ಶಿಕಾರಿಪುರ: ಚನ್ನಹಳ್ಳಿ ಗ್ರಾಮದಿಂದ ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಯುವಕರ ಪಾದಯಾತ್ರೆ

ಶಿಕಾರಿಪುರ ತಾಲೂಕಿನ ಚನ್ನಹಳ್ಳಿ ಗ್ರಾಮದಿಂದ ಹುಬ್ಬಳ್ಳಿಯ ಶ್ರೀ ಸಿದ್ದರೂಢ ಮಠಕ್ಕೆ ಗುರುವಾರ ಭಕ್ತರು ಪಾದಯಾತ್ರೆ ಆರಂಭಿಸಿದರು.

ಶಿಕಾರಿಪುರ ತಾಲೂಕಿನ ಚನ್ನಹಳ್ಳಿ ಗ್ರಾಮದಿಂದ ಪ್ರತಿ ವರ್ಷ ಯುವಕರು ಶ್ರವಾಣ ಮಾಸದ ಪ್ರಯುಕ್ತ ಸಿದ್ದರೂಢ ಮಠಕ್ಕೆ ಪಾದಯಾತ್ರೆಯನ್ನು ಕೈಗೊಳುತ್ತಾರೆ.

ಈ ವರ್ಷ ಸುಮಾರು 60ಕ್ಕೂ ಹೆಚ್ಚು ಸಿದ್ದರೂಢ ಸ್ವಾಮಿಯ ಭಕ್ತರು ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ.

ಶಿಕಾರಿಪುರದಿಂದ ಸುಮಾರು 150 ಕಿಲೋಮೀಟರ್ ದೂರ ಇದ್ದು ಎರಡು ಮೂರು ದಿನಗಳ ಕಾಲ ಪಾದಯಾತ್ರೆ ಮೂಲಕ ಹುಬ್ಬಳ್ಳಿಯ ಸಿದ್ದರೂಢ ಮಠಕ್ಕೆ ತಲುಪುತ್ತಾರೆ.

ಅಧುನಿಕತೆ ಜೀವನದಲ್ಲಿ ಇಂದಿನ ಯುವಕರು ಭಕ್ತಿ ಧಾರ್ಮಿಕ ಶ್ರದ್ಧೆಗಳನ್ನು ಮರೆಯುತ್ತಿರುವ ದಿನಮಾನದಲ್ಲಿ ಈ ಗ್ರಾಮದ ಯುವಕರು ಮಾದರಿಯಾಗಿದ್ದಾರೆ.
News by: Raghu Shikari-7411515737