ರೈತರಿಂದ ನೇರವಾಗಿ ಕೆಎಂಎಫ್’ನಿಂದ ಮೆಕ್ಕೆಜೋಳ ಖರೀದಿ :ಕ್ವಿಂಟಲ್ಗೆ ಎಷ್ಟು..??
ಶಿವಮೊಗ್ಗ : ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ ರೈತರಿಂದ ಮೆಕ್ಕೆಜೋಳ ನೇರವಾಗಿ ಪ್ರತಿ ಕ್ವಿಂಟಲ್ಗೆ ₹ 2000 ( ಗೋಣಿಚೀಲ ಮತ್ತು ಸಾಗಾಣಿಕಾ ಪ್ರೋತ್ಸಾಹಧನ 238 ಸೇರಿ ) ಬೆಲೆಯಲ್ಲಿ ಖರೀದಿಸಲಾಗುವುದು ಎಂದು ಶಿಕಾರಿಪುರ ಪಶು ಆಹಾರ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಬಿ.ಟಿ.ಕಿಶೋರ್ ತಿಳಿಸಿದ್ದಾರೆ .
ರೈತರು ಸಂಕ ಮೆಕ್ಕೆಜೋಳ ಬೆಳೆದಿರುವ ರೈತರು ನ .9 ರಿಂದ ತಮ್ಮ ಆಧಾರ್ ಸಂಖ್ಯೆ FRUITS ಸಂಖ್ಯೆಯೊಂದಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ .
ಕರ್ನಾಟಕ ಹಾಲು ಮಹಾಮಂಡಳ ಶಿಕಾರಿಪುರ ಪಶು ಆಹಾರ ಘಟಕಕ್ಕೆ ಅವಶ್ಯವಿರುವ 25000 ಮೆಟ್ರಿಕ್ ಟನ್ ಮೆಕ್ಕಜೋಳವನ್ನು ಶಿವಮೊಗ್ಗ , ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಪ್ರದೇಶದ ರೈತರಿಂದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರಸಿರಿ ಮತ್ತು ಸರ್ಕಾರದ ಕೃಷಿ ಇಲಾಖೆ ಸಿದ್ಧಪಡಿಸಿರುವ FRUITS ತಂತ್ರಾಂಶದ ಮೂಲಕಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಅನುಷ್ಠಾನಕ್ಕೆ ತರುವುದಾಗಿ ತಿಳಿಸಿದ್ದಾರೆ .
ಪ್ರತಿಯೊಬ್ಬ ರೈತರಿಂದ ಗರಿಷ್ಠ 500 ಕ್ವಿಂಟಲ್ ಮೆಕ್ಕೆ ಜೋಳ ಖರೀದಿಗೆ ಸೀಮಿತಗೊಳಿಸಿದ್ದು , ಮಧ್ಯವರ್ತಿ ಗಳಿಗೆ ಅವಕಾಶ ಇರುವುದಿಲ್ಲ .
ಈ ಅವಕಾಶವನ್ನು ಉಪಯೋಗಿಸಿಕೊಂಡು ರೈತರೇ ನೇರವಾಗಿ ಸರಬರಾಜು ಮಾಡಬಹುದಾಗಿದೆ ಹೆಚ್ಚಿನ ಮಾಹಿತಿಗೆ ಕಚೇರಿ ದೂ : 96060-12571 ಇಲ್ಲಿಗೆ ತಿಳಿಸಲಾಗಿದೆ ಸಂಪರ್ಕಿಸಬಹುದು.
News by Raghu shikari-7411515737