ಅಡಿಕೆ ಎಲೆಚುಕ್ಕೆ ರೋಗಕ್ಕೆ ಔಷಧಿ ನೀಡದಿದ್ದರೆ ಉಗ್ರ ಹೋರಾಟ – ಕಿಮ್ಮನೆ ರತ್ನಾಕರ್

ಅಡಿಕೆ ಎಲೆಚುಕ್ಕೆ ರೋಗಕ್ಕೆ ಔಷಧಿ ನೀಡದಿದ್ದರೆ ಉಗ್ರ ಹೋರಾಟ – ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ : ತಾಲೂಕಿನ ಆಗುಂಬೆ, ಮುತ್ತೂರು, ಸೇರಿದಂತೆ ನಾಲ್ಕು ಹೋಬಳಿಗಳಲ್ಲಿ ರೈತರ ಜೀವನಾಡಿ ಯಾಗಿರುವ ಅಡಕೆಗೆ ಎಲೆಚುಕ್ಕೆ ರೋಗ ಭಾಧಿಸಿದ್ದು ರೈತರು ಇದರಿಂದ ಕಂಗಾಲಾಗಿ ಹೋಗಿದ್ದಾರೆ. ಎಲೆಚುಕ್ಕೆ ರೋಗಕ್ಕೆ ಔಷಧಿ ನೀಡದಿದ್ದರೆ ಉಗ್ರ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಪಟ್ಟಣದ ತೋಟಗಾರಿಕಾ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಮಾತನಾಡಿಸಿ ನಂತರ ಮಾಧ್ಯಮದ ಜೊತೆ ಮಾತನಾಡಿ ರೈತರ ಬೆಳೆ ನಾಶವಾಗುತ್ತಿದೆ. ಆದರೂ ಕೂಡ ಸರ್ಕಾರ ಇದರ ಬಗ್ಗೆ ಗಮನ ಹರಿಸಿಲ್ಲ. ಒಂದು ಹೋಬಳಿಗೆ ಔಷಧಿ ಕೊಟ್ಟರೆ ಮತ್ತೊಂದು ಹೋಬಳಿಗೆ ಔಷಧಿ ಕೊಡುವುದಿಲ್ಲ. ಇಲ್ಲಿನ ಅಧಿಕಾರಿಗಳಿಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಹೆಕ್ಟರ್ ತೋಟವಿದೆ. ಅದಕ್ಕೆ ಎಷ್ಟು ಔಷಧಿ ಬೇಕಾಗುತ್ತದೆ ಎಂದು ಗೊತ್ತಿಲ್ಲ. ಹಾಗಾಗಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಆದಷ್ಟು ಬೇಗ ಸರಿಪಡಿಸಲು ಸೂಚಿಸಿದ್ದೇನೆ ಎಂದರು.

ಆರಗ ವಿರುದ್ಧ ಆಕ್ರೋಶ

ಔಷಧಿ ಮೊದಲ ದಿನ ಬಂದಾಗ ಬರಿ ಬಿಜೆಪಿ ಪಕ್ಷಕ್ಕೆ ಸಂಬಂಧಪಟ್ಟವರಿಗೆ ಮಾತ್ರ ಔಷಧಿ ನೀಡಿದ್ದಾರೆ ಎಂಬ ಆರೋಪವಿದೆ ಹಾಗೆ ಮಾಡಬಾರದು. ರೈತರು ಎಲ್ಲಾ ಪಕ್ಷಕ್ಕೂ ರೈತರೇ ಅವರಿಗೆ ಬೇಧಭಾವ ಮಾಡಬಾರದು. ಅದರಲ್ಲೂ ಜಾತಿ ಧರ್ಮ ನೋಡಿ ಔಷಧಿ ಕೊಡುತ್ತಾರೆ ಹಾಗೆಲ್ಲ ಆಗಬಾರದು. ಈಗಲೂ ಗೃಹಸಚಿವರು ಎಚೇತ್ತುಕೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದರು.

ಮೇಗರವಳ್ಳಿಯಿಂದ ಪಾದಯಾತ್ರೆ

ನವೆಂಬರ್ 19 ರಂದು ಆಗುಂಬೆ ಹೋಬಳಿಯಿಂದ ತೀರ್ಥಹಳ್ಳಿಯ ತೋಟಗಾರಿಕಾ ಕಚೇರಿಯವರೆಗೂ ಬೃಹತ್ ಮಟ್ಟದಲ್ಲಿ ರೈತರೊಡನೆ ಪಾದಯಾತ್ರೆ ಮಾಡುತ್ತೇವೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ. ಆ ನಂತರವು ಸರಿಪಡಿಸದಿದ್ದರೆ ಬೆಂಗಳೂರಿನಲ್ಲೂ ಮಲೆನಾಡ ರೈತರೊಡನೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!