ಶಿಕಾರಿಪುರ :ಶೈಕ್ಷಣಿಕತೆಯ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ : ವಿರೂಪಾಕ್ಷಪ್ಪ..!

ಶಿಕಾರಿಪುರ :ಶೈಕ್ಷಣಿಕತೆಯ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ : ವಿರೂಪಾಕ್ಷಪ್ಪ..!

ಶಿಕಾರಿಪುರ:. ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಯೋಜಿಸಲಾಗಿದ್ದ 2019-2020 ನೇ ಶೈಕ್ಷಣಿಕ ಸಾಲಿನ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರ ಸೆಪೆಕ್ ಟಕ್ರಾ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಅಭ್ಯಸಗಳಲ್ಲಿ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಉತ್ತಮ ಆರ್ಯೋಗ್ಯವನ್ನು ಬೆಳಸಿಕೊಳ್ಳಬಹುದು ಎಂದು ಕುವೆಂಪು ವಿಶ್ವವಿದ್ಯಾಲಯದ ದಹಿಕ ನಿರ್ಧೇಶಕರಾದ ವಿರೂಪಾಕ್ಷಪ್ಪ ಹೇಳಿದರು.

ಕ್ರೀಡೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿಯೂ ಸಹಕಾರಿಯಾಗುತ್ತೆ  ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರು ಕ್ರೀಡಾಪಟ್ಟುಗಳು ನಿಮ್ಮ ರೀತಿಯಲ್ಲಿ ಕಾಲೇಜು ಜೀವನದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಅದರಿಂದ ತಮ್ಮ ಓದಿನ ಜೋತೆಯಲ್ಲಿ ಕ್ರೀಡೆಶಕ್ತಿಯನ್ನು ಬೆಳಸಿಕೊಳ್ಳಿ ಎಂದರು.

ಇತ್ತೀಚಿನ ದಿನಗಳಲ್ಲಿ ವಿಶ್ವ ವಿದ್ಯಾಲಯದ ಮಟ್ಟದಲ್ಲಿ ಅಂತರ ಕಾಲೇಜುಗಳ ಕ್ರೀಡಾಕೂಟ ನಡೆಸಲು ಯಾವುದೇ ಕಾಲೇಜುಗಳು ಮುಂದೆ ಬರುವುದಿಲ್ಲ ಅದರೆ ಶಿಕಾರಿಪುರ ಕಾಲೇಜು ಪಾಠಗಳ ಜೋತೆ ಆಟಗಳ ಮೂಲಕ ವಿಶ್ವವಿದ್ಯಾಲಯದಲ್ಲಿ ಹೆಸರು ಮಾಡಿದೆ ಇದಕ್ಕೆ ಈ ಕಾಲೇಜಿನ ದೈಹಿಕ ನಿರ್ಧೇಶಕರು ಹಾಗೂ ಪ್ರಾಂಶುಪಾಲರು ಸಿಬ್ಬಂದಿಗಳ ಪಾತ್ರ ಅಮೂಲ್ಯವಾಗಿದೆ ಇದೆ ರೀತಿ ಇನ್ನೂ ಹೆಚ್ಚು ಕ್ರೀಡಾಕೂಟಗಳನ್ನು ಅಯೋಜನೆ ಮಾಡಿ ಎಂದು ಪ್ರೋತ್ಸಹಿಸಿದರು.

ಈ ಸಂದರ್ಭದಲ್ಲಿ ಸೆಪೆಕ್ ಟಕ್ರಾ ಕ್ರೀಡೆಯ ಇಂಡಿಯನ್ ಕೋಚ್  ಕೇಶವ ಸೂರ್ಯವಂಶಿ  ಮಾತನಾಡಿ ಕರ್ನಾಟಕದದಲ್ಲಿ ಈ ಕ್ರೀಡೆಯನ್ನು ಮೊದಲು ಕುವೆಂಪು ವಿಶ್ವವಿದ್ಯಾಲಯ ನಡೆಸುತ್ತಿದೆ ಈ ಕ್ರೀಡೆ ಮಲೇಷಿಯದ ಸಂಬಂಧಿಸಿದಂತ ಕ್ರೀಡೆಯಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡೆಯಾಗಿದೆ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದ್ದು ಇನ್ನೂ ಹೆಚ್ಚು ಹೆಚ್ಚು ತಂಡಗಳು ಇದರಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾರದ ಡಾ. ಜಿ.ಆರ್ ಹೆಗಡೆ ಮಾತನಾಡಿ ಕ್ರೀಡೆ ಎಂಬುದು ದೇಶದ ಗೌರವವನ್ನು ಹೆಚ್ಚಿಸು ಒಂದು ಕಾರ್ಯ ಕ್ರೀಡೆಯಿಂದ ತಮ್ಮ ಭವಿಷ್ಯನ್ನು ರೂಪಿಸಿಕೊಳ್ಳಲು ಸಹಕಾರಿ ಈ ಕ್ರೀಡಾಕೂಟ ಗ್ರಾಮೀಣ ಯುವಕರು ಭಾಗವಹಿಸುವಿಕೆಯಿಂದ ಒಳ್ಳೆಯ ಕ್ರೀಡಾ ಪಟ್ಟುಗಳು ಹೊರ ಬರುತ್ತಾರೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುವ ಅವಕಾಶ ದೊರೆಯುತ್ತದೆ ವಿದ್ಯಾರ್ಥಿಗಳು ಕ್ರೀಡಾಶಕ್ತಿಯನ್ನು ಬೆಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ತಾ.ಪಂ ಅಧ್ಯಕ್ಷ ಆರ್.ಕೆ ಶಂಭು ಚಾಲನೆ ನೀಡಿ ಕ್ರೀಡಾಪಟ್ಟುಗಳಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕ್ರೀಡಾಕೂಡದ ಅತಿಥ್ಯವಹಿಸಿದ ಶಿಕಾರಿಪುರ ಪದವಿ ಕಾಲೇಜಿನ ದಹಿಕ ನಿರ್ಧೇಶಕರಾದ ಡಾ.ಅನೀಲ್ ಕುಮಾರ್ ಎ.ಬಿ, ವಿದ್ಯಾರ್ಥಿಕ್ಷೇಮಾಧಿಕಾರಿ ವಿನಯ್ ಕುಮಾರ್, ಉಪನ್ಯಾಸಕರಾದ ಜಿ.ಆರ್ ಜೋಷಿ ಇದ್ದರು.

News By: Raghu Shikari

Admin

Leave a Reply

Your email address will not be published. Required fields are marked *

error: Content is protected !!