ಶಿವಮೊಗ್ಗ: ರಾಜ್ಯದ ಪ್ರಸಿದ್ದ ಸಾಗರ ಮಾರಿಕಾಂಬಾ ಜಾತ್ರೆಗೆ ಚಾಲನೆ..!

ಶಿವಮೊಗ್ಗ: ರಾಜ್ಯದ ಪ್ರಸಿದ್ದ ಸಾಗರ ಮಾರಿಕಾಂಬಾ ಜಾತ್ರೆಗೆ ಚಾಲನೆ..!

ರಾಜ್ಯದ ಅತೀ ದೊಡ್ಡ ಎರಡನೇ ಜಾತ್ರೆ ಸುಪ್ರಸಿದ್ದ ಅದ್ಧೂರಿ ಸಾಗರ ಮಾರಿಕಾಂಬಾ ಇಂದಿನಿಂದ ಆರಂಭವಾಗಿದ್ದು ರಾಜ್ಯಾದ್ಯಂತ ಭಕ್ತರು ಆಗಮಿಸುತ್ತಿದ್ದು 3 ವರ್ಷಗಳಿಗೊಮ್ಮೆ ನಡೆಯುವ ಜಾತ್ರ ಮಹೋತ್ಸವಕ್ಕೆ ಜಾತ್ರ ಸಮಿತಿ ಸಕಲ ಸಿದ್ದತೆ ನಡೆಸಿಕೊಂಡಿದೆ.

ಇತಿಹಾಸ ಪ್ರಸಿದ್ದ ಸಾಗರ ಮಾರಿಕಾಂಬಾ ಜಾತ್ರೆ ಸುಮಾರು 15 ದಿನಗಳ ಕಾಲ ನಡೆಯಲಿದ್ದು ಈಗಾಗಲೇ ನಗರವೇಲ್ಲ ಮದುವಣಗಿತ್ತಿಯಂತೆ ಸಿಂಗರಗೊಂಡಿದೆ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಆಲಂಕಗೊಂಡಿದ್ದು  ಲಕ್ಷಾಂತರ ಜನರು ಆಗಮಿಸಿ 9 ದಿನಗಳ ಕಾಲ ದೇವಿಯ ದರ್ಶನ ಪಡೆದುಕೊಳ್ಳಲಿದ್ದು ಫೆ.26 ರಂದು ಜಾತ್ರೆ ಕೊನೆಗೊಳ್ಳುತ್ತದೆ ನಂತರ ಇನ್ನೂ 15 ದಿನಗಳ ಕಾಲ ನಗರ ವಿದ್ಯುತ್ ಆಲಂಕರ ಜನಜಂಗೂಳಿಯಿಂದ ಕಂಗೋಳಿಸಲಿದ್ದು ಜಾತ್ರೆಗೆ ನಾಡಿನಾದ್ಯಂತ ಜನರು ಆಗಮಿಸಲಿದ್ದಾರೆ ಜಾತ್ರೆಯ ಸೊಬಗನ್ನು ಸವಿಯಲಿದ್ದಾರೆ.

ಧಾರ್ಮಿಕ ವಿಧಿ ವಿಧಾನ ಆರಂಭ:

ಈಗಾಗಲೇ ಜಾತ್ರೆಗೆ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ಆರಂಭವಾಗಿದ್ದು ಅಂಕಿ ಹಾಕುವುದು ಮರ ಕಡಿಯುವುದು, ರಂಗ ಬರೆಯುವುದು ಸೀರೆ ಭಾಸಿಂಗ, ಆಭರಣ ಆಲಂಕರ ಬಾಗಿನ ಈಗೆ ಅನೇಕ ರೀತಿಯ ಸಕಲ ಧಾರ್ಮಿಕ ಕಾರ್ಯಗಳನ್ನು ಆರಂಭಿಸಲಾಗಿದ್ದು ಮಂಗಳವಾರ ಮಹಾ ಗಣಪತಿ ದೇವಾಲಯದಲ್ಲಿ ಮಾಂಗಲ್ಯ ಪೂಜೆ ಮಾಡಿಸಿ ಬೆಳಗ್ಗೆ ಬ್ರಹ್ಮಿ ಮಹೂರ್ತದಲ್ಲಿ ದೇವಿಗೆ ದೃಷ್ಠಿ ಇರಿಸಿ ದೇವಿಯ ಪ್ರತಿಷ್ಠಾಪನೆ ಮಹಾ ಪೂಜೆ ನಡೆಯುತ್ತದೆ.

ದೇವಿಯ ರಾಜಬೀದಿ ಉತ್ಸಹ:

ದೇವಿಯ ಪ್ರತಿಷ್ಠಾಪನೆಯ ನಂತರ ರಾತ್ರಿ 10 ಗಂಟೆಗೆ ಪೊತರಾಜನಿಂದ ಚಾಟಿ ಸೇವೆ, ಉಪ್ಪರ ಸಮಾಜದಿಂದ ಹಣ್ಣು ಒಪ್ಪಿಸುವ ಶಾಸ್ತ್ರ, ಶ್ರೀದೇವಿಯ ದಂಡಿನ ರಾಜಬೀದಿ ಉತ್ಸಹ ನಡೆಯಲಿದ್ದು

ಉತ್ಸವದಲ್ಲಿ ಕೆಳದಿ ಡೋಳ್ಳು ಕುಣಿತ, ಮಂಗಳೂರಿ  ಹುಲಿವೇಶ, ಗಾರುಡಿಗ ಗೊಂಬೆ, ಸೋಮನ ಕುಣಿತ, ನಂದಿಕುಣಿತ, ವೀರಾಗಾಸೆ, ಗೊಂಬೆ ಕುಣಿತ, ಭಜರಂಗಿ ಸ್ತಬ್ದ ಚಿತ್ರ ನಾಗರಿ, ಬಾರಿ ಡಿಜೆ ಸದ್ದಿನೊಂದಿ ಅದ್ದೂರಿ ಮೆರವಣಿಗೆ ನಡೆಯಲಿದ್ದು ಬುಧವಾರ ಬೆಳಗ್ಗೆ ದೇವಿಯ ಗಂಡನ ಮನೆಯ ದೇಗುಲಕ್ಕೆ ಪ್ರವೇಶವಾಗುತ್ತದೆ ನಂತರ ಕುರುಬ ಸಮಾಜದ ಮನೆಯಿಂದ ಘಟೇವು ತರುವುದು ಛಲವಾದಿ ಸಮಾಜದವರಿಂದ ಚರಗ ಚಲ್ಲುವುದು ಕೋತರಾಜನಿಂದ ಗಾವುಗರಿ ಕಾರ್ಯಕ್ರಮ ನಡೆಯುತ್ತದೆ.

ಶಾಲಾ ಕಾಲೇಜುಗಳಿಗೆ ರಜೆ ಶ್ರೀ ಮಾರಿಕಾಂಬಾ ಜಾತ್ರೆಯ ಅಂಗವಾಗಿ ನಗರ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಫೆ.18 ರಿಂದ ಫೆ.29 ರ ವರೆಗೂ ಸ್ಥಳೀಯ ರಜೆ ನೀಡಲಾಗಿದ್ದು ಇನ್ನೂ ಜಾತ್ರೆಗೆ ಆಗಮಿಸುವ ಜನರಿಗೆ ಅನ್ನಸಂತರ್ಪಣೆ ನಡೆಯಲಿದ್ದು ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಪಾನೀಯ ವ್ಯವಸ್ಥೆಯನ್ನು ಮಾಡಲಿದ್ದಾರೆ.

ದೇವಿಯ ಮೂರ್ತಿ ಆಕರ್ಷಣೆ:

ಮಾರಿಕಾಂಬಾ ಜಾತ್ರೆಯ ವಿಷೇಶ ಆಕರ್ಷಣೆಯಾದ ದೇವಿಯ ಬೃಹತ್ ರೌದ್ರವಾತರದ ಮೂರ್ತಿ ಪ್ರತಿ ಬಾರಿಯೂ ಗುಡಿಗಾರ್ ಮನೆತನದವರೇ ಬಣ್ಣ ಹಚ್ಚುತ್ತಿದ್ದು ರೌದ್ರ ಮುಖಹೊತ್ತ ದೇವಿಯ ಮೂರ್ತಿ ಎಲ್ಲಾರ ಗಮನ ಸೇಳೆಯುತ್ತಿದ್ದು 16 ಅಡಿ ಎತ್ತರ ಇರುವ ಮೂರ್ತಿ ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಪೂಜಿಲ್ಪಟಿದೆ ಈ ಬಾರಿಯೂ ಅದೆ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಎಲ್ಲಾರ ಗಮನ ಸೇಳೆಯುತ್ತಿದೆ.

Story by: ರಘು ಶಿಕಾರಿ..

Admin

Leave a Reply

Your email address will not be published. Required fields are marked *

error: Content is protected !!