ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾಗಿ ಆರ್.ಎಂ.ಮಂಜುನಾಥ ಗೌಡ ನೇಮಕ

ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾಗಿ ಆರ್.ಎಂ.ಮಂಜುನಾಥ ಗೌಡ ನೇಮಕ

ಶಿವಮೊಗ್ಗ :  ಡಿಸಿಸಿ ಬ್ಯಾಂಕ್ ನ ಆಡಳಿತ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಕಂಡು ಬಂದಿದೆ ಆಡಳಿತ ಮಂಡಳಿಯಿಂದ ವಜಾಗೊಂಡಿದ್ದ ಆರ್.ಎಂ ಮಂಜುನಾಥ್  ಗೌಡರನ್ನ ಸರ್ಕಾರ ಕೃಷಿಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ನೇಮಕ ಮಾಡಿದೆ.

ಈ ತನಕ ಕೃಷಿಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿದ್ದ ದುಗ್ಗಪ್ಪ ಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಆರ್ ಎಂ ಮಂಜುನಾಥ್ ಗೌಡ ನೇಮಕಗೊಂಡಿದ್ದಾರೆ. 

ಇಂದು ನಡೆದ ಡಿಸಿಸಿ ಬ್ಯಾಂಕ್ ನ ಆಡಳಿತ ಮಂಡಳಿ ಸಭೆಯಲ್ಲಿ ಆರ್ ಎಂ ಮಂಜುನಾಥ್ ಗೌಡರು ಪಾಲ್ಗೊಂಡರು. ಅವರನ್ನು ಬ್ಯಾಂಕ್ ನಿರ್ದೇಶಕರು ಆತ್ಮೀಯವಾಗಿ ಸ್ವಾಗತಿಸಿದರು. 

ಈ ಮೂಲಕ ಮೂರು ವರ್ಷಗಳ ನಂತರ  ಡಿಸಿಸಿ ಬ್ಯಾಂಕ್ ನ‌ ಆಡಳಿತ ಮಂಡಳಿಯ ಮೇಲೆ ಗೌಡರು ಮತ್ತೊಮ್ಮೆ ಹಿಡಿತ ಸಾಧಿಸಿದ್ದಾರೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!