ಕೊರೋನಾ ಸೋಂಕಿನ ಅವಸ್ಥೆಯಲ್ಲಿ ನಮ್ಮ ಆಹಾರ ಹೇಗಿರಬೇಕು…?

ಕೊರೋನಾ ಸೋಂಕಿನ ಅವಸ್ಥೆಯಲ್ಲಿ ನಮ್ಮ ಆಹಾರ ಹೇಗಿರಬೇಕು…?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:

ಕೊರೋನಾ ಸೋಂಕಿನ ಅವಸ್ಥೆಯಲ್ಲಿ ನಮ್ಮ ಆಹಾರ ಹೇಗಿರಬೇಕು?

ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ಗಳಿಸಲು ಮೂರು ರೀತಿಯಿಂದ ಸಹಕಾರ ಸಿಗುವ ಆಹಾರ ನಿಯಮಗಳನ್ನು ಅನುಸರಿಸುವುದು ಸೂಕ್ತ.

★★ವೈರಾಣು ಶರೀರ ಪ್ರವೇಶಿಸಲು ಇರುವ ಪ್ರಧಾನ ಮಾರ್ಗವಾದ ಗಂಟಲಿಗೆ ಬಲಕೊಡುವ ಮತ್ತು ಅಲ್ಲಿನ ಊತವನ್ನು ತಗೆಯುವ ಆಹಾರವನ್ನು ಸೇವಿಸಿರಿ:
🔸ಉದಾಹರಣೆಗೆ: ಕಾಳುಮೆಣಸು, ಕರಿಜೀರಿಗೆ, ಚಕ್ಕೆ, ಅರಿಷಿಣ ಮುಂತಾದ, ಕೊಬ್ಬನ್ನು ಕರಗಿಸುವ, ಗಂಟಲಿನ ಊತ-ನವೆಯನ್ನು ತೆಗೆಯುವ ಈ ದ್ರವ್ಯಗಳು ಆರಂಭದಲ್ಲೇ ವೈರಾಣುವಿನ ಸುತ್ತ ಇರುವ ಕೊಬ್ಬಿನ ಪೊರೆಯನ್ನು ಕರಗಿಸುತ್ತವೆ ಮತ್ತು ಗಂಟಲಿನ ಜೀವಕೋಶಗಳಲ್ಲಿ ವೈರಾಣುವಿಗೆ ಆಶ್ರಯವಿಲ್ಲದಂತೆ ಮಾಡುತ್ತವೆ.

★★ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ಸೇವಿಸಿ:
ರೋಗದ ವಿರುದ್ಧ ಹೋರಾಡಲು ಔಷಧಗಳು ಎಷ್ಟು ಬಲವನ್ನು ಕೊಡುತ್ತವೋ ಅದಕ್ಕಿಂತಲೂ ಹೆಚ್ಚು ಮತ್ತು ನಿರಂತರ ಬಲವನ್ನು ಕೊಡುವುದು ನಮ್ಮ ಆಹಾರ ಕ್ರಮ.
ಇಲ್ಲಿ –
🔸ಹಳೆಯ ಅಕ್ಕಿಯಿಂದ ತಯಾರಿಸುವ ಅನ್ನ, ರೊಟ್ಟಿ, ಕಡುಬು, ನೀರುದೋಸೆ(ಹುಳಿಬರಿಸುವ ದೋಸೆ , ಇಡ್ಲಿಗಳು) ಬೇಡ.
🔸ರಾಗಿ, ಜೋಳಗಳಿಂದ ತಯಾರಿಸುವ ಪದಾರ್ಥಗಳನ್ನು ಬಳಸಬಹುದು.(ಗೋಧಿ, ಮೈದಾ ಬೇಡವೇ ಬೇಡ).
🔸ಭೂಮಿಯ ಕೆಳಗೆ ಬೆಳೆಯುವ ಪ್ರೊಟೀನ್ ಸಮೃದ್ಧ ಆಲೂಗಡ್ಡೆ, ಗೆಣಸು, ಸುವರ್ಣಗಡ್ಡೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ತರಕಾರಿಗಳನ್ನು ನೀರಿನಲ್ಲಿ ಬೇಯಿಸಿ ಬಳಸಿ.
🔸ಬಾಳೆಹಣ್ಣು, ಕಲ್ಲಂಗಡಿಗಳನ್ನು ಹೊರತುಪಡಿಸಿ ಉಳಿದ ಹಣ್ಣುಗಳನ್ನು ಅಗತ್ಯಕ್ಕನುಸಾರ ನಿಯಮಿತವಾಗಿ ಬಳಸಿ.

★★ನಮ್ಮ ಕರುಳಿಗೆ ಆರೋಗ್ಯ ತರುವ ಆಹಾರ ಸೇವಿಸಿ:
ಎಲ್ಲಾ ರೀತಿಯ ರೋಗಕ್ಕೂ ಪ್ರಧಾನ ಕಾರಣವಾಗುವ ಮತ್ತು ರೋಗವನ್ನು ಉಲ್ಬಣಗೊಳ್ಳುವಂತೆ ಮಾಡುವ ಮಲಬದ್ಧತೆಯು ಆಗದಂತೆ ಕರುಳನ್ನು ಸಂರಕ್ಷಿಸಿಕೊಳ್ಳಬೇಕು.
🔸ಇದಕ್ಕಾಗಿ ನಿತ್ಯವೂ ಎರಡುಬಾರಿ ಜೀರಿಗೆ ಕಷಾಯ ಕುಡಿಯಿರಿ.
🔸ಎಣ್ಣೆ, ಸಿಹಿ ಸೇರಿಸದ ಆಹಾರ ಸೇವಿಸಿ. ಶರೀರದ ಅಗತ್ಯದ ಮುಕ್ಕಾಲು ಭಾಗ ಆಹಾರ ಸೇವಿಸಿ.
🔸ಪ್ರತಿ ಆಹಾರದ ನಂತರ ಒಂದು ಲೋಟ ಬಿಸಿ-ಬಿಸಿ ನೀರನ್ನು ಸೇವಿಸಿ.
🔸ರಾತ್ರಿಯ ಆಹಾರ ಶೇಕಡಾ 50ಕ್ಕೆ ಇಳಿಸಿ ಮತ್ತು ಸಂಜೆ 7:30 ರೊಳಗೆ ಊಟ ಮುಗಿಸಿ.
🔸ಬೇಗ, ಅಂದರೆ ರಾತ್ರಿ 9 ರಿಂದ 9:30ರೊಳಗೆ ಮಲಗಿ.
🔸ಚಿಂತೆ ಬಿಟ್ಟು ಹಿತವಾಗಿ ನಿದ್ದೆಯನ್ನು ಮಾಡಿ.
🔸ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಹಾಸಿಗೆಯಿಂದ ಎದ್ದುಬಿಡಿ.

ಹೀಗೆ, ಮೂರು ರೀತಿಯಿಂದಲೂ ಅಂದರೆ- ವೈರಾಣು ಪ್ರವೇಶಿಸಲೂ, ಉಳಿದುಕೊಳ್ಳಲೂ ಮತ್ತು ಬಲಪಡೆಯಲು ಬೆಂಬಲಿಸುವ ಅಂಶಗಳನ್ನು ಕೊಡದೇ ಇರುವುದೇ ಜಾಣತನವಲ್ಲವೇ ‼️⁉️❓

ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!