ಶಿಕಾರಿಪುರ :ದೇಶಾದ್ಯಂತ ಪಿ ಎಫ್ ಐ ಸಂಘಟನೆಯನ್ನು ನಿಷೇಧಿಸಿ: ಹಿಂದೂ ಜನಜಾಗೃತಿ ಸಮಿತಿ..!

ಶಿಕಾರಿಪುರ :ದೇಶಾದ್ಯಂತ ಪಿ ಎಫ್ ಐ ಸಂಘಟನೆಯನ್ನು ನಿಷೇಧಿಸಿ: ಹಿಂದೂ ಜನಜಾಗೃತಿ ಸಮಿತಿ..!

ಶಿಕಾರಿಪುರ :ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಸಂಘಟನೆಯನ್ನು ದೇಶಾದ್ಯಂತ ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಪರಶುರಾಮ್ ಹೇಳಿದರು.

ಶಿಕಾರಿಪುರದ ತಾಲೂಕು ಕಚೇರಿ ಮುಂಭಾಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆದ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ  ಮಾತನಾಡಿದ ಅವರು ಪಿಎಫ್ಐ ಸಂಘಟನೆ ದೇಶಾದ್ಯಂತ ನಡೆಸಿದ ಹಿಂಸಾತ್ಮಕ ಪ್ರತಿಭಟನೆಗೆ 120 ಕೋಟಿ ರೂಗಳನ್ನು 73 ಖಾತೆಗಳಿಂದ ಖರ್ಚು ಮಾಡಿರುವ ಬಗ್ಗೆ ಜ್ಯಾರಿ ನಿರ್ದೇಶನಾಲಯದ ತನಿಖೆಯಿಂದ ಬಹಿರಂಗವಾಗಿದ್ದು ಅಷ್ಟೇ ಅಲ್ಲದೆ ಹಿಂದೂ ದೇವರು ಮಹಾಪುರುಷರ ಹೆಸರಿನಲ್ಲಿ ಟ್ರಸ್ಟ್ ಗಳನ್ನು ನಿರ್ಮಿಸಿ ಅದರ ಹೆಸರಿನಲ್ಲಿ ಹಣದ ವ್ಯವಹಾರ ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದರು.

 2006ರಲ್ಲಿ ಸ್ಥಾಪನೆಯಾದ ಖಟ್ಟರ್ ಇಸ್ಲಾಮಿಕ್ ಸಂಘಟನೆಯಾದ ಪಿಎಫ್ಐ  ದೇಶದಲ್ಲಿ ನಿಷೇಧಿತ  ಸಿಮಿ ಸಂಘಟನೆಯ ಭಯೋತ್ಪಾದಕರಿಂದ ತಮ್ಮ ಕಾರ್ಯಕರ್ತರಿಗೆ ಪ್ರಶಿಕ್ಷಣವನ್ನು ಕೊಡಿಸಿದ್ದು ಬೆಳಕಿಗೆ ಬಂದಿದೆ ಮತ್ತು ದೇಶಾದ್ಯಂತ ನಡೆದ ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಹತ್ಯೆ ಆರೋಪವು ಪಿಎಫ್ಐನ ಕಾರ್ಯಕರ್ತರ ಮೇಲಿದೆ ಈಗಾಗಲೇ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಮಾಡಿದ 108 ಕಾರ್ಯಕರ್ತರನ್ನು ಉತ್ತರಪ್ರದೇಶದಲ್ಲಿ ಬಂಧನ ಮಾಡಿದ್ದು ಉತ್ತರಪ್ರದೇಶದ ಸರ್ಕಾರ ಕೂಡ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದೆ ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ದೇಶಾದ್ಯಂತ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ ಅದರ ದುಷ್ಕೃತ್ಯಗಳಿಗೆ  ಕಡಿವಾಣ ಹಾಕಬೇಕಿದೆ ಎಂದರು.

ಸನಾತನ ಸಂಸ್ಥೆಯ ಕಾವೇರಿ ರಾಯ್ಕರ್ ಮಾತನಾಡಿ ಫೆಬ್ರವರಿ 7ರಂದು ಬಿಡುಗಡೆಯಾದ ವಿನೋದ್ ಚೋಪ್ರಾ ರವರ ಶಿಕಾರಾ ಚಲನಚಿತ್ರದಲ್ಲಿ ಭಯೋತ್ಪಾದಕರನ್ನು ಶಾಂತಿಪ್ರಿಯರು ಎಂದು ತೋರಿಸಲಾಗಿದೆ ಸಿನಿಮಾಗಳು ಸಮಾಜವನ್ನು ಪ್ರಭಾವಿತ ಮಾಡುವ ಮುಖ್ಯ ಮಾಧ್ಯಮವಾಗಿದೆ ಹೀಗಿರುವಾಗ ಕಾಶ್ಮೀರದಲ್ಲಿ ನಡೆದ ಲಕ್ಷಾಂತರ ಕಾಶ್ಮೀರಿ ಪಂಡಿತರ, ಮಕ್ಕಳ ಮತ್ತು ಸ್ತ್ರೀಯರ ಮೇಲಿನ ಅತ್ಯಾಚಾರ ಕೊಲೆ ಸುಲಿಗೆ ದೇವಸ್ಥಾನಗಳ ವಿಧ್ವಂಸ ಇಂತಹ ಭಯಂಕರ ಇತಿಹಾಸವನ್ನು ಮುಚ್ಚಿಟ್ಟು ಕಾಶ್ಮೀರದಲ್ಲಿ ಈ ಯಾವ ಘಟನೆಗಳು ನಡೆದಿಲ್ಲ ಎಂಬಂತೆ ಸಿನಿಮಾದಲ್ಲಿ ತೋರಿಸಲಾಗಿದೆ, ಈ ಸಿನಿಮಾದಿಂದಾಗಿ ಕಾಶ್ಮೀರಿ ಹಿಂದುಗಳ 30 ವರ್ಷಗಳ ಗಾಯವನ್ನು ಕೆದಕಿ ಉಪ್ಪು ಸವರಿದಂತೆ ಆಗಿದೆ

 ಬಾಲಿವುಡ್ ಸಿನಿಮಾ ಮಾಧ್ಯಮದಿಂದ ನಿರಂತರವಾಗಿ ಮೊಗಲರ, ಬ್ರಿಟಿಷರ ಗುಣಗಾನ ಮಾಡುವ ಪ್ರಯತ್ನ ನಡೆಯುತ್ತಿದ್ದು ನೈಜ ಇತಿಹಾಸವನ್ನು  ಮುಚ್ಚಿಡುವ  ಪ್ರಯತ್ನ  ಆಗುತ್ತಿದೆ ಹೀಗಾಗಿ  ಹಿಂದೂಗಳಿಗೆ  ನೋವನ್ನುಂಟು ಮಾಡಿರುವ  ಶಿಕಾರ ಚಲನಚಿತ್ರವನ್ನು  ಸೆನ್ಸಾರ್ ಬೋರ್ಡ್  ಕೂಡಲೇ  ನಿಷೇಧ ಮಾಡಬೇಕು ಎಂದರು. 

ಈ ಸಂದರ್ಭದಲ್ಲಿ  ವಿಶ್ವ ಹಿಂದೂ ಪರಿಷತ್  ಜಿಲ್ಲಾ ಉಪಾಧ್ಯಕ್ಷರಾದ  ಎಸ್.ವಿ.ಕೆ ಮೂರ್ತಿ,  ತಾಲೂಕು ಅಧ್ಯಕ್ಷರಾದ  ಭವರ್ ಸಿಂಗ್, ನಗರ ಅಧ್ಯಕ್ಷರಾದ  ರವೀಂದ್ರ, ಉಪಾಧ್ಯಕ್ಷರಾದ  ಪ್ರಕಾಶ್ ಎಂ. ಎಸ್,  ಗಿರೀಶ್ ಗೋರ್ಪಡೆ,  ಬಿ.ವಿ. ಮಂಜುನಾಥ್, ರವಿ ಸಿಂಗ್  ಸತೀಶ್  ಎ.ಬಿ.ವಿ.ಪಿ ಸಂಘಟನೆಯ  ಬೆಣ್ಣೆ ಪ್ರವೀಣ್, ಭದ್ರಾಪುರ ಹಾಲಪ್ಪ, ವಿಶ್ವಕರ್ಮ ಸಮಾಜದ  ಮಂಜಾಚಾರ್,  ಸವಿತ ಸಮಾಜದ  ಮಧುಕುಮಾರ್, ಪ್ರಕಾಶ್,  ಮಿಲನ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿಯ  ಪಾಂಡುರಂಗ ರಾಯ್ಕರ್, ಆನಂದ್, ವಿಶ್ವನಾಥ್, ಮುಕುಂದ, ಪುಷ್ಪ, ಲಲಿತ ರಾಯ್ಕರ್, ಮಣಿತ ಇದ್ದರು.

Admin

Leave a Reply

Your email address will not be published. Required fields are marked *

error: Content is protected !!