ಶಿಕಾರಿಪುರ: ನಿಜವಾದ ಶಕ್ತಿಮಾನ್ ಲೈನ್ ಮಾನ್ ಗಳು ಜೀವದ ಹಂಗು ತೊರುದು ನಾಡಿಗೆ ಬೆಳಕು ನೀಡುವ ಶ್ರಮಜೀವಿ: ಪವನ ಕುಮಾರ್..!

ಶಿಕಾರಿಪುರ:  ನಿಜವಾದ ಶಕ್ತಿಮಾನ್  ಲೈನ್ ಮಾನ್ ಗಳು ಜೀವದ ಹಂಗು ತೊರುದು ನಾಡಿಗೆ ಬೆಳಕು ನೀಡುವ ಶ್ರಮಜೀವಿ: ಪವನ ಕುಮಾರ್..!

ಶಿಕಾರಿಪುರ: ದೇಶದಲ್ಲಿ ಯಾವುದೇ ರೀತಿಯ ಹವಾಮಾನದ ಎಲ್ಲಾ ವೈಪರಿತ್ಯಗಳ ನಡುವೆಯೂ ತಮ್ಮ ಜೀವದ ಹಂಗು ತೊರೆದು ನಾಡಿಗೆ ಬೆಳಕು ನೀಡಲು ಶ್ರಮಿಸುತ್ತಿರುವ ಮೆಸ್ಕಾಂ ಇಲಾಖೆಯ ಲೈನ್ಮ್ಯಾನ್ಗಳ ಕಾರ್ಯ ಶ್ಲಾಘನೀಯ ಎಂದು ಯುವಾ ಬ್ರಿಗೇಡ್ ಪವನಕುಮಾರ್ ಹೇಳಿದರು.

ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಯುವಾ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಶಕ್ತಿಮಾನ್ ಕಾರ್ಯಕ್ರಮದಲ್ಲಿ ಲೈನ್ಮ್ಯಾನ್ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಪ್ರವಾಹವಿರಲಿ, ಭೂಕಂಪವಾಗಲಿ, ಮಳೆಗೆ ವಿದ್ಯುತ್ ಕಂಬ ಬೀಳಲಿ, ಬಿಸಿಲಿಗೆ ತಂತಿ ತುಂಡಾಗಲಿ, ಜನ ಕತ್ತಲಲ್ಲಿದ್ದಾರೆಂದು ವಿಷಯ ತಿಳಿಯುತ್ತಿದ್ದಂತೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಬೆಳಕು ತರಲೆಂದು ಧಾವಿಸುವ ಲೈನ್ಮ್ಯಾನ್ಗಳು ನಿಜಾರ್ಥದಲ್ಲಿ ಶಕ್ತಿಮಾನ್ಗಳಾಗಿದ್ದಾರೆ ಎಂದರು.

ರಾಜ್ಯದಲ್ಲಿ ನಡೆದ ಮಹಾ ಜಳಪ್ರವಾಹದ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ ಲೈನ್ ಮಾನ್ ಗಳು ಸ್ಥಳಗಳಿಗೆ ಹೋಗಿ ಅಲ್ಲಿನ ಸಂಕಷ್ಟದಲ್ಲಿ ಇರುವ ಜನರಿಗೆ ನೇರವು ನೀಡಿದ್ದಾರೆ ಮತ್ತು ಹೊರರಾಜ್ಯದಲ್ಲೂ ಪ್ರವಾಹಗಳ ಸಂದರ್ಭದಲ್ಲಿ ಪಾಲ್ಗೋಂಡು ನೂಂದವರ ನೆರವಿಗೆ ಧಾವಿಸಿ ಕತ್ತಲಿನಲ್ಲಿ ಇದ ಜನರ ಜೀವನಕ್ಕೆ ಬೆಳಕು ನೀಡುವ ಮಹಕಾರ್ಯ ಮಾಡಿ ಲೈನ್ ಮಾನ್ ಗಳು ನಿಜವಾದ ಶಕ್ತಿಮಾನ್ ಎನ್ನ ಬಹುದು ಎಂದರು.

ಯುವಾ ಬ್ರಿಗೇಡ್ ರಘು ಶಿಕಾರಿ ಮಾತನಾಡಿ ಯುವಾ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ  ದೇವಸ್ಥಾನಗಳು, ಕಲ್ಯಾಣಿ, ನದಿಸ್ವಚ್ಚತೆ, ಸೇರಿ ವಿವಿಧ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಸ್ವಪ್ರೇರಣೆಯಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಫೆ. 14 ರಂದು ದೇಶ ಪ್ರೇಮಿಗಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದ್ದು,

ಪ್ರತಿ ವರ್ಷ ಒಂದೊಂದು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರನ್ನು ಗುರುತಿಸಿ ಸನ್ಮಾನ ನಡೆಸಲಾಗುವು ಈ ವರ್ಷ ನಾಡಿಗಾಗಿ ಸೇವೆ ಸಲ್ಲಿಸುತ್ತಿರುವ ಮೆಸ್ಕಾಂ ಇಲಾಖೆಯ ಲೈನ್‍ಮ್ಯಾನ್‍ಗಳಿಗೆ ಸನ್ಮಾನಿಸಲಾಗುತ್ತಿದೆ ಎಂದರು.

ಈ  ಸಂದರ್ಭದಲ್ಲಿ ಲೈನ್ ಮಾನ್ ಸಂಘದ ಅಧ್ಯಕ್ಷರಾದ ಮಲ್ಲೇಶ್ ಪಿ ಬಿ ಮಾತನಾಡಿ ರಾಜ್ಯದ್ಯಂತ ಯುವಾ ಬ್ರಿಗೇಡ್ ವತಿಯಿಂದ ಲೈನ್ ಮ್ಯಾನ್ ಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸದ ವಿಷಯ ಲೈನ್ ಮ್ಯಾನ್ ಗಳ ಕೆಲಸ ತುಂಬ ಕಷ್ಟಕರವಾಗಿದ್ದು.

ರೈತರ ಪಂಪ್ ಸೇಟ್ ಗಳಿಂದ ಹಿಡಿದು ಗ್ರಾಮೀಣ ಪ್ರದೇಶದ ಜನರಿಗೆ ಸ್ಪಂದಿಸಿ ಮದ್ಯರಾತ್ರಿಯಲ್ಲಿಯೂ ಕರೆ ಬಂದರೆ ಅದಕ್ಕೆ ಸ್ಪಂದಿಸುತ್ತಾರೆ ಅದರೆ ವಿದ್ಯುತ್ ಕಟ್ ಅದ ತಕ್ಷಣ ಕರೆಂಟ್ ಅವಶ್ಚ್ಯ ಶಬ್ದಗಳಿಂದ ಮಾತನಾಡುತ್ತಾರೆ ಅದರೂ ನಾವು ಯಾವುದನ್ನು ಕಿವಿಗೆ ಹಾಕಿಕೊಳ್ಳದೇ ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ ಯುವಾ ಬ್ರಿಗೇಡ್ ತಂಡದವರು ನಮ್ಮ ಲೈನ್ ಮ್ಯಾನ್ ಗಳನ್ನು ಗುರುತಿಸಿ ಅಭಿನಂದನೆ ಸಲ್ಲಿಸುತ್ತಿರುವುದು ನಮ್ಮ ಜೀವನದಲ್ಲಿ ಅತ್ಯಂತ ಮಹತ್ವದ ದಿನ ಎಂದರು.

ಈ  ಸಂದರ್ಭದಲ್ಲಿ ಎಲ್ಲಾ ಲೈನ್ ಮ್ಯಾನಗಳಿಗೆ ಸಿಹಿವಿತರಿಸಿ ಶಕ್ತಿಮಾನ್ ಭಾವಚಿತ್ರದ ನೆನಪಿನ ಕಾಣಿಗೆ ನೀಡಿ ಗೌರವಿಸಲಾಯಿತ್ತು ಮತ್ತು ಪುಲ್ವಾಮ ದಾಳಿಯಲ್ಲಿ ಹುತತ್ಮಾರಾದ ಸೈನಿಕರಿಗೆ ಹಾಗೂ ಕೆಇಬಿ ಕರ್ತವ್ಯದಲ್ಲಿ ಮರಣಹೊಂದಿದ ಲೈನ್ ಮ್ಯಾನ್ ಗಳಿಗೂ ಮೌನಚರಣೆ ನಡೆಸುವ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪರುಶುರಾಮಪ್ಪ ಎಇಇ , ಧನಂಜಯ್ ಸಿಇಸಿ , ವಸಂತ ಕುಲೇರ್, ಮಲ್ಲೇಶ್ ಹೆಚ್.ಬಿ, ಯುವ ಬ್ರಿಗೇಡ್ ಕಾರ್ಯಕರ್ತರಾದ ವಿಕಾಸ್, ಆಕಾಶ್ ಅಮೀತ್, ಗಿರೀಶ್, ನವೀನ್, ಉಲ್ಲಾಸ್, ಮಂಜು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ ಸದಸ್ಯರು ಸಿಬ್ಬಂಧಿಗಳು ಇದ್ದರು.

News By: Raghu Shikari

Admin

Leave a Reply

Your email address will not be published. Required fields are marked *

error: Content is protected !!