ಪ್ರವಾಸದ ನೆಪದಲ್ಲಿ ಕರೆದೊಯ್ದು ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ..!

ಪ್ರವಾಸದ ನೆಪದಲ್ಲಿ ಕರೆದೊಯ್ದು ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ..!

ಶಿವಮೊಗ್ಗ: ಪ್ರವಾಸಕ್ಕೆಂದು ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಇಬ್ಬರು ಯುವಕರು ಅತ್ಯಾಚಾರ ಮಾಡಿದ್ದಾರೆ ಎಂದು ಸಾಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಗರ ತಾಲೂಕಿನ ಶಾಬಾಜ್‌ (26) ಅಜಯ್ (32) ಎಂಬ ಇಬ್ಬರು ಈ ಕೃತ್ಯ ವೆಸಗಿದ್ದಾರೆ ಎಂದು ಅವರ ಮೇಲೆ ಪೋಕ್ಸೊ,ಅಟ್ರಾಸಿಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಪರಿಶಿಷ್ಟ ಕುಟುಂಬಕ್ಕೆ ಸೇರಿದ ಬಾಲಕಿಗೆ ಪರಿಚಿತ ಇರುವ ಈ ದುಷ್ಟರು ಆಕೆಯನ್ನು ಪ್ರವಾಸದ ನೆಪದಲ್ಲಿ ಕರೆದೊಯ್ದು ದುಷ್ಕೃತ್ಯ ಮೆರೆದಿದ್ದಾರೆ ಎಂದು ತಿಳಿದು ಬಂದಿದೆ.

ಶಾಲೆಗೆ ಹೋಗುವ ಈ ಹುಡುಗಿಯನ್ನು ಸೋಹದರರ ಭಾವನೆಯಿಂದ ಆತ್ಮೀಯತೆ ಬೆಳೆಸಿಕೊಂಡು ಯುವತಿಯ ಸಂಪರ್ಕದಲ್ಲಿದ್ದ ಇವರು ಆಗಸ್ಟ್‌ 19ರಂದು ಪ್ರವಾಸದ ನೆಪದಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದು ಶನಿವಾರ ಶಿವಮೊಗ್ಗದಲ್ಲಿ ಸುತ್ತಾಡಿಸಿದ ಬಳಿಕ ಆಕೆಯನ್ನು ಜನ ನಿಬಿಡವಾದ ಜಾಗಕ್ಕೆ ಕರೆದುಕೊಂಡು ಹೋಗಿ ಆಕೆಗೆ ಪ್ರಜ್ಞೆ ತಪ್ಪಿಸು ಪಾನೀಯ ನೀಡಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

ಬಳಿಕ ಆಕೆಯನ್ನು ಸಾಗರಕ್ಕೆ ಮರಳಿ ತಂದು ಬಿಟ್ಟಿದ್ದಾರೆ ಆದರೆ, ಯಾವ ಕಾರಣಕ್ಕು ವಿಷಯವನ್ನು ಮನೆಯಲ್ಲಿ ತಿಳಿಸಬಾರದು, ತಿಳಿಸಿದರೆ ನಿನಗೇ ತೊಂದರೆ ಎಂದು ಹೆದರಿಸಿದ್ದಾರೆ. ಆದರೆ ಮನೆಯಲ್ಲಿ ಯುವತಿಯ ಸ್ಥಿತಿ‌ ನೋಡಿ ವಿಚಾರಿಸಿದಾಗ ನಡೆದ ಘಟನೆ ವಿವರಿಸಿದ್ದಾಳೆ
ಪೋಷಕರು ಕೂಡಲೇ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!