ಶಿವಮೊಗ್ಗದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಸಭೆ: ಹೇಳಿದ್ದೇನು..??

ಶಿವಮೊಗ್ಗದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದ ಸಭೆ: ಹೇಳಿದ್ದೇನು..??

ರಾಜ್ಯ ಪೋಲಿಸ್ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆಗಿರುವ ಆಲೋಕ್ ಕುಮಾರ್ ಶಿವಮೊಗ್ಗದಲ್ಲಿ ಸಭೆ ನಡೆಸಿದ ಅವರು ಸಾರ್ವಜನಿಕ ಸುರಕ್ಷ ಕಾಯ್ದೆ 2012 ಜಾರಿಯಾಗಿದ್ದು ಈ ಕಾಯ್ದೆಯನ್ನ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ನಗರ ಭಾಗದ ಸಿಬ್ಬಂದಿಗಳಿಗೆ ರಜೆ ಸಮಸ್ಯೆ ಕಂಡುಬರುತ್ತಿದೆ. ನಮ್ಮಲ್ಲಿ ಸಿಬ್ಬಂದಿಯ ಕೊರತೆ ಇರುವುದರಿಂದ ಶಿವಮೊಗ್ಗ ನಗರದಲ್ಲಿ ವಾರದ ರಜೆ ನೀಡಲು ಸಾಧ್ಯವಾಗುತ್ತಿಲ್ಲ . ಆದರೆ ಗ್ರಾಮಾಂತರ ಭಾಗದಲ್ಲಿ ಇದರ ಸಮಸ್ಯೆ ಇಲ್ಲ . ಹಾಗಾಗಿ ನಗರ ಭಾಗದಲ್ಲಿ ತಿಂಗಳಿಗೆ ಎರಡು ರಜೆಯಾದರೂ ನೀಡಲು ಸೂಚಿಸಿದ್ದೇನೆ ಎಂದರು .

ಜೋಡಿಕೊಲೆ ಆರೋಪಿ ಪತ್ತೆಗೆ ಕ್ರಮ:
ಸಾಗರ ತಾಲೂಕಿನ ಬ್ಯಾಕೋಡು ಗ್ರಾಮದಲ್ಲಿ ಜೋಡಿಕೊಲೆ ನಡೆದು ಮೂರು ವರ್ಷಗಳು ಕಳೆದಿದೆ . ಈ ಪ್ರಕರಣದಲ್ಲಿ 150 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದ್ದು ಆರೋಪಿಗಳು ಪತ್ತೆಯಾಗಿಲ್ಲ . ಆರೋಪಿ ಸಿಕ್ಕಿಲ್ಲವೆಂದು ಸುಮ್ಮನಿರಲು ಬರೊಲ್ಲ ಆರೋಪಿಯನ್ನ ಖಂಡಿತ ಪತ್ತೆಹಚ್ಚುತ್ತೇವೆ ಎಂದರು .

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣ:
ಪೊಲೀಸ್ ತನಿಖೆ ಹಂತದಲ್ಲಿದೆ . ಎಫ್ ಎಸ್ ಎಲ್ ಮತ್ತು ಮರಣೋತ್ತರ ಪರೀಕ್ಷೆ ಬರಬೇಕು . ಈ ಎರಡೂ ವರದಿ ಏನು ಬರುತ್ತದೆ ಅದರ ಆಧಾರದ ಮೇರೆಗೆ ಪ್ರಕರಣ ಏನಾಗಿದೆ ಎಂದು ಹೇಳಲು ಸಾಧ್ಯವೆಂದು ಅಲೋಕ್ ಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!