ಬಿಜೆಪಿ ಕಾರ್ಯಕರ್ತನ ಮೇಲೆ ಪೊಲೀಸರ ಹಲ್ಲೆಪೊಲೀಸ್ ಠಾಣೆ ಎದುರು ಕಾರ್ಯಕರ್ತರ ಪ್ರತಿಭಟನೆ..!

ಶಿಕಾರಿಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೊಗಿದ ಬಿಜೆಪಿ ಕಾರ್ಯಕರ್ತ ಗ್ರಾಮ ಪಂಚಾಯತಿ ಸದಸ್ಯ ಹೊತ್ತನಕಟ್ಟೆ ಮಧು ಎಂಬುವವರ ಮೇಲೆ ಕರ್ತವ್ಯ ನಿರತ ಪೋಲಿಸ್ ಪೊಲೀಸ್ ಪೇದೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಕಾರ್ಯಕರ್ತರು ಆಕ್ರೋಷ ವ್ಯಕ್ತ ಪಡಿಸಿದ್ದಾರೆ.

ಹೊತ್ತನಕಟ್ಟೆ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಬಿಜೆಪಿ ಯುವ ಮುಖಂಡ ಮಧು ಅವರ ಬೈಕ್ ಕಳೆದುಹೊಗಿದ್ದು ಈ ಸಂಬಂಧಿಸಿದಂತೆ ದೂರು ನೀಡಲು ಹೋಗಿದ ಸಂದರ್ಭದಲ್ಲಿ ಪೋಲಿಸ್ ಪೇದೆ ವೆಂಕಟೇಶ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕಾರ್ಯಕರ್ತನ ಮೇಲೆ ಪೋಲಿಸರ ದೌರ್ಜನ್ಯ ಖಂಡಿಸಿ ಎಂಐಡಿಬಿ ಅಧ್ಯಕ್ಷರಾದ ಗುರುಮೂರ್ತಿ ನೇತೃತ್ವದಲ್ಲಿ ಪೋಲಿಸ್ ಠಾಣೆ ಎದುರು ಜಮಾಯಿಸಿ ಪೋಲಿಸ್ ಪೇದೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
News by Raghu shikari-7411515737