ವೈರಸ್ ಜೋರಾಗಿದೆ ನಿರ್ಲಕ್ಷ್ಯ ಸಲ್ಲ, ವ್ಯಾಕ್ಸೀನ್ ರಕ್ಷಣೆ ನಂಬಿಕೆ ಇಲ್ಲ..!

ವೈರಸ್ ಜೋರಾಗಿದೆ  ನಿರ್ಲಕ್ಷ್ಯ ಸಲ್ಲ, ವ್ಯಾಕ್ಸೀನ್ ರಕ್ಷಣೆ ನಂಬಿಕೆ ಇಲ್ಲ..!

ಆತ್ಮಬಂಧುಗಳೇ,
ಆರೋಗ್ಯದ ವಿಷಯದಲ್ಲಿ ಪೂರ್ಣ ಸ್ವಾವಲಂಬಿಗಳಾಗಿ…

ಆಸ್ಪತ್ರೆ, ಔಷಧಿ, ವೈದ್ಯಕೀಯ ಸೇವೆ ಎಲ್ಲವೂ ಹಣದೊಂದಿಗೆ ಆರೋಗ್ಯವನ್ನೂ ಹಿಂಡುತ್ತಿವೆ. ಇದೊಂದು ಬಹುದೊಡ್ಡ ವ್ಯಾಪಾರವಾಗಿದೆ, ಅಷ್ಟೇ ಅಲ್ಲ ವ್ಯಾಪಾರಕ್ಕಾಗಿ ಮಾನವೀಯತೆಯನ್ನೇ ತೊರೆದು ನಿಂತಿವೆ…

ಒಮಿಕ್ರಾನ್ ಹರಡುವ ವೇಗ ಅತ್ಯಧಿಕವಾಗಿದೆ.

ನಮ್ಮ ದೇಶ ಒಂದರಲ್ಲೇ ಕೊರೋನಾ ಪಾಸಿಟಿವ್‌ಗಳು ದಿನಕ್ಕೆ ನೂರು, ಸಾವಿರ ದಾಟಿ, ಲಕ್ಷ, ಎರಡು ಲಕ್ಷದ ಹತ್ತಿರಕ್ಕೆ ಏರುತ್ತಿದೆ.

ವ್ಯಾಕ್ಸೀನ್ ತೆಗೆದುಕೊಂಡರೂ ಸೋಂಕು ಏಕೆ ಬರುತ್ತದೆ:?

ಕ್ಷಣಕ್ಷಣಕ್ಕೂ ರಚನೆ ಬದಲಾಯಿಸಿ ಅದರಿಂದಲೇ ತನ್ನ ಅಸ್ಥಿತ್ವ ಉಳಿಸಿಕೊಳ್ಳುವುದು ಯಾವುದೇ ವೈರಸ್‌ನ ಮೂಲ ಸ್ವಭಾವ.

ಇಂತಹ ಮೋಡದ ನೆರಳಿನ ಕೆಳಗೆ ಶಾಶ್ವತ ತಂಪನ್ನು ಬಯಸಿ ಬಯಲಿನಲ್ಲಿ ಕುಳಿತಂತಾಗಿದೆ ನಮ್ಮ ಸ್ಥಿತಿ…. 🤔

ಹಿಂದಿನ ವ್ಯಾಕ್ಸೀನ್ ಬಂದಾಗಲೇ ವೈರಸ್ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿತ್ತು, ಸುಮಾರು 7000ಕ್ಕೂ ಹೆಚ್ಚಿನ ಕೊರೋನಾ ವೈರಾಣುವಿನ ಮಾದರಿಗಳಿವೆ, ಇನ್ನೂ ಎಷ್ಟೋ ರೂಪಾಂತರಿಗಳು ಬರಲಿವೆ, ಎಲ್ಲಕ್ಕೂ ಒಂದೊಂದು ವ್ಯಾಕ್ಸೀನ್ ಮಾಡಲು ಅಸಾಧ್ಯ. ಇದು ಕೆಲಸ ಮಾಡುತ್ತದೆ ಎನ್ನುವಷ್ಟರಲ್ಲಿ ಹೊಸ ಹತ್ತು ಅಥವಾ ನೂರೂ ರೂಪಾಂತರವಾಗಿ ಬರುತ್ತವೆ. ಇಂತಹ ಅಸ್ಥಿರ ವೈರಸ್‌ಗೆ ಆ್ಯಂಟಿಡಾಟ್ ತಯಾರಿಸಲು ಅಥವಾ ವ್ಯಾಕ್ಸೀನ್ ತಯಾರಿಸಲು ಅಸಾಧ್ಯ. ಅಷ್ಟೊಂದು ಹಣ ಹಾಕಿ ಸಂಶೋಧನೆ ನಡೆಸಿದ್ದಾರೆ, ಸರಕಾರಗಳ ಸಹಾಯ ಪಡೆದಿವೆ?!! ಎಂದರೆ ಎಲ್ಲವೂ ವ್ಯಾಪಾರಕ್ಕಾಗಿ!!!

ಹೋಗಲಿ, ಈ ವ್ಯಾಕ್ಸೀನ್‌ಗಳು ಸುರಕ್ಷಿತವೇ? ಎಂದರೆ ಖಂಡಿತಾ ಅಲ್ಲ ಎಂದು ಉತ್ತರಿಸಬಹುದು.

ಏಕೆಂದರೆ ಹತ್ತಾರು ವರ್ಷಗಳ ಕಾಲ ವ್ಯಾಕ್ಸೀನ್‌ಗಳು ದೀರ್ಘಕಾಲೀನ ತೊಂದರೆಗಳನ್ನು ತರಬಹುದೇ? ಎಂಬ ಪರೀಕ್ಷೆಗೆ ಒಳಪಡಿಸಿ ಹೊರತರಬೇಕಾದ ವ್ಯಾಕ್ಸೀನ್‌ಗೆ ಈಗ ಕಾಲಾವಕಾಶವೇ ಇಲ್ಲವೆಂಬ ಕಾರಣ ನೀಡಿ, ತುರ್ತು ಅನುಮತಿ ಪಡೆಯುತ್ತಿದ್ದಾರೆ, ಇದರ ಪರಿಣಾಮದ ಬಗ್ಗೆ ಯಾರಿಗೂ ಗೊತ್ತಿಲ್ಲ?!

ವ್ಯಾಕ್ಸೀನ್ ಕಾರ್ಯಶೈಲಿ:
ನಮ್ಮ ಮಜ್ಜೆಯನ್ನೇ ಉಪಯೋಗಿಸಿಕೊಂಡು ಆ್ಯಂಟಿಬಾಡಿ ತಯಾರಿಸಲು ಉತ್ತೇಜಿಸುವ ವ್ಯಾಕ್ಸೀನ್‌ಗಳು, ಮಜ್ಜೆಯ ಶಕ್ತಿಯನ್ನು ಇನ್ನಿಲ್ಲದಂತೆ ಕ್ಷೀಣಗೊಳಿಸುವುದು ಅನಿವಾರ್ಯ!!

ಮಜ್ಜೆಯು ರಕ್ತವನ್ನು ಉತ್ಪತ್ತಿ ಮಾಡುತ್ತದೆ ಎಂದು ನಾವು ಬಲ್ಲೆವು. ಹಾಗೆಯೇ, ರಕ್ತವೇ ನಮ್ಮ ಜೀವನ ಎಂದೂ ಸಹ ನಾವು ಬಲ್ಲೆವು. ಮಜ್ಜೆಯು ಮೂಲ ಜೀವಕೋಶ ಸ್ಥಾನವಾಗಿದ್ದು ಶರೀರದ ಎಲ್ಲಾ ಅವಯವಗಳನ್ನೂ ಮರುಸೃಷ್ಟಿಸಬಲ್ಲದು. ಅಪಾಯದ ಸಂದರ್ಭದಲ್ಲಿ ತನ್ನನ್ನು ತಾನು ಬಳಸಿಕೊಂಡು ಶರೀರವನ್ನು ಬದುಕಿಸಿಕೊಳ್ಳಲು ಅಷ್ಟು ಸಾಮರ್ಥ್ಯವನ್ನು ಪ್ರಕೃತಿ ಕೊಟ್ಟಿದೆ.

ಈಗಾಗಲೇ ಮಜ್ಜೆ ದುರ್ಬಲಗೊಂಡಿದೆ — ಎಚ್ಚರ ಎಚ್ಚರ…

1) ಸಣ್ಣ ಪುಟ್ಟ ಕಾಯಿಲೆಗಳಿಗೆ ಆ್ಯಂಟಿಬಯೋಟಿಕ್ಸ್, ಸ್ಟಿರಾಯ್ಡ್‌ಗಳಂತಹ ತೀಕ್ಷ್ಣ ಔಷಧಗಳ ಪ್ರಯೋಗ ಮಾಡಿ ಮಜ್ಜೆಯನ್ನು ಹಾಳುಮಾಡಲಾಗಿದೆ.
2) ಈ ಎರಡು ವರ್ಷಗಳಲ್ಲಿ, ವೈರಸ್ ದಾಳಿಯಿಂದ ಮಜ್ಜೆ ದುರ್ಬಲಗೊಂಡಿದೆ. ಹಿಂದಿನ‌ ಸೋಂಕಿನಲ್ಲಿ ಎಗ್ಗಿಲ್ಲದೇ ಸ್ಟಿರಾಯ್ಡ್ ಬಳಸಿ ಮಜ್ಜೆಯ ಬುನಾದಿಯವರೆಗೆ ತಲುಪಲಾಗಿದೆ…..
3) ವ್ಯಾಕ್ಸೀನ್ ಮಜ್ಜಾ ಶಕ್ತಿಯನ್ನು ಹೀರಿದೆ.
.
.
ಮುಂದೆ?!!!

ಜೀವನಕ್ಕೆ ಮೂಲವಾದ ಮಜ್ಜೆಯನ್ನು ಸಶಕ್ತಗೊಳಿಸಬೇಕೋ ಅಥವಾ ಈಗಾಗಲೇ ಇರುವ ದುರ್ಬಲ ಮಜ್ಜೆಯನ್ನೇ ಇನ್ನಷ್ಟು ಮತ್ತಷ್ಟು ಕರಗಿಸಬೇಕೋ?

ನಾವು ನೋಡಿದಂತೆ ಇಂದಿನ ಮಕ್ಕಳು, ವಯಸ್ಕರು, ರೋಗದ ತಕ್ಷಣ ತೀವ್ರಬಾಧೆಗೆ ಒಳಗಾಗಲು ಮತ್ತು ದೀರ್ಘಕಾಲೀನ ರೋಗಗಳಿಗೆ ತುತ್ತಾಗಲು ಕಾರಣವೇ ಅವರ ಆಹಾರ ಮತ್ತು ಜೀವನ ಶೈಲಿ. ಯಾರು ನಿತ್ಯವೂ ಒಂದು ಬಾರಿಯಾದರೂ ಹೊಟೆಲ್ ಊಟಕ್ಕೆ ಅವಲಂಬಿತರೋ, ಯಾರು ಬೇಕರಿ, ಜಂಕ್ ತಿನ್ನುತ್ತಾರೋ, ವಿವಿಧ ಜಾಹೀರಾತು ನೋಡಿ ಆರೋಗ್ಯದ ಹೆಸರಿನ ಪೇಯಗಳನ್ನು ಕುಡಿಯುತ್ತಾರೋ ಅಂತವರ ಲಿವರ್ ಮತ್ತು ಮಜ್ಜೆ(ಎರಡೂ ಒಂದೇ ತೆರನಾದ ಸಾಮರ್ಥ್ಯ ಮತ್ತು ಸಂಬಂಧಗಳನ್ನು ಹೊಂದಿವೆ) ಅತ್ಯಂತ ದುರ್ಬಲಗೊಂಡಿವೆ.

ಗಮನಿಸಿ ನೋಡಿ:
ಇಂತವರು, ಸಣ್ಣ ಸೋಂಕಿಗೂ, ಜ್ವರಕ್ಕೂ ಒದ್ದಾಡಿ ಬಿಡುತ್ತಾರೆ, ರಕ್ತ ಬಹಳಷ್ಟು ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಪ್ಲೇಟ್‌ಲೆಟ್‌ಗಳ ಸಂಖ್ಯೆ ಇಳಿದು ಬಿಡುತ್ತದೆ. ಇದೇ ಮಜ್ಜೆ ಮತ್ತು ಯಕೃತ್ ದುರ್ಬಲತೆಯ ಸಂಕೇತ…

ಹಾಗಾಗಿ, ಈಗ ವ್ಯಾಕ್ಸೀನ್ ಅಥವಾ ಸೋಂಕು ಎರಡೂ ಬಹಳ ದುಬಾರಿಯಾಗಿ ಪರಿಣಮಿಸುತ್ತವೆ. ಎರಡರಿಂದಲೂ ರಕ್ಷಿಸಿಕೊಳ್ಳಬೇಕು. ಆದ್ದರಿಂದ,
ಸೋಂಕಿಗೆ ನಿರ್ಲಕ್ಷ್ಯ ಸಲ್ಲದು; ಹಾಗೆಯೇ ವ್ಯಾಕ್ಸೀನ್ ರಕ್ಷಿಸಲು ಆಗದು…

ಇದರ ಬದಲು ಮಜ್ಜೆಯ ಶಕ್ತಿಯನ್ನೇ ವರ್ಧಿಸುವ ಉಪಾಯಗಳಿಗೆ ಏಕೆ ಮೊರೆ ಹೋಗಬಾರದು?

ಅತ್ಯಂತ ಸಮರ್ಥ, ಸಮಯೋಚಿತ ಚಿಕಿತ್ಸೆ:

ವೈರಸ್ ಕೊಲ್ಲಲು ಇರುವ ಸರಳ ಮತ್ತು ಅತ್ಯಂತ ಕ್ಷಮತೆಯಿಂದ ಕೂಡಿದ ಉಪಾಯ ಒಂದೇ ಒಂದು —

ವೈರಸ್ ಬೆಳೆಯಲು ಬೇಕಾದ ಆಹಾರ, ಗಾಳಿ, ನೀರು ಮತ್ತು ಸ್ಥಳ ಈ ನಾಲ್ಕರಲ್ಲಿ ಒಂದನ್ನು ಕೊಡದಿದ್ದರೂ ಅದಕ್ಕೆ ಉಳಿಗಾಲವಿಲ್ಲ. ಅದು ಸಾಯಲೇಬೇಕು ಅಲ್ಲವೇ? ನೀರು ಕೊಡದಿದ್ದರೆ ಹುಲ್ಲು ಸಾಯುತ್ತದೆ, ಅದಕ್ಕೆ ಕಳೆನಾಶಕವನ್ನೇ ಸಿಂಪಡಿಸಬೇಕೇ? ಹಾಗೆಯೇ, ವೈರಸ್ ಕೊಲ್ಲಲು ಔಷಧಗಳೆಂಬ ವಿಷ ಸುರಿದುಕೊಳ್ಳಬೇಕೆ? ವ್ಯಾಕ್ಸೀನ್ ಎಂಬ ಬೆಂಕಿಯಿಂದ ಮಣ್ಣನ್ನೇ ಹುರಿದು ಬಿಡಬೇಕೇ?ಎರಡರಿಂದಲೂ ಶರೀರವೆಂಬ ಭೂಮಿ ಬರಡು ಅಲ್ಲವೇ?

ನಿಮ್ಮ ಸಂಪರ್ಕಕ್ಕೆ:
📞 8792290274
9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research, Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!