ವ್ಯಾಯಾಮದ(ಶಾರೀರಿಕ ಶ್ರಮದ) ಲಾಭಗಳು ಭಾಗ-1

ವ್ಯಾಯಾಮದ(ಶಾರೀರಿಕ ಶ್ರಮದ) ಲಾಭಗಳು ಭಾಗ-1

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ವ್ಯಾಯಾಮದ(ಶಾರೀರಿಕ ಶ್ರಮದ) ಲಾಭಗಳು ಭಾಗ-1

🌿 ಶರೀರಾಯಾಸ ಜನನಂ ಕರ್ಮ ವ್ಯಾಯಾಮಸಂಜ್ಞಿತಂ ||
-ಸುಶ್ರುತ ಸಂಹಿತ

🌿 ಲಾಘವಂ……ವ್ಯಾಧಿಃ ನಾಶ………ತು ತದಾದಿಶೇತ್ ||
-ಭಾವಪ್ರಕಾಶ

❄️ ನಿತ್ಯ ವ್ಯಾಯಾಮದಿಂದಾಗುವ ಆಂತರಿಕ ಬದಲಾವಣೆಗಳು.

🏃‍♂ ಅಜೀರ್ಣವೂ ಶೀಘ್ರ ಪಚನವಾಗುವುದು:
ಇದನ್ನು ಸರಳವಾಗಿ ಅರ್ಥಮಾಡಿಕೊಳ್ಳಬಹುದು.
ಅಜೀರ್ಣ, ಆಮ್ಲಪಿತ್ತ, ಹುಳಿತೇಗು, ಎದೆಉರಿ, ಹೊಟ್ಟೆಉಬ್ಬರತರಿಸುವ ಪದಾರ್ಥಗಳನ್ನು ಸೇವಿಸಿದರೂ ವ್ಯಾಯಾಮ ಶಕ್ತಿ ಅದನ್ನು ಕರಗಿಸಿ ಬಿಡುತ್ತದೆ.
ಜೀರ್ಣಶಕ್ತಿ-ಪಿತ್ತದ ಸಂಕಟ ಎರಡೂ ಉಷ್ಣವೇ ಆದರೂ ಮತ್ತು ವ್ಯಾಯಾಮ ಉಷ್ಣ ವರ್ಧಕವಾದರೂ ಅದು ಪಿತ್ತವನ್ನುಂಟುಮಾಡುವ ದ್ರವ್ಯಗಳನ್ನೇ ಕರಗಿಸುವ ಕಾರಣ ಆಮ್ಲಪಿತ್ತಾದಿ ರೋಗಗಳು ಹೆಚ್ಚುವ ಬದಲು ಕಡಿಮೆ ಆಗುವವು, ಆದ್ದರಿಂದ
Acidityಗೆ ಶ್ರೇಷ್ಠ ಔಷಧ ವ್ಯಾಯಾಮವೇ ಆಗಿದೆ.

⛹‍♂ ಸ್ಥೌಲ್ಯಾಪಕರ್ಷಕ:
ಎಲ್ಲರಿಗೂ ಗೊತ್ತಿರುವಂತೆ ದೇಹದ ತೂಕವನ್ನು ಕರಗಿಸಲು ವ್ಯಾಯಾಮ ಸೂಕ್ತ ಆದರೆ ಗಮನಿಸಿ
• ಗಟ್ಟಿ ಮೂಳೆಗಳಿಂದ ಜಾಸ್ತಿ ಇರುವ(BMI ಲೆಕ್ಕದಲ್ಲಿ ಹೆಚ್ಚು) ತೂಕವನ್ನು ಇಳಿಸುವ ಅಗತ್ಯ ಇಲ್ಲ, ಆ ಶಕ್ತಿಯನ್ನು ಬಳಸಿ ಬೆಳೆಯಬೇಕು.
• ಕೊಬ್ಬಿನಅಂಶದಿಂದ ಆದ ತೂಕ ಕರಗಿಸಲು ವ್ಯಾಯಾಮ ಸೂಕ್ತ. ಆದರೆ ಅತೀ ಸ್ಥೂಲರು ತಕ್ಷಣವೇ ಗಂಭೀರ ವ್ಯಾಯಾಮ ಮಾಡಬಾರದು ಅದು ಅಪಾಯಕರ, ಆದರೆ “ಈಜುವುದು ಎಲ್ಲರಿಗೂ ಅತ್ಯಂತ ಶ್ರೇಷ್ಠ ವ್ಯಾಯಾಮವಾಗಿದೆ.”
• Hypothyroidism ನಿಂದ ಹೆಚ್ಚಾದ ತೂಕವನ್ನೂ ವ್ಯಾಯಾಮದಿಂದ ಕರಗಿಸಲು ಯತ್ನಿಸಬಾರದು, ಅದಕ್ಕೆ ಸೂಕ್ತ ಆಯುರ್ವೇದ ಚಿಕಿತ್ಸೆ ಬೇಕು, ಇಲ್ಲವಾದರೆ ಮೂಳೆಸವೆತ, ಹೃದಯ ತೊಂದರೆ ಸಾಧ್ಯತೆ ಹೆಚ್ಚು.
• 12 ವರ್ಷದ ಒಳಗಿನ ಮಕ್ಕಳ ತೂಕ ಇಳಿಸುವ ಸಾಹಸಕ್ಕೆ ಇಳಿಯಬಾರದು. ಅದರ ಬದಲು ಆಹಾರದಲ್ಲಿ “ಪಚನಕ್ಕೆ ಸುಲಭವಲ್ಲದ ಆದರೆ ಅಧಿಕ ಶಕ್ತಿ ಬಿಡುಗಡೆಮಾಡದ ಜೋಳ ಕೊಡಬೇಕು”

🏊‍♂ ವ್ಯಾಯಾಮ ಮಾಡಿದ ದೇಹ ಬೇಗ ಮೆತ್ತಗಾಗುವುದಿಲ್ಲ.
ವಯಸ್ಸು ಕಳೆದಂತೆ ಶರೀರ ಮೆತ್ತಗಾಗುವುದು ಸಹಜ. ಪಿತ್ತದ ಉಷ್ಣವೇ ಶರೀರವನ್ನು ಮೆತ್ತಗೆ ಮಾಡುತ್ತದೆ. ಪಿತ್ತವನ್ನು ವರ್ಧಿಸುವ ಮಲರೂಪಿ ಅಂಶಗಳು ವ್ಯಾಯಾಮದಿಂದ ಸಂಪೂರ್ಣ ಕರಗಿ ಶಕ್ತಿಯನ್ನು ವರ್ಧಿಸುವ ಕಾರಣ ಧಾತುಗಳು ಸದೃಢ ಗೊಳ್ಳುತ್ತವೆ.

ಮುಂದುವರಿಯುವುದು….

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
     ಸ್ವಾಸ್ಥ್ಯ ಸರ್ವರದ್ದೂ ಆಗಲಿ

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!