ಶಿಕಾರಿಪುರ ಪಟ್ಟಣದಲ್ಲಿ ಸಂಭ್ರಮದ ಹೋಳಿ ಹಬ್ಬ ಆಚರಣೆ…..!!

ಶಿಕಾರಿಪುರ ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಹೋಳಿ ಹಬ್ಬದ ಆಚರಣೆಯನ್ನು ನಡೆಸಲಾಯಿತು.

ಪಟ್ಟಣದ ದೊಡ್ಡಪೇಟೆಯ ಅರುಣೋದಯ ತರುಣ ಯುವಕ ಸಂಘದ ವತಿಯಿಂದ ದೊಡ್ಡಪೇಟೆಯಲ್ಲಿ ಹೋಳಿ ಕಾಮಣ್ಣನನ್ನು ಸುಡುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆಯನ್ನು ನೀಡಿದ್ದು

ಯುವಕರು ಪರಸ್ಪರ ಬಣ್ಣವನ್ನು ಹಚ್ಚಿಕೊಳ್ಳುವ ಮೂಲಕ ಕೋಳಿ ಹಬ್ಬವನ್ನು ಡಿಜೆ ಸಾಂಗ್ ನೃತ್ಯವನ್ನು ಮಾಡುವ ಮೂಲಕ ಆಚರಿಸಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಡಿಜೆ ಸಾಂಗ್ ಹಾಗೂ ಅನೇಕ ವಾದ್ಯಗಳೊಂದಿಗೆ ಯುವಕರು ನೃತ್ಯವನ್ನು ಮಾಡುತ್ತಾ ಪರಸ್ಪರ ಬಣ್ಣವನ್ನು ಹಚ್ಚಿಕೊಳ್ಳುವ ಮೂಲಕ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರ ದಿಂದ ಆಚರಿಸಿದ್ದಾರೆ.
News by Raghu Shikari-7411515737