕೆ ಹಣದ ಖರ್ಚು ಕಡಿಮೆ, ಕೆಲವೊಮ್ಮೆ ಖರ್ಚೇ ಇಲ್ಲ…!
• ಅತ್ಯಂತ ಪರಿಣಾಮಕಾರಿ
• ಅಡ್ಡ ಪರಿಣಾಮ ಇಲ್ಲದ್ದು
• ದುಷ್ಪರಿಣಾಮ‌ ಬೀರದು.

ಪರಿಣಾಮಕಾರೀ ಚಿಕಿತ್ಸೆಯ ಗುಟ್ಟು ಏನೆಂದರೆ, ವೈರಸ್ ಬೆಳೆಯಲು ಶರೀರದಲ್ಲಿ ಈ ನಾಲ್ಕು ಅಂಶಗಳನ್ನು ಕೊಡದಿರುವುದೇ ಆ ಚಿಕಿತ್ಸೆ-

 1. ಆಹಾರ
 2. ನೀರು
 3. ಗಾಳಿ
 4. ಸ್ಥಳಾವಕಾಶ

ಇವುಗಳ ಸಹಕಾರ ಇಲ್ಲದೇ ಯಾವ ಜೀವಿತಾನೇ ಶರೀರ ಸೇರುತ್ತದೆ? ಅದನ್ನು ಕೊಲ್ಲಲು ಹೋಗಿ ನಮ್ಮನ್ನೇ ಕೊಂದುಕೊಳ್ಳುತ್ತಿರುವುದು ಸರಿಯಲ್ಲ.

ಸರಳ ಚಿಕಿತ್ಸೆಗಳು:

 1. ವೈರಸ್‌ಗೆ ಬೇಕಾದ ಆಹಾರ ಕೊಡಬೇಡಿ:
  ನಮ್ಮ ನಿತ್ಯ ಚಟುವಟಿಕೆಗೆ ಶಕ್ತಿ ಒದಗಿಸಲು ಆಹಾರ ಬೇಕು, ಅದರ ಕಾಲ ಮತ್ತು ಪ್ರಮಾಣವನ್ನು ಹೇಳುವುದೇ ನಮ್ಮ “ಹಸಿವು”
  ಹಸಿವಿಗೆ ವಿರುದ್ಧವಾಗಿ, ಕೆಲಸದಿಂದ ಶಕ್ತಿ ವ್ಯಯಿಸದ ಹೊರತು ಹೆಚ್ಚಿನ ಪ್ರಮಾಣದ ಆಹಾರ ಸೇವನೆಯು ನಮಗೆ ಭಾರ ಮತ್ತು ವೈರಸ್‌ಗೆ ಆಹಾರ.
  ಅತ್ಯಂತ ಶಕ್ತಿಯುತ ಆಹಾರಗಳಾದ ಕೊಬ್ಬು, ಮಾಂಸ, ಸಿಹಿಗಳನ್ನು ಅತ್ಯಂತ ಕಡಿಮೆ ಅಥವಾ ಸಧ್ಯಕ್ಕೆ ಇಲ್ಲವಾಗಿಸಿರಿ.
  ಹಾಗೆಯೇ, ನಿತ್ಯದ ಆಹಾರದಲ್ಲಿ-
  ನಮ್ಮ ಅವಶ್ಯಕತೆಯ 80% ಅಥವಾ 90% ಸೇವಿಸಿ. ಇದು ಕೇವಲ ವೈರಸ್‌ಗೆ ಮಾತ್ರವಲ್ಲ ನಮ್ಮಲ್ಲಿರಬಹುದಾದ ಮಧುಮೇಹ, ಬಿ.ಪಿ, ಕೊಲೆಸ್ಟರಾಲ್‌, ಥೈರಾಯ್ಡ್, ಮೂಲವ್ಯಾಧಿ, ಸ್ಥೌಲ್ಯ ಮುಂತಾದವುಗಳನ್ನೂ ನಿಯಂತ್ರಿಸಬಲ್ಲದು.
 2. ನೀರು ಕೊಡಬೇಡಿ:
  ವೈರಾಣು ಮೊದಲುಗೊಂಡು ಯಾವುದೇ ಜೀವಿ ಬೆಳೆಯಲು ತೇವಾಂಶ ಅತ್ಯಂತ ಮುಖ್ಯ, ಅದಕ್ಕೆ ಬೇಕಾದ ತೇವಾಂಶ ಎಲ್ಲಿದೆ ಎಂದರೆ. “ಹಿಂದಿನ ದಿನದ ಅಥವಾ ಮತ್ತೆ ಮರುಬಿಸಿಮಾಡಿದ ಸಂಬಾರು, ಪಲ್ಯ ಮುಂತಾದ ಆಹಾರ ಪದಾರ್ಥಗಳಲ್ಲಿ ಅಡಗಿದೆ.”
 1. ಇಂತಹ ಪದಾರ್ಥಗಳನ್ನು ಫ್ರಿಜ಼ರ್‌ನಲ್ಲಿ ಇಟ್ಟು ಬಿಸಿ ಮಾಡಿದರೂ ಹೊರಗೇ ಇಟ್ಟು ಬಿಸಿ ಮಾಡಿದರೂ, ಶರೀರಕ್ಕೆ ಜೀವಜಲ ಅಂದರೆ ಸತ್ವಗುಣ ನಾಶವಾಗುತ್ತದೆ. ಆ ಸ್ಥಳವನ್ನು ದುಷ್ಟ ಜಲದ ರೂಪದಲ್ಲಿ ತಮಸ್ಸು ಬೆಳೆಯುತ್ತದೆ.
  ಸತ್ವಗುಣದ ಜಲ ಜೀವಕೋಶಗಳಿಗೆ ಪ್ರಾಣಕಾರಕವಾದರೆ ತಮ ಪ್ರಧಾನ ಜಲ ಪ್ರಾಣನಾಶಕವಾಗಿ ಪರಿಣಾಮ ಬೀರುತ್ತದೆ.
  ತಮಸ್ಸು ಕ್ರಿಮಿ ಕೀಟಗಳಿಗೆ ಸರ್ವರೀತಿಯಿಂದಲೂ ಸಹಾಯಮಾಡುತ್ತದೆ.
  ಹಾಗಾಗಿ,
  ಪುನಃ ಬಿಸಿಮಾಡಿದ ಆಹಾರ ಸೇವನೆ ಬೇಡವೇ ಬೇಡ.
 2. ಅದರ ಉಸಿರಾಟಕ್ಕೆ ಗಾಳಿ ಕೊಡಬೇಡಿ:
  ಆಳದ ಉಸಿರಾಟದಿಂದ ಶರೀರದ ಆಮ್ಲಜನಕ ಹೆಚ್ಚಿ ಶಕ್ತಿ ಬಿಡುಗಡೆಯಾಗುತ್ತದೆ ಹಾಗೆಯೇ ಕಶ್ಮಲ ಹೊರಹೋಗುತ್ತದೆ. ಆಳದ ಉಸಿರಾಟಕ್ಕೆ ಕಷ್ಟಪಟ್ಟು ಗಂಟೆಗಟ್ಟಲೆ ಪ್ರಾಣಾಯಾಮ ಮಾಡಬೇಕಿಂದಿಲ್ಲ, ಅದಕ್ಕೆ ತನ್ನದೇ ಆದ ನಿಯಮಗಳಿವೆ, ತಪ್ಪಿದರೆ ಅಪಾಯ ಕೂಡಾ ಇದೆ. ಸರಳ ಪರಿಹಾರ ಎಂದರೆ,
 • ಸೂರ್ಯ ನಮಸ್ಕಾರ
 • ನಿರಂತರ ಮನೆಗೆಲಸ
 • ಹೊಲಗದ್ದೆಗಳ ಕೆಲಸ
 • ಬೆವರು ಬರುವಂತೆ ವ್ಯಾಯಾಮ….
  ಮುಂತಾದವುಗಳಿಂದ ಆಮ್ಲಜನಕ ಸಹಜವಾಗಿ ಶರೀರ ಸೇರುತ್ತದೆ.
  ವೈರಸ್‌ಗೆ ಬೇಕಾದ ಶುಕ್ತಪಾಕ (ಫರ್ಮಂಟೇಷನ್ ಗಾಳಿ)ದ ಗಾಳಿ ಸಿಗುವುದಿಲ್ಲ.
 1. ಸ್ಥಳಾವಕಾಶ ನೀಡಬೇಡಿ:
  ಸ್ಥಳಾವಕಾಶ ಎಂದರೆ, ಜೀವಕೋಶದೊಳಗಣ ಅಜೀರ್ಣ, ಇದು ಕೇವಲ ಉದರಕ್ಕೆ ಸಂಬಂಧಿಸಿಲ್ಲ, ಕೇವಲ ಮಲಬಹಿರ್ಗಮನವೇ ಜೀರ್ಣ ಲಕ್ಷಣವಲ್ಲ. ಅಜೀರ್ಣ ರೋಗಿಯ ಹೊಟ್ಟೆ ಹಸಿಯಬಲ್ಲದು, ಬೇರೆಯವರಿಗಿಂತ ಜೋರಾಗಿಯೂ ಸಂಕಟ ಕೊಡುವಂತೆ ಹಸಿಯಬಹುದು. ತಡೆಯಲು ಸಾಧ್ಯವೇ ಇಲ್ಲದಂತೆ ಬೇಧಿ ಬರಬಹುದು, ಹಾಗಾಗಿ ಹಸಿವು, ಬೇಧಿ ಅಜೀರ್ಣ ಇಲ್ಲ ಎಂದಲ್ಲ.
  ಅಜೀರ್ಣ ಇಲ್ಲವಾದರೆ, ವ್ಯಕ್ತಿ ನಿರಂತರ ಚುರುಕಾಗಿರುತ್ತಾನೆ, ಆಳವಾಗಿ ನಿದ್ದೆ ಮಾಡುತ್ತಾನೆ ಮತ್ತು ಎದ್ದ ತಕ್ಷಣ ಚುರುಕುತನ ಇರುತ್ತದೆ.
  ಇಲ್ಲದಿದ್ದರೆ ಆಳದಲ್ಲಿ ಅಜೀರ್ಣ ಇರುತ್ತದೆ, ಇದನ್ನು ಆಯುರ್ವೇದ “ರಸಶೇಷಾಜೀರ್ಣ” ಎಂದು ಕರೆಯುತ್ತದೆ.

ಈ ಅಜೀರ್ಣ ನಿವಾರಣೆಗಾಗಿ ಕೆಲವು ಗಿಡಮೂಲಿಕೆಗಳ ಕಷಾಯಗಳು
ಶ್ವಾಸಕೋಶ ಆಶ್ರಿತ ಅಜೀರ್ಣ ಪರಿಹರಿಸಲು ಮೂಹೂರ್ತಕ್ಕೆ ಒಮ್ಮೆ ಸೇವಿಸುವ ಶುದ್ಧ ಜೇನು ಮಿಶ್ರಿತ ಔಷಧಗಳು
ಹಾಗೂ
ಗಂಟಲಿನ ಊತದಲ್ಲಿ ವೈರಾಣುವಿಗೆ ಸ್ಥಳ ತಡೆಯಲು ‘ಊತ ನಿವಾರಕ ಗಂಡೂಷ ದ್ರವ್ಯಗಳು’ ಬೇಕಾಗುತ್ತವೆ.

ನಿಮ್ಮಲ್ಲಿ ರಸಶೇಷಾಜೀರ್ಣ ಲಕ್ಷಣಗಳಿಲ್ಲ ಎಂದರೆ, ಮೇಲೆ ಹೇಳಿದ ಲಕ್ಷಣಗಳಿಂದ ಮುಕ್ತರಾಗಿ, ನೀಮ್ಮಲ್ಲಿ ನಿರಂತರ ಉತ್ಸಾಹ ಇದ್ದರೆ ಯಾವ ಔಷಧಿಗಳೂ ಬೇಡ. ಕೇವಲ ಉಳಿದ 4 ನಿಯಮಗಳನ್ನು ಪಾಲಿಸಿದರೆ ಸಾಕು. ನೀವು ಸುರಕ್ಷಿತ.

ಔಷಧಗಳ ಅವಲಂಬನೆಯಿಂದ ದೂರ ಇರೋಣ, ಆರೋಗ್ಯದಲ್ಲಿ ಸ್ವಾವಲಂಬಿಗಳಾಗೋಣ

8792290274
9148702645

ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

🌱ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🌴

Admin

Leave a Reply

Your email address will not be published. Required fields are marked *

error: Content is protected !!