ಮನಸ್ಸನ್ನು ಸರಿಯಾಗಿ ಇಟ್ಟುಕೊಂಡರೇ ಒತ್ತಡ ಕಡಿಮೆ‌ ಆಗುತ್ತದೆ : ಡಾ.ಕೆ.ಎಸ್ ಪವಿತ್ರ

ಮನಸ್ಸನ್ನು ಸರಿಯಾಗಿ ಇಟ್ಟುಕೊಂಡರೇ ಒತ್ತಡ ಕಡಿಮೆ‌ ಆಗುತ್ತದೆ : ಡಾ.ಕೆ.ಎಸ್ ಪವಿತ್ರ

ಶಿಕಾರಿಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ, ಸ್ಪಂದನ ವೇದಿಕೆ ಮತ್ತು ಪೋಲಿಸ ಇಲಾಖೆ ಸಹಕಾರದೊಂದಿಗೆ ಪೋಲಿಸರಿಗೆ ಮತ್ತು ಕಾಲೇಜಿನ ಉಪನ್ಯಾಸಕರಿಗೆ ಒತ್ತಡ‌ ನಿರ್ವಹಣೆ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.

ಈ ವೇಳೆ ಮನೋರೋಗ ತಜ್ಞೆ ಡಾ.ಕೆ.ಎಸ್ ಪವಿತ್ರ ಅವರು ಕಾವ್ಯ ಕನ್ನಿಕ‌,ಸಂಗೀತ,ನೃತ್ಯ,ಕಾವ್ಯ ಗಳ‌ಮೂಲಕ‌ ಒತ್ತಡ ನಿವಾರಣೆ ಬಗ್ಗೆ ವಿಷೇಶ ಕಾರ್ಯಕ್ರಮ ನಡೆಸಿದರು‌.

ಈ ವೇಳೆ ಮಾತನಾಡಿದ ಅವರು ಮನಸ್ಸನ್ನು ಸರಿಯಾಗಿ ಇಟ್ಟುಕೊಂಡರೇ ಒತ್ತಡವನ್ನು ನಿಭಾಹಿಸಬುದು ಪೋಲಿಸರ ಮೇಲಿನ ಒತ್ತಡ ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಒತ್ತಡಗಳು ಎಲ್ಲಾ ಪ್ರತಿಯೊಂದು ವೃತ್ತಿಯಲ್ಲೂ ಕೂಡ ಒತ್ತಡಗಳು ಇರುತ್ತೆ ಪೋಲಿಸರಿಗೆ ಹೆಚ್ಚಿನ ಒತ್ತಡ ಇರುತ್ತದೆ ಹಿಂಸೆ, ಕೊಲೆ,‌ಒಡೆದಾಟ ಗಳ ನಡುವೆ ಅಪರಾಧ ಜಗತ್ತಿನಲ್ಲಿ ನಮ್ಮ ಸಂವೇದನೆ ಕಡಿಮೆ ಆಗಿರುತ್ತೆ ಸಂಗೀತ ಕಾವ್ಯ ಸಾಹಿತ್ಯಗಳಲ್ಲಿ ನಾವು ತೊಡಗಬೇಕು ಆಗ ಕಡಿಮೆ‌ಯಾಗುತ್ತದೆ ಎಂದರು.

ಕಾರ್ಯಕ್ರಮವನ್ನ ಸಿಪಿಐ ರುದ್ರೇಶ್ ಮಾತನಾಡಿ ಸ್ಪರ್ಧಾತ್ಮಕ ಜಗತ್ತು ಒತ್ತಡಗಳು ಇಂದಿನ ದಿನಗಳಲ್ಲಿ ಅತೀ ಹೆಚ್ವು ಒತ್ತಡವನ್ನು ಪೋಲಿಸರು ನಿಭಾಯಿಸುತ್ತಾರೆ‌ 24 ಗಂಟೆಯೂ ಪೋಲಿಸರು ಕರ್ತವ್ಯದಲ್ಲಿ ಇರುತ್ತೆ ಯಾವ ಸಮಯದಲ್ಲೂ ನಾವು ಸಿದ್ದರಿರಬೇಕು ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿ ಆಗಲಿದೆ ಎಂದರು.

ಮುಖ್ಯ ಅತಿಥಿ ರಾಘವೇಂದ್ರ ಎಸ್‌ಎಸ್ ಮಾತನಾಡಿ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯ ಒತ್ತಡವನ್ನು ಅನುಭವಿಸುತ್ತಾರೆ ಸದಾ ಮೊಬೈಲ್ ಜೊತೆ ಒತ್ತಡವನ್ನು ನಾವು ಜೊತೆಯಲ್ಲಿ ಇಟ್ಟುಕೊಂಡು ಇರುತ್ತೇವೆ ಅದನ್ನು ಮಿತವಾಗಿ ಬಳಸಿ ಜೀವನವನ್ನು ಒತ್ತಡ ರಹಿತವಾಗಿಸಿಕೊಳ್ಳಬೇಕು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿದೆ ವಿದ್ಯಾರ್ಥಿಗಳಿಗೂ ಈ ರೀತಿ ಕಾರ್ಯಾಗಾರ ಪೂರಕವಾಗಲಿದೆ ಎಂದರು.

ಕಾರ್ಯಕ್ರಮದ ಪ್ರಾಸ್ತಾವಿಕವನ್ನು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಂಜುಳಾ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೇಖರ್,‌ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ವಿನಯ್,ಉಪನ್ಯಾಸಕರಾದ ಅಜಯ್ ಕುಮಾರ್, ಡಾ‌‌ ಕುಂಸಿ ಉಮೇಶ್, ಡಾ‌.ಅನಿಲ್‌ಕುಮಾರ್,ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!