ಕಲುಷಿತ ಭ್ರಾಂತೇಶ ಕಲ್ಯಾಣಿ, ಭಕ್ತ ಪಾಲಿನ ತೀರ್ಥ ವಿಷವಾಗುತ್ತಿದೆಯೇ…?

ಕಲುಷಿತ ಭ್ರಾಂತೇಶ ಕಲ್ಯಾಣಿ, ಭಕ್ತ ಪಾಲಿನ ತೀರ್ಥ ವಿಷವಾಗುತ್ತಿದೆಯೇ…?

ಶಿಕಾರಿಪುರ ಪಟ್ಟಣದ ಆರಾಧ್ಯದೈವ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಶ್ರೀ ಬ್ರಾಂತೇಶ ಕಲ್ಯಾಣಿ ಕಲುಷಿತಗೊಂಡಿದ್ದು ಭಕ್ತರ ಪಾಲಿನ ತೀರ್ಥ ವಿಷವಾಗಿ ಪರಿಣಮಿಸುತ್ತಿದೆ ಎನ್ನುವ ಪ್ರಶ್ನೆಗಳು ಮೂಡುತ್ತಿದೆ.

ಹೌದು ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಇದೆ ಮಂಗಳವಾರ ಜರಗಲಿದ್ದು ಜಾತ್ರಾ ಮಹೋತ್ಸವಕ್ಕೆ ರಾಜ್ಯದ್ಯಂತ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಬ್ರಾಂತೇಶ ಕಲ್ಯಾಣಿಗೆ ಆಗಮಿಸಿ ಕಲ್ಯಾಣಿಯಲ್ಲಿರುವ ನೀರನ್ನು ತೀರ್ಥವೆಂದು ಕುಡಿಯುತ್ತಾರೆ ಹಾಗೂ ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ ಆದರೆ ಕಲ್ಯಾಣಿಯ ನೀರು ಅನೇಕ ವರ್ಷಗಳಿಂದ ಸ್ವಚ್ಛಗೊಳ್ಳದೆ ಕಲುಷಿತಗೊಂಡಿದೆ.

ಕಲ್ಯಾಣಿಯಲ್ಲಿ 3-4 ಸಾವು..!
ಭ್ರಾಂತೇಶ ಕಲ್ಯಾಣಿಯಲ್ಲಿ ಈ ವರೆಗೂ ಮುಳುಗಿ 3-4 ಜನರು ಸಾವನ್ನಪ್ಪಿದ್ದಾರೆ. ಈ ನೀರನ್ನು ಖಾಲಿ ಮಾಡಿ ಶುದ್ದೀಕರಣ ಮಾಡಿ ಹೊಸ ನೀರು ತುಂಬಿಸುವ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾಗಿಲ್ಲ

‌ಈ‌ ನೀರಿನಲ್ಲಿಯೇ ನಡೆಯುತ್ತೆ ಹುಚ್ಚಪ್ಪನ ತೆಪೋತ್ಸವ..!
ಭ್ರಾಂತೇಶ ಕಲ್ಯಾಣಿಯಲ್ಲಿ ಪ್ರತಿ ವರ್ಷವೂ ಕಾರ್ತಿಕಾ ದೀಪೋತ್ಸವ ಹಾಗೂ ತೆಪೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಭಕ್ತರು ನೇರವೇರಿಸುತ್ತಾರೆ.

ನಿರ್ವಹಣೆ ಇಲ್ಲದೆ ವಿಷವಾದ ನೀರು..!

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶ್ರೀ ಬ್ರಾಂತೇಶ ಉದ್ಯಾನವನ ಮತ್ತು ಕಲ್ಯಾಣಿ ನಿರ್ಮಾಣ ಮಾಡಲಾಗಿತ್ತು ಹತ್ತಾರು ವರ್ಷ ಕಳೆದರೂ ಕಲ್ಯಾಣಿಯೂ ಸ್ವಚ್ಛಗೊಂಡಿರುವುದಿಲ್ಲ ಇತ್ತೀಚೆಗೆ ಎರಡು ವರ್ಷದ ಹಿಂದೆ ಋಗ್ವೇದ ಸಂಸ್ಥೆಯ ವತಿಯಿಂದ ಕಲ್ಯಾಣಿಯ ನೀರನ್ನು ಹೊರಹಾಕಿ ಸ್ವಚ್ಛಗೊಳಿಸಲು ವಾರಗಟ್ಟಲೆ ಯುವಕರು ಹರಸಾಹಸ ಪಟ್ಟಿದ್ದರು.

ನೀರಾವರಿ ಇಲಾಖೆಯ ಅಧಿಕಾರಿಗಳು ಪುರಸಭೆ ಹಾಗೂ ಮುಜರಾಯಿ ಇಲಾಖೆ ನಿರ್ಲಕ್ಷವು ಈ ಕಲ್ಯಾಣಿ ವಿಷಯದಲ್ಲಿ ಎದ್ದು ಕಾಣುತ್ತಿದೆ. ಜನರ ಪಾಲಿನ ತೀರ್ಥವೊ ಹತ್ತಾರು ವರ್ಷಗಳಿಂದ ಒಂದೇ ಕಡೆ ಶೇಖರಣೆ ಗೊಂಡಿರುವ ನೀರು ಕಲುಷಿತಗೊಂಡು ಸಾಕಷ್ಟು ಗಲೀಜು ಆಗಿದ್ದು ಒಂದು ಕಡೆ ಚರಂಡಿಯ ನೀರು ಕೂಡ ಸೊಸಿಕೊಂಡು ಕಲ್ಯಾಣಿಯನ್ನು ಸೇರುತ್ತಿದೆ ಈ ಬಗ್ಗೆ ಯಾರೂ ಕೂಡ ಗಮನವನ್ನು ಹರಿಸುತ್ತಿಲ್ಲ.
ಕಲ್ಯಾಣಿ ನಿರ್ಮಾಣದ ವೇಳೆಯಲ್ಲಿ ನೀರು ಹೊರ ಹಾಕಲು ಯಾವುದೇ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಕೆರೆಯಿಂದ ನೇರವಾಗಿ ಕಲ್ಯಾಣಿಗೆ ನೀರು ಬರುವಂತೆ ವ್ಯವಸ್ಥೆಯನ್ನು ಮಾಡಿದ್ದು ಕಲ್ಯಾಣಿಯಲ್ಲಿ ನೀರು ಎಂದಿಗೂ ಕೂಡ ಕಾಲಿ ಆಗುವುದಿಲ್ಲ ಈ ರೀತಿ ಅವೈಜ್ಞಾನಿಕ ಕಲ್ಯಾಣಿ ನಿರ್ಮಾಣ ಮಾಡಿರುವುದರಿಂದ ಈ ಸಮಸ್ಯೆ ಎದ್ದು ಕಾಣುತ್ತಿದ್ದು ಈ ಜಾತ್ರಾ ಸಂದರ್ಭದಲ್ಲಿಯಾದರು ಕೂಡ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Admin

Leave a Reply

Your email address will not be published. Required fields are marked *

error: Content is protected !!