ಒಮಿಕ್ರಾನ್ ವೈರಸ್ — ಎಚ್ಚರಿಕೆ ಅತ್ಯಗತ್ಯ..!

ಒಮಿಕ್ರಾನ್ ವೈರಸ್ — ಎಚ್ಚರಿಕೆ ಅತ್ಯಗತ್ಯ..!

ಆತ್ಮಬಂಧುಗಳೇ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ…

ಸಧ್ಯಕ್ಕೆ ಜಗತ್ತಿನಲ್ಲಿ ಸಿಗುತ್ತಿರುವ ವಿವಿಧ ಸಂಶೋಧಕರ, ತಜ್ಞರ, ಆರೋಗ್ಯ ಸಂಸ್ಥೆಗಳ ಹಾಗೂ ವಿವಿಧ ದೇಶಗಳ ಸರಕಾರಗಳು ವ್ಯಕ್ತಪಡಿಸಿದ ಮಾಹಿತಿಗಳೆಲ್ಲವನ್ನೂ ಒಟ್ಟು ಹಾಕಿ ನೋಡಿದರೆ…

…. ಅಪಾಯವನ್ನು ಎದುರಿಸಲು ಸಿದ್ಧರಾಗಿ, ಪ್ರಾಣಾಪಾಯ ಹೆಚ್ಚು ಅಲ್ಲದಿದ್ದರೂ ಬಹುಕಾಲ ಆಸ್ಪತ್ರೆ, ಆಕ್ಸಿಜನ್, ಔಷಧಿ, ನಿಶ್ಯಕ್ತಿ, ಚೈತನ್ಯಹೀನರಾಗಿ ಬಾಳುವಂತಾಗುವ ಎಚ್ಚರಿಕೆಯನ್ನು ಎಲ್ಲರೂ ನೀಡಿದ್ದಾರೆ.

ಒಮಿಕ್ರಾನ್, ಶ್ವಾಸಕೋಶದ ಆಳದವರೆಗೆ ತಲುಪುವುದಾದರೂ, ಅಲ್ಲಿ ಜೀವಕೋಶಗಳೊಳಗೆ ನುಗ್ಗುವ ಸಾಮರ್ಥ್ಯ ಕಡಿಮೆ ಇರುವುದರಿಂದ, ಪ್ರಾಣಾಪಾಯ ಮಾಡದಿದ್ದರೂ ಚೈತನ್ಯಹೀನ ಬದುಕನ್ನು ಸೃಷ್ಟಿಸುತ್ತದೆ. ಔಷಧ ಮತ್ತು ಆಕ್ಸಿಜನ್ ಮೇಲೆ ಬಹಳ ಕಾಲ ಇರಬೇಕಾಗುವುದು ಎಂದಿದ್ದಾರೆ…

ಭಾರತದಂತಹ ಆಧ್ಯಾತ್ಮಿಕ ಶ್ರೀಮಂತಿಕೆಯುಳ್ಳ ದೇಶಗಳ ಜನರ ಮನಸ್ಥಿತಿ ಹೇಗಿರುತ್ತದೆ ಎಂದರೆ “ಚೈತನ್ಯಹೀನ ಬದುಕಿಗಿಂತ ಸಾವೇ ಮೇಲು” ಎನ್ನುವ ಜನ ನಾವು… 🤔

ರೂಪಾಂತರಿ ಒಮಿಕ್ರಾನ್ ಲಕ್ಷಣಗಳು:

• ಕೇವಲ ಒಂದು ತಿಂಗಳಲ್ಲಿ ಜಗತ್ತಿನ‌ 151 ರಾಷ್ಟ್ರಗಳನ್ನು ತಲುಪಿದೆ.

• ಶೇ. 90 ಕ್ಕಿಂತಲೂ ಹೆಚ್ಚು ಜನತೆ ವ್ಯಾಕ್ಸೀನ್ ಪಡೆದ ರಾಷ್ಟ್ರಗಳಲ್ಲೇ ಹೆಚ್ಚು ಹರಡುತ್ತಿದೆ.

• ಈಗಾಗಲೇ ಪಡೆದ ವ್ಯಾಕ್ಸೀನ್‌ಗಳು ರಕ್ಷಣೆ ನೀಡಲಾರವು ಎಂದು ಆರೋಗ್ಯ ಸಂಸ್ಥೆ ಹೇಳಿದೆ.

• ಹಿಂದಿನ ಡೆಲ್ಟಾ ವೈರಸ್‌ಗೆ ಹೋಲಿಸಿದರೆ 70ರಷ್ಟು ಹೆಚ್ಚು ವೇಗದಲ್ಲಿ ಹರಡುತ್ತಿದೆ!!

• ಹೆಚ್ಚು ಹೆಚ್ಚು ಹರಡುವ ಗುಣ ಇರುವ ಕಾರಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಒಮ್ಮೆಗೇ ಗಣನೀಯವಾಗಿ ಏರಲಿದೆ.

ಲಕ್ಷಣಗಳು:
ಮೂಗು ಸೋರುವಿಕೆ, ಕಟ್ಟುವಿಕೆ, ಸೀನು, ಗಂಟಲು ಕೆರೆತ, ಜ್ವರ, ಉಸಿರಾಟದ ತೊಂದರೆ. ಇವು ಬಹಳ ಕಾಲ ಉಳಿಯುತ್ತವೆ.

• ಸಮರ್ಥ ಪರೀಕ್ಷಾ ಕಿಟ್ ಬಂದಿಲ್ಲದ ಕಾರಣ, ಸಾಮಾನ್ಯ ನೆಗಡಿ ಇದ್ದವರಿಗೂ ಒಮಿಕ್ರಾನ್ ಪಾಸಿಟಿವ್ ಎಂದು ಫಲಿತಾಂಶ ಬರುತ್ತಿದೆ. ಆದ್ದರಿಂದ ಪರೀಕ್ಷೆ ಮಾಡಿಸಿದವನೇ “ಮೂರ್ಖ” ಎನ್ನುವಂತಾಗಿದೆ!

ಚಿಕಿತ್ಸೆ:
ನಿರ್ದಿಷ್ಟ ಚಿಕಿತ್ಸೆ ಇಲ್ಲವಾದ್ದರಿಂದ, ಹಿಂದಿನಂತೆ ಲಾಕ್ಷಣಿಕ ಚಿಕಿತ್ಸೆ ಮಾಡಲು ತಿಳಿಸುತ್ತಾರೆ.

• ಕೆಲ ಕಂಪನಿಗಳು ಒಮಿಕ್ರಾನ್‌ಗೆ ಸೂಕ್ತ ವ್ಯಾಕ್ಸೀನ್ ಕೊಡುತ್ತೇವೆ ಎಂದು ವ್ಯಾಪಾರ ದೃಷ್ಟಿಯ ಹೇಳಿಕೆಗಳನ್ನೂ ಕೊಟ್ಟಿದ್ದಾರೆ…

• ಬೂಸ್ಟರ್ ಡೋಜ್ ಎಂದು ನಾಲ್ಕು ಬಾರಿ ವ್ಯಾಕ್ಸೀನ್ ಆದವರನ್ನೂ ಒಮಿಕ್ರಾನ್ ಬಿಟ್ಟಿಲ್ಲ. ಆದರೂ ವ್ಯಾಕ್ಸೀನ್ ತಯಾರಿಸಲು ಉತ್ಸುಕವಾಗಿವೆ — ಕಂಪನಿಗಳು ಮತ್ತು ಸರಕಾರಗಳು!!

ರಕ್ಷಣೆಗೆ ಏನು ಮಾಡಬಹುದು?:
ಜೀವಕೋಶಗಳ ಸಾಮರ್ಥ್ಯ ವರ್ಧನೆಯೊಂದೇ ದಾರಿ. ಇದು ರಾತೋರಾತ್ರಿ ಬರುವಂತಹುದಲ್ಲ. ಇಂದು ಚವನಪ್ರಾಶ ಲೇಹ ಸೇವಿಸಿ ನಾಳೆಗೆ ಇಮ್ಯೂನಿಟಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ಸಧ್ಯಕ್ಕೆ ಆಹಾರದ ಪ್ರಮಾಣ ಕಡಿಮೆ ಮಾಡಿಕೊಳ್ಳಿ, ಜೀರ್ಣಕ್ರಿಯೆ ಚೆನ್ನಾಗಿ ಇಟ್ಟುಕೊಳ್ಳಿ, ಅಂದರೆ ಚೆನ್ನಾಗಿ ಹಸಿಯುವಂತೆ ಕೆಲಸ ಮಾಡಿ, ಹಸಿದ ನಂತರವಷ್ಟೇ ಆಹಾರ ಸೇವಿಸಿ.

ಪ್ರಬಲ ಅಸ್ತ್ರ:
ಉಪವಾಸ ಅಥವಾ ಚೆನ್ನಾಗಿ ಹಸಿಯುವವರೆಗೆ ಆಹಾರ ಸೇವನೆ ಮಾಡದಿರುವ ಸಂಕಲ್ಪವೇ ಪರಿಣಾಮಕಾರಿಯಾಗಿದೆ. ಇದೊಂದು ಪ್ರಬಲ ಅಸ್ತ್ರವನ್ನು ಪ್ರಯೋಗಿಸಿ ನೋಡಿ, ಎಷ್ಟೇ ಅಪಾಯಕರ ವೈರಸ್ ಕೂಡಾ ಆಹಾರ ಸಿಗದೇ ಮೆತ್ತಗಾಗುತ್ತದೆ, ಸತ್ತೇಹೋಗುತ್ತದೆ…

ನಾಳೆಗೆ ಮುಂದುವರಿಯುವುದು…

8792290274
9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

Admin

Leave a Reply

Your email address will not be published. Required fields are marked *

error: Content is protected !!