ಶಿಕಾರಿಪುರ :ಸ್ವಾತಂತ್ರ್ಯ ಇತಿಹಾಸದಲ್ಲಿ ಕಿತ್ತೂರು ಸಂಸ್ಥಾನದ ಹೆಸರು ಅಜರಾಮರವಾಗಿದೆ: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ :ಸ್ವಾತಂತ್ರ್ಯ ಇತಿಹಾಸದಲ್ಲಿ ಕಿತ್ತೂರು ಸಂಸ್ಥಾನದ ಹೆಸರು ಅಜರಾಮರವಾಗಿದೆ: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ ಪಟ್ಟಣ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸಂಸದರಾದ ಬಿ. ವೈ ರಾಘವೇಂದ್ರ ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. 1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಟ್ಯಾಕರೇ ಸೈನ್ಯವನ್ನು ಸೋಲಿಸಿದ್ದಾರೆ.

ಈ ಗೆಲುವಿನ ಸಂಕೇತವಾಗಿ ಪ್ರತಿವರ್ಷ ಅಕ್ಟೋಬರ್ 23 ರಂದು ಕಿತ್ತೂರು ಉತ್ಸವ ಆಚರಿಸಲಾಗುತ್ತದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ತಿಳಿಸಿದರು.

ದತ್ತುಸ್ವೀಕಾರ ವಿರೋಧಿಸುತ್ತಿದ್ದ ಬ್ರಿಟಿಷರ ಆದೇಶಕ್ಕೆ ಬೆಲೆ ಇಲ್ಲ ನಮ್ಮದೇ ನಾಡು ನಮಗೆ ನಾವೇ ಸಾಮ್ರಾಟರು ಎಂದು ಸಾಮ್ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರು ರಾಣಿ ಚೆನ್ನಮ್ಮ ವೀರ ರಾಣಿಯ ಸ್ವತಂತ್ರ ಪ್ರೇಮ ಕರ್ತವ್ಯನಿಷ್ಠೆ ಸಹಸಮಯ ಜೀವನ ಎಲ್ಲಾ ಕಾಲಕ್ಕೂ ಆದರ್ಶವಾಗಿದೆ ವೀರರಾಣಿ ಚೆನ್ನಮ್ಮ ಎಂದಿಗೂ ಅಮರರಾಗಿಯೇ ಉಳಿಯುತ್ತಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಕವಿರಾಜ್, ಪಂಚಾಮಸಾಲಿ ಸಮಾಜದ ಅಧ್ಯಕ್ಷ‌ ಚಂದ್ರಪ್ಪ,ಸಿದ್ದೇಶ್, ರುದ್ರಮುನಿ, ಮಹಿಳಾ ಅಧ್ಯಕ್ಷೆ ನೀಲಮ್ಮ, ರುದ್ರೇಶ್, ಡಾ.ಮಾಲತೇಶ್, ಮತ್ತಿತರರು ಇದ್ದರು.

NEWS BY: Raghu Shikari -7411515737

Admin

Leave a Reply

Your email address will not be published. Required fields are marked *

error: Content is protected !!