ಮನೆ ಒಳಗೆ ಹೈಟೆಕ್ ಟೆಂಟ್’ನಲ್ಲಿ ಗಾಂಜಾ ಬೆಳೆ ಮೂವರು ಮೇಡಿಕಲ್‌ ವಿದ್ಯಾರ್ಥಿಗಳು‌ ಅಂದರ್..!

ಮನೆ ಒಳಗೆ ಹೈಟೆಕ್ ಟೆಂಟ್’ನಲ್ಲಿ ಗಾಂಜಾ ಬೆಳೆ ಮೂವರು ಮೇಡಿಕಲ್‌ ವಿದ್ಯಾರ್ಥಿಗಳು‌ ಅಂದರ್..!

ಶಿವಮೊಗ್ಗದಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಹೈಟೆಕ್ ಗಾಂಜಾ ವ್ಯಾಪಾರ ಬೆಳಕಿಗೆ ಬಂದಿದೆ ತಾವೇ ಸ್ವತಹ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಮೆಡಿಕಲ್ ವಿದ್ಯಾರ್ಥಿಗಳ ಜಾಲ ಪತ್ತೆ ಮಾಡುವಲ್ಲಿ ಶಿವಮೊಗ್ಗ ಪೋಲಿಸರು ಯಶಸ್ವಿಯಾಗಿದ್ದಾರೆ.

ತಮಿಳುನಾಡು ಹಾಗೂ ಕೇರಳದಿಂದ ಶಿವಮೊಗ್ಗ ಬಂದು ಬಾಡಿಗೆ ಮನೆ ಪಡೆದು ಗಾಂಜಾ ದಂಧೆ ನಡೆಸುತ್ತಿದ್ದ ಮೆಡಿಕಲ್ ಪದವಿ ಮುಗಿಸಿ ಇಂಟರ್ನ್ ಶಿಪ್ ಮಾಡುತ್ತಿರುವ ಶಿವಮೊಗ್ಗದ ಪ್ರತಿಷ್ಟಿತ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ತಾವು ಬಾಡಿಗೆ ಪಡೆದಿದ್ದ ಮನೆಯ ಒಳಗೇ ವಿಭಿನ್ನ ತಂತ್ರಜ್ಞಾನದಿಂದ ಗಾಂಜಾ ಬಾಡಿಗೆ ಮನೆಯ ಒಳಗೆ ಹೈಟೆಕ್ ಟೆಂಟ್ ನಿರ್ಮಾಣ ಬೆಳೆಯುತ್ತಿದ್ದರು.

ಆ ಟೆಂಟ್ ಒಳಗೆ ಪಾಟ್ ಗಳಲ್ಲಿ ಗಾಂಜಾ ಗಿಡ ಬೆಳೆಯುತ್ತಿದ್ದರು ಟೆಂಟ್ ಒಳಗೆ ಗಾಂಜಾ ಗಿಡಗಳಿಗೆ ಬೇಕಾದ ಬೆಳಕಿಗಾಗಿ ಎಇಡಿ ಪ್ಯಾನಲ್ ಗಳ ಅಳವಡಿಕೆ ಇನ್ನು ಗಿಡಗಳಿಗೆ ಬೇಕಾದ‌ ಗಾಳಿಗಾಗಿ ಫ್ಯಾನ್ ಗಳು ಹಾಗೂ ಎಕ್ಸಿಟ್ ಫ್ಯಾನ್ ಗಳ ಅಳವಡಿಕೆ ಗಾಂಜಾ ಬೀಜ, ಗಾಂಜಾ ಗಿಡ ಬೆಳೆಸಲು ಪಾಟ್ ಗಳು, ಹೈಟೆಕ್ ಶೆಡ್, ರಸಗೊಬ್ಬರ, ಎಇಡಿ ಲೈಟ್ ಹೀಗೆ ಎಲ್ಲವನ್ನೂ ಆನ್ ಲೈನ್ ಮೂಲಕವೇ ಖರೀದಿ ಮಾಡಿ ಯಾರಿಗೂ ಗೊತ್ತಿಲ್ಲದಂತೆ ಮನೆಯೊಳಗೆ ಮಾಡಿಕೊಂಡಿದ್ದ‌ ಟೆಂಟ್ ಒಳಗೆ ಗಾಂಜಾ ಬೆಳೆಯುತ್ತಿದ್ದರು.

ಕಟಾವಿಗೆ ಬಂದ ಗಾಂಜಾ ಗಿಡಗಳನ್ನು ಕಟಾವು ಮಾಡಿ ಪುಡಿ ಮಾಡಿ ಪ್ಯಾಕೇಟ್ ಗಳಿಗೆ ತುಂಬಿಸಿ ನಿರಂತರವಾಗಿ ಮಾರಾಟ ಮಾಡುತ್ತಿದ್ದರು ಕೆಲ ವರ್ಷಗಳಿಂದ‌ ನಿರಂತರವಾಗಿ ನಡೆಯುತ್ತಿದ್ದ ಹೈಟೆಕ್ ಗಾಂಜಾ ಬೆಳೆ ಹಾಗೂ ಮಾರಾಟ ದಂಧೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನೇ ಗುರಿಯಾಗಿಟ್ಟುಕೊಂಡು ಗಾಂಜಾ ದಂಧೆ ನಡೆಸುತ್ತಿದ್ದರು.

ಸಣ್ಣ ಸುಳಿವಿನ ಮೇರೆಗೆ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಈ ವೇಳೆ ಮೆಡಿಕಲ್ ವಿದ್ಯಾರ್ಥಿಗಳ ಹೈಟೆಕ್ ಗಾಂಜಾ ಮಾರಟ ಪತ್ತೆಯಾಗಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮೆಡಿಕಲ್ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!