ಶಿಕಾರಿಪುರ : ಕಾಳೆನಹಳ್ಳಿ ಮಠಕ್ಕೆ ರುದ್ರಮುನಿ‌‌ ಮಹಾಸ್ವಾಮಿಗಳ ಕೋಟಿ ಕೋಟಿ ತಪಸ್ಸಿನ ಶಕ್ತಿ ಈ ಪುಣ್ಯಭೂಮಿಯಲ್ಲಿದೆ: ಡಾ.ಸಿದ್ದಲಿಂಗ ಮಹಾಸ್ವಾಮಿಗಳು..!

ಶಿಕಾರಿಪುರ : ಕಾಳೆನಹಳ್ಳಿ ಮಠಕ್ಕೆ ರುದ್ರಮುನಿ‌‌ ಮಹಾಸ್ವಾಮಿಗಳ ಕೋಟಿ ಕೋಟಿ ತಪಸ್ಸಿನ ಶಕ್ತಿ ಈ ಪುಣ್ಯಭೂಮಿಯಲ್ಲಿದೆ: ಡಾ.ಸಿದ್ದಲಿಂಗ ಮಹಾಸ್ವಾಮಿಗಳು..!

ಶಿಕಾರಿಪುರ ತಾಲೂಕಿನ ಸುಕ್ಷೇತ್ರ ಶ್ರೀ ಶಿವಯೋಗಾಶ್ರಮ ಕಪ್ಪನಹಳ್ಳಿ – ಕಾಳೇನಹಳ್ಳಿಯಲ್ಲಿ ಗುರುವಾರ ಶತಾಯುಷಿ ಕಾಯಕಯೋಗಿ ಪೂಜ್ಯ ಅಂ.ರುದ್ರಮುನಿಮಹಾ ಶಿವಯೋಗಿಗಳವರ 33ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಕಾಳೆನಹಳ್ಳಿ ಶಿವಯೋಗ ಮಂದಿರ ಮತ್ತು ಶ್ರೀಕ್ಷೇತ್ರ ಗೋಣಿಬಿಡು ಶೀಲ ಸಂಪಾದನ ಮಠದ ಶ್ರೀಗಳಾದ ಡಾ.ಸಿದ್ದಲಿಂಗ ಮಹಾಸ್ವಾಮಿ ಮಾತನಾಡಿ ಕಾಳೆನಹಳ್ಳಿ ಮಠ ಮಹಾಶಕ್ತಿ ಇರುವ ಸ್ಥಳ ಕಾಳೆನಹಳ್ಳಿ ಶಿವಯೋಗ ಮಂದಿರವನ್ನು ಹಾನಗಲ್ ಕುಮಾರಸ್ವಾಮಿಜೀಗಳು ಸ್ಥಾಪಿಸಿದ್ದು  ಮಹಾತಪಸ್ವಿಗಳು ಯುಗ ಪುರುಷರು‌ ತಪೋಗೈದ ಪುಣ್ಯಸ್ಥಳವಾಗಿದೆ.

ಮಠ ಅಭಿವೃದ್ಧಿಯಾಗದೇ ಇದ್ದರೂ ಆಧ್ಯಾತ್ಮಿಕ ಜ್ಞಾನವನ್ನು ನೀಡಿಕೊಂಡು ಬಂದಿದೆ ಆಧ್ಯಾತ್ಮಿಕ ಶಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

ಮಠಗಳಲ್ಲಿ ಯಾರು ನಿಜವಾಗಿಯೂ ಸೇವೆ ಮಾಡುತ್ತಾರೆ ಅವರ ಜೀವನ‌ ಪಾವನ ಆಗುತ್ತದೆ ಮಲೆನಾಡಿನ ರಮಣ ಮಹರ್ಷಿ ರುದ್ರಮುನಿ‌ಗಳು ಎಂದರೆ ತಪ್ಪಾಗಲಾರದು ಅವರ ತಪೋಶಕ್ತಿ ಈ ಪುಣ್ಯಭೂಮಿಯಲ್ಲಿದೆ.

ಯಾವುದೇ ಮಠಕ್ಕೆ ಭಕ್ತರು ಬರುವುದು ಸಂತರ  ಆರ್ಶಿವಾದ ಪಡೆಯುವುದಕ್ಕೆ ಮಠದಲ್ಲಿ ಏನೂ ಇಲ್ಲದೇ ಇದ್ದರೂ ಪರವಾಗಿಲ್ಲ ಯೋಗ್ಯ ಸಂತ ಇರಬೇಕು ಇಡೀ ಜಗತ್ತು ತಲೆ ಬಾಗುವುದು ಸಂತರಿಗೆ ಮಾತ್ರ

ಈ ಕ್ಷೇತ್ರ ಪುಣ್ಯಭೂಮಿ ಇಲ್ಲಿ ಸುಮ್ಮನೆ ಸಂಕಲ್ಪ ಮಾಡಿದ್ದಾರೆ ಸಾಕು ಇಷ್ಟಾರ್ಥಗಳು ಸಿದ್ದಿಸುತ್ತದೆ ಇಷ್ಟು ವರ್ಷ ನಮ್ಮ‌ ಜೀವನವನ್ನು ಹಾಳು ಮಾಡಿಕೊಂಡಿದ್ದೇವೆ  ಆಧ್ಯಾತ್ಮಿಕ ಜೀವನ್ನು ಅನುಸರಿಸಿ ಉತ್ತಮ‌ ಜೀವನ ನಡೆಸಿ ನಾನು ಈ ಮಠದ ಸ್ವಾಮಿ ಅಲ್ಲ ನಾನು ಸೇವಕನಾಗಿ ಬಂದಿದ್ದೇನೆ ಕಸ ಹೊಡೆಯಲು ಬಂದಿದ್ದೇನೆ ರುದ್ರಮುನಿ‌‌ ‌ಮತ್ತು ರೇವಣ್ಣಸಿದ್ದ ಮಹಾಸ್ವಾಮಿ ಸೇವೆ ಮಾಡಲು ಬಂದಿದ್ದೇನೆ ಎಂದರು.

ಕಾಳೆನಹಳ್ಳಿ ಶಿವಯೋಗ ಮಂದಿರರ ಕಾರ್ಯಾಧ್ಯಕ್ಷರಾದ ಸಂಸದ ಬಿ.ವೈ ರಾಘವೇಂದ್ರ  ಮಾತನಾಡಿ ಅತ್ಯಂತ ಪವಿತ್ರ ಸ್ಥಳ ಶ್ರೀ ಮಠ ಅನೇಕ ತಪಸ್ವಿಗಳು‌ ಅನುಷ್ಠಾನ ಮಾಡಿರುವ ಪುಣ್ಯಕ್ಷೇತ್ರ ಶಿವಯೋಗ ಮಂದಿರ ಪ್ರಕೃತಿಯನ್ನು ಪ್ರೀತಿಸುವ ಲಿಂ.ಶ್ರೀ ರುದ್ರಮುನಿ‌‌ ಮಹಾಸ್ವಾಮಿಗಳು ಕೃಷಿ ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ.

ಮನುಷ್ಯರು ಏನೂ ಬೇಕು ಬೇಡ ಅನುವುದಕ್ಕಿಂತ ಬೇಡವಾದ ಕಡೆ ಗಮನ ನೀಡುತ್ತೆವೆ ಮಠಮಾನ್ಯಗಳ ದರ್ಶನ ಅನೇಕ ಧಾರ್ಮಿಕ ಸ್ಥಳಗಳ ಭೇಟಿ ಸ್ವಾಮಿಜಿಗಳ ಆರ್ಶಿವಾದ ಪಡೆದುಕೊಳ್ಳುವುದು ಜೀವನ ಉತ್ತಮ‌ ಅಭ್ಯಾಸಗಳಿವೆ.


ಕರ್ನಾಟಕದ ಮೊದಲ ಶಾಸನ ಶಿಕಾರಿಪುರ ತಾಲೂಕಿನಲ್ಲಿ ಸಿಂಹ ಕಟಂಜನ‌ ಶಾಸನ ಅಕ್ಕಮಹಾದೇವಿ, ಅಲ್ಲಮಪ್ರಭುವಿನ ನಾಡು ಈ ಪುಣ್ಯಭೂಮಿಯಲ್ಲಿ ಜನ್ಮ ಪಡೆದಿರುವ ನಾವು ಸೌಭಾಗ್ಯವಂತರು

ಜ್ಞಾನದಾಸೋಹ ಮಠಗಳಿಂದ ನಮಗೆ ಸಿಗಲಿದೆ ಮಠಕ್ಕೆ ಭಕ್ತರೇ ಅಸ್ತಿ ಮಠದ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಬೇಕು.

ಶ್ರೀ ಮಠದ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸೊಣ‌ ಲಕ್ಷ ಸಂಖ್ಯೆಯಲ್ಲಿ ಭಕ್ತರ‌ ಸಮಾವೇಶ ನಡೆಸೊಣ ಎಲ್ಲಾರ ಸಹಕಾರ ಅಗತ್ಯವಿದೆ ಎಂದರು.


ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ  ಹುಕ್ಕೇರಿ ಮಠದ ಡಾ. ಸದಾಶಿವ ಸ್ವಾಮಿಜಿ ಮಾತನಾಡಿ ಕಳೆದ 33 ವರ್ಷಗಳಿಂದ ಸತತವಾಗಿ ರುದ್ರಮುನಿ‌‌ ಮಹಾಸ್ವಾಮಿಗಳ ಪುಣ್ಯಸ್ಮರಣೆ ಆಚರಿಸುತ್ತಿದ್ದು ಮಹಾಸ್ವಾಮಿಗಳ ಆರ್ಶಿವಾದ ಹಾನಗಲ್ ಕುಮಾರಸ್ವಾಮಿ ಕೃಪೆಯಿಂದ ಶ್ರೀ ಮಠದಲ್ಲಿ ಆಧ್ಯಾತ್ಮಿಕ ಕ್ರಾಂತಿ ನಡೆಯುತ್ತಿದೆ.

ಅಧುನಿಕ ಜೀವನಕ್ಕೆ ಮಾರುಹೋಗಿ ಹಳ್ಳಿಗಳ‌ ಬಿಟ್ಟು ಪಟ್ಟಣಕದಕೆ ಜನರು ವಲಸೆ ಹೋಗಿದ್ದಾರೆ ಅದರೆ ಕಾಯಕದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂಬುದನ್ನು ಮನುಜರು ಮರೆಯುತ್ತಿದ್ದಾರೆ.


ಕೃಷಿ‌ ಮೂಲಕ ಕಾಯಕವೇ ಶ್ರೇಷ್ಠ ಎಂಬುದನ್ನು ರುದ್ರಮುನಿ‌‌ ಮಹಾಸ್ವಾಮಿಗಳು ಜಗತಿಗೆ ತಿಳಿಸಿದ್ದಾರೆ


ಈ ಮಠದಲ್ಲಿ ಕೋಟಿ ಹಣವಿಲ್ಲ ಕೋಟಿ ಕೋಟಿ ತಪಸ್ಸಿಸಿನ ಶಕ್ತಿ ಇದೆ‌ ಬಡವ ಶ್ರೀಮಂತರು ಜಾತಿ ಮತಪಥಗಳು ಇಲ್ಲದೇ ಸರ್ವರಿಗೂ ಸಮಾನತೆ ಸಾರಿದೆ ಕಾಳೆನಹಳ್ಳಿ ಮಠಬಮೌನಕ್ಕೂ ಶಕ್ತಿ ಇದೆ ಎಂದು ಡಾ.ಸಿದ್ದಲಿಂಗ‌ ಮಹಾಸ್ವಾಮಿಗಳು ತೋರಿಸಿದ್ದಾರೆ ಎಂದರು.


ದಿವ್ಯ ಸಾನಿಧ್ಯವನ್ನು
ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶಿವಯೋಗಾಶ್ರಮ ಶ್ರೀ.ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು ಹುಕ್ಕೆರಿ ಮಠ
ಶ್ರೀ.ಮ.ನಿ.ಪ್ರ. ಡಾ.ಮಹಾಂತ ಮಹಾಸ್ವಾಮಿಗಳು.
ಶ್ರೀ.ಷ.ಬ್ರ.ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ.ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳು. ಕೆ.ಎಸ್.ಗುರುಮೂರ್ತಿ , ಕು.ವಿವಿ ಕುಲಪತಿ ಬಿ.ಪಿ.ವೀರಭದ್ರಪ್ಪ. ದಯಾಶಂಕರ್,  ಎಂ.ಶ್ರೀಕಾಂತ್, ಈರೇಶ್ ಎನ್.ವಿ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!