ಶಿಕಾರಿಪುರ: ಭಾರತೀಯ ಪರಂಪರೆಯಲ್ಲಿ ಶ್ರಾವಣ ಅತ್ಯಂತ ಉತ್ತಮವಾದ ಮಾಸವಾಗಿದೆ:ತಿಪ್ಪಾಯಿಕೊಪ್ಪ ಶ್ರೀ ಮಹಾಂತ ಮಹಾಸ್ವಾಮಿಜೀ..!

ಶಿಕಾರಿಪುರ: ಭಾರತೀಯ ಪರಂಪರೆಯಲ್ಲಿ ಶ್ರಾವಣ ಅತ್ಯಂತ ಉತ್ತಮವಾದ ಮಾಸವಾಗಿದೆ:ತಿಪ್ಪಾಯಿಕೊಪ್ಪ ಶ್ರೀ ಮಹಾಂತ ಮಹಾಸ್ವಾಮಿಜೀ..!

ಶಿಕಾರಿಪುರ :ಕಾಳೆನಹಳ್ಳಿ ಶಿವಯೋಗಿ ಮಂದಿರ‌ ಮತ್ತು ಅಖಿಲ‌ ಭಾರತೀಯ ವೀರಶೈವ ಮಹಾಸಭಾ ವತಿಯಿಂದ ಶ್ರಾವಣ ‌ಮಾಸನದ‌ ಮೊದಲ ಸೋಮವಾರ ಋಗ್ವೇದ ಸಂಸ್ಥೆ, ಬಸವೇಶ್ವರ ಯುವ ಬಳಗ, ಅಖಿಲ ಭಾರತೀಯ ವೀರಶೈವ ಯುವ ಘಟಕ ವತಿಯಿಂದ ಶ್ರಾವಣ ಮಾಸದ ಸುಜ್ಞಾನದ ಬೆಳಕು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸದ ತಿಪ್ಪಾಯಿಕೊಪ್ಪದ ಮಹಾಂತ ಮಹಾ ಸ್ವಾಮೀಜಿಗಳು ಉಪನ್ಯಾಸ ನೀಡಿ‌ದ ಅವರು ಭಾರತೀ ಸನಾತನ ಪರಂಪರೆ ಪ್ರತಿಯೊಂದು ಮಾಸದಲ್ಲೂ‌ ಒಂದೊಂದೂ ದಿನವೂ ವಿಷೇ‌ಶವಾದ‌ ದಿನವಾಗಿದ್ದು ಲೌಕಿಕ ಜೀವನದಲ್ಲಿ ಭಗವಂತನ ಚಿಂತನೆ ಈ ಶ್ರವಾಣ ಮಾಸ ಜನರು ಭಕ್ತಿಯಿಂದ ಆಚರಿಸಬೇಕು ಎಂದರು.

ಮನುಷ್ಯನ ಆಸೆಗೆ ಮಿತಿ ಇಲ್ಲ ಯಾವುದನ್ನು ಕೊಟ್ಟರು ಬೇಡ ಎನ್ನುವುದುದಿಲ್ಲ ಅದರೆ ಅನ್ನವನ್ನು ಮಾತ್ರ ಸಾಕು ಎನ್ನುತ್ತಾರೆ ಅದು ರತ್ನ ಜಲ‌‌,ಗಾಳಿ,ಬೆಳಕು ಪ್ರಕೃತಿಯ ಸಂಪತ್ತು‌ ಇದನ್ನು ಉಳಿಸಿಕೊಂಡು ಹೋಗಬೇಕಾಗಿದೆ.

ಶ್ರವಾಣ ಮಾಸದಲ್ಲಿ ಉತ್ತಮ‌ ಕಾರ್ಯಕ್ರಮ ಮಾಡುವುದು ದೇವರ ಪೂಜಾ ಶುಭ‌‌ಸಮಾರಂಭಗಳನ್ನು ಜನರು ಮಾಡಬೇಕು ಎಂದರು.

ಈ‌ ಕಾರ್ಯಕ್ರಮದಲ್ಲಿ ಕಪ್ಪನಹಳ್ಳಿ ಗ್ರಾಮ‌ ಪಂಚಾಯತಿ ಸರ್ವ‌ಸದ್ಯರಿಗೆ ಋಗ್ವೇದ‌ ಸಂಸ್ಥೆ ವತಿಯಿಂದ ನೂತನ ಕಾಳೆನಹಳ್ಳಿ ಶ್ರೀಗಳಾದ ಡಾ.ಸಿದ್ದಲಿಂಗ ಮಹಾಸ್ವಾಮಿಗಳ‌ ಭಾವಚಿತ್ರ ‌ನೀಡುವ ಮೂಲಕ‌ ಸನ್ಮಾನ ಮಾಡಿದರು.

ಈ‌ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಪ್ಪನಹಳ್ಳಿ ಗ್ರಾ.ಪಂ‌ ಅಧ್ಯಕ್ಷೆ ಲಕ್ಷ್ಮಮ್ಮ ವಹಿಸಿದ್ದರು.

ಈ‌‌ ಸಮಾರಂಭದಲ್ಲಿ ಕಪ್ಪನಹಳ್ಳಿ ಗ್ರಾ.ಪಂ‌ ಉಪಾಧ್ಯಕ್ಷ ಚರಣ್ ಕುಮಾರ್, ಸದಸ್ಯರಾದ ಜಯಮ್ಮ,‌ವೀರೇಂದ್ರ‌ ಪಾಟೀಲ್, ಪ್ರಕಾಶ್,‌ರಂಗನಾಥ, ನಾಗರತ್ನ ರೂಪ,‌ಕೆರೆಸ್ವಾಮಿ,‌ಹಿರಿಯಮ್ಮ,‌ ಗಂಗಮ್ಮ, ಚಿನ್ನಯ್ಯ, ಕಾಂತೇಶಪ್ಪ,‌ಪದ್ಮ ಇದ್ದರು.

ಮಠದ ಆಡಳಿತ ಅಧಿಕಾರಿ ಡಾ.ಹಿರೇಮಠ, ವ್ಯವಸ್ಥಾಪಕ ಅರುಣ್, ಋಗ್ವೇದ ಸಂಸ್ಥೆ ಅಧ್ಯಕ್ಷರಾದ ಡಾ.ಚೇತನ್ ಹೆಚ್.ಪಿ, ವಕೀಲರಾದ ರುದ್ರಪಯ್ಯ,‌ಶಿವಪಯ್ಯ, ವಿಶ್ವ‌ನಾಥ್,‌ವೀರನಗೌಡ,ರಾಕೇಶ್ ನಾಗೇಂದ್ರ‌ ರಾಯ್ಕರ್,ನಂದೀಶ್,ಕಿರಣ್, ಸೇರಿದಂತೆ ಅನೇಕ ಭಕ್ತರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!