ಶಿಕಾರಿಪುರ ಕಲ್ಮನೆ ಬಳಿ ಕೊಪ್ಪದಕೇರೆ ಗ್ರಾಮದಲ್ಲಿ ಬಾಲಕಿ ಅನುಮಾನಾಸ್ಪದ ಸಾವು..!
ಶಿಕಾರಿಪುರ ತಾಲೂಕಿನ ಅಂಜನಾಪುರ ಡ್ಯಾಂ ಸಮೀಪ ಕಲ್ಮನೆ ಬಳಿ ಕೊಪ್ಪದಕೆರೆ ಗ್ರಾಮದಲ್ಲಿ 9 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು ಮೃತದೇಹ ಪತ್ತೆಯಾಗಿದೆ.
ಅದೇ ಗ್ರಾಮದ 9 ವರ್ಷದ ಬಾಲಕಿಯನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಹಾಕಲಾಗಿದೆ ಎಂದು ತಿಳಿದು ಬಂದಿದ್ದು ಈ ಪ್ರಕರಣದಲ್ಲಿ ಸಂಬಂಧಿಸಿದ ಸಾಕಷ್ಟು ಅನುಮಾನ ಕಂಡು ಬಂದಿದ್ದು ಪೋಷಕರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೋಲಿಸರು ತನಿಖೆಯನ್ನು ಆರಂಭಿಸಿದ್ದಾರೆ.