ಕಲ್ಲಂಗಡಿ-ಗುಣಾವಗುಣಗಳು…!

ಕಲ್ಲಂಗಡಿ-ಗುಣಾವಗುಣಗಳು…!

ತಂಪು ಮುರಿದು ಉತ್ತರಾಯಣ ಕಾಲಿಡುತ್ತಿದ್ದಂತೆಯೇ ಕಲ್ಲಂಗಡಿ ಸೇವನೆ ನಿಧಾನವಾಗಿ ಹೆಚ್ಚುತ್ತಾ ಮಾಚ್೯-ಏಪ್ರಿಲ್‌ಗೆ ಒಂದು ಹೊತ್ತಿನ ಊಟವಾಗಿ ಕಲ್ಲಂಗಡಿ ಸೇವನೆ ಮಾಡುವ ಹಂತಕ್ಕೆ ತಲುಪುತ್ತಾರೆ ಜನಸಾಮಾನ್ಯರು…

ಇಷ್ಟೊಂದು ನೀರಿನ ಅಂಶ ಇದೆ, ಸಿಹಿಯಾಗಿರುತ್ತದೆ ತಂಪು ಎಂದು ಭಾವಿಸಿ ಸೇವಿಸುತ್ತಾರೆ, ವಾಸ್ತವದಲ್ಲಿ ಅದೊಂದು ತಂಪು-ಉಷ್ಣ ಎರಡೂ ಗುಣಗಳನ್ನು ಒಟ್ಟಿಗೇ ಇಟ್ಟುಕೊಂಡ ಹಣ್ಣು, ಆದರೆ ಪರಿಣಾಮದಲ್ಲಿ ಎಲ್ಲರಿಗೂ ಆರೋಗ್ಯಕರವಲ್ಲ!

ವಾಗ್ಭಟಾಚಾರ್ಯರು — ಅಷ್ಟಾಂಗ ಹೃದಯ, ಸೂತ್ರಸ್ಥಾನದಲ್ಲಿ “ಚಿರ್ಭಟವು ರಕ್ತಪಿತ್ತಕಾರಕ” ಎಂದಿದ್ದಾರೆ…

ಚಿರ್ಭಟ” ಎಂದರೆ ಕಲ್ಲಂಗಡಿ ಹಣ್ಣು

ದಾಳಿಂಬೆ, ನೆಲ್ಲಿಕಾಯಿಗಳು ಪ್ರಾಕೃತ ರಕ್ತವನ್ನು ಹೆಚ್ಚಿಸುತ್ತವೆ, ಕಲ್ಲಂಗಡಿ ರಕ್ತವನ್ನು ವಿಕೃತಿಯಿಂದ ಹೆಚ್ಚಿಸುತ್ತದೆ!!

ಹೌದು — ನಮ್ಮ ರಕ್ತ ಹೆಚ್ಚುವುದು ಯಾವಾಗಲೂ ಆರೋಗ್ಯಕರ ಎಂದೇನೂ ಇಲ್ಲ…

ಕಲ್ಲಂಗಡಿಯ ರಾಸಾಯನಿಕ ಸಂಘಟನೆಗಳ ಅಳತೆ ಒಂದುಕಡೆ ಇರಲಿ, ಅದು ಕೇವಲ ಮಾಹಿತಿ. ವಾಸ್ತವವಾಗಿ ಪರಿಣಾಮವನ್ನು ಗಮನಿಸುವುದು ಸರಿಯಾದ ಪದ್ಧತಿಯಾಗಿದೆ.

“ಆಮ್ಲಪಿತ್ತ ಹೆಚ್ಚು ಇರುವವರಿಗೆ ಕಲ್ಲಂಗಡಿ ಸೇವಿಸಿದರೆ ಆಮ್ಲೀಯ ಭಾವ ರಕ್ತವನ್ನು ಸೇರಿ ಆ್ಯಸಿಡ್ ಅಂಶವನ್ನು ರಕ್ತದಲ್ಲಿ ಹೆಚ್ಚಿಸುತ್ತದೆ, ತಕ್ಷಣ ಸುತ್ತಮುತ್ತಲಿನ ಜೀವಕೋಶಗಳ ರಸಭಾಗ ಅಥವಾ ಜಲೀಯಭಾಗವನ್ನು ಎಳೆದುಕೊಂಡು ಪ್ರಮಾಣತಃ ರಕ್ತ ಹೆಚ್ಚುತ್ತದೆ, ಆದರೆ ಜಲೀಯಾಂಶ ರಕ್ತವನ್ನು ಸೇರಿ ಅದು ದುರ್ಬಲವಾಗುತ್ತದೆ.

ಪ್ರಮಾಣತಃ ವೃದ್ಧಿಯಾಗುವ ಕಾರಣ ರಕ್ತಪರಿಚಲಿಸುವಾಗ ರಕ್ತನಾಳಗಳ ಮೇಲೆ ಒತ್ತಡ ಹೇರುತ್ತದೆ, ಇದನ್ನೇ “ರಕ್ತದೊತ್ತಡ ” ಎಂದು ಕರೆಯುತ್ತಾರೆ. ಆರಂಭದಲ್ಲಿ ಇದು ತಾತ್ಕಾಲಿಕವಾಗಿ ಕಂಡುಬರುತ್ತದೆ, ಕ್ರಮೇಣ ಇದೇ “ಶಾಶ್ವತ ರಕ್ತದೊತ್ತಡ”ವಾಗಿ ನಿತ್ಯವೂ ಮಾತ್ರೆ ನುಂಗುವಂತೆ ಮಾಡುತ್ತದೆ!

ಈಗ ಶೇ. 90 ಜನರಿಗೆ ಆಮ್ಲಪಿತ್ತದ ತೊಂದರೆ ಇದೆ, ಅವರಿಗೆ ಕಲ್ಲಂಗಡಿಯ ಬಗ್ಗೆ ಎಚ್ಚರ ಇರಬೇಕು. ಕಲ್ಲಂಗಡಿ ಹಣ್ಣು ತಿಂದ ನಂತರ ತಲೆಸುತ್ತು, ಉಬ್ಬಳಿಕೆ, ಸಣ್ಣದಾದ ಅಸ್ಥಿರತೆ ಕಾಡಿದರೆ ಅದನ್ನು ತಿನ್ನದಿರುವುದೇ ಒಳ್ಳೆಯದು…

ಯಾರಿಗೆ ಆಮ್ಲಪಿತ್ತ ಇಲ್ಲವೋ ಅವರು ಮತ್ತು ಕೊಬ್ಬಿನ‌ ಅಂಶ ಹೆಚ್ಚು ಬಲವಾನ್ ಇರುವವರು ಕಲ್ಲಂಗಡಿಯಿಂದ ಸ್ವಲ್ಪ ಲಾಭ ಪಡೆಯಬಹುದು.

ಉಳಿದವರಿಗೆ ಕಲ್ಲಂಗಡಿ ಅಷ್ಟೇನೂ ಯೊಗ್ಯವಲ್ಲ…

8792290274 -9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

🌱 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🍀 ಸ್ವಾಸ್ಥ್ಯ ಸರ್ವರದ್ದೂ ಆಗಲಿ 🌴

Raghu Shikari

Leave a Reply

Your email address will not be published. Required fields are marked *

error: Content is protected !!