ಶಿಕಾರಿಪುರ: ತೆಲಂಗಾಣ ಶಾಸಕ ಟಿ. ರಾಜಾಸಿಂಹರನ್ನು ಕೂಡಲೇ ಬಿಡುಗಡೆ ಮಾಡಿ: ಹಿಂದೂ ಜನಜಾಗೃತಿ ಸಮಿತಿ

ಶಿಕಾರಿಪುರ: ತೆಲಂಗಾಣ ಶಾಸಕ ಟಿ. ರಾಜಾಸಿಂಹರನ್ನು ಕೂಡಲೇ ಬಿಡುಗಡೆ ಮಾಡಿ: ಹಿಂದೂ ಜನಜಾಗೃತಿ ಸಮಿತಿ

ಶಿಕಾರಿಪುರ :ತೆಲಂಗಾಣದ ಗೋಶಾಮಹಲ ಕ್ಷೇತ್ರದ ಶಾಸಕರಾದ ಟಿ. ರಾಜಾಸಿಂಹರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಶುಕ್ರವಾರ ಶಿಕಾರಿಪುರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಪರಶುರಾಮ್ ಮಾತನಾಡಿ ಆಗಸ್ಟ್ 23, 2022 ರಂದು ಟಿ. ರಾಜಾಸಿಂಹ ಅವರ ಮೇಲೆ ಒಂದು ಪಂಥದ ಶ್ರದ್ಧಾಸ್ಥಾನಗಳನ್ನು ಅಪಮಾನಿಸಿದರೆಂಬ
ಆರೋಪದಲ್ಲಿ ಬಂಧಿಸಲಾಯಿತು.

ಈ ಪ್ರಕರಣದಲ್ಲಿ ನ್ಯಾಯಾಲಯವು ಅವರಿಗೆ ಜಾಮೀನು ಸಹ ನೀಡಿದೆ. ಅದರ ನಂತರ ಇನ್ನೊಂದು ಪ್ರಕರಣದಲ್ಲಿ ಶಾಸಕ ಟಿ. ರಾಜಾಸಿಂಹರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿರಿಸಿ ಬಂಧಿಸಲಾಗಿದೆ. ಅವರ ಮೇಲೆ `ಪಿ.ಡಿ.ಎಕ್ಟ್’ ನ ಅಂತರ್ಗತ ಅಪರಾಧವನ್ನು ದಾಖಲಿಸಿ ಅವರಿಗೆ ಕಡಿಮೆಪಕ್ಷ ಒಂದು ವರ್ಷ ಕಾರಾಗೃಹದಲ್ಲಿ ಸಿಲುಕಿಸುವ ಬಹುದೊಡ್ಡ ಷಡ್ಯಂತ್ರವನ್ನು ರಚಿಸಲಾಗಿದೆ ಎಂದರು.

ರಾಜಸಿಂಹರನ್ನು ಬಂಧಿಸುವ ಮೊದಲು ಮತ್ತು ಬಂಧಿಸಿದ ನಂತರ ಜಿಹಾದಿ ಪ್ರವೃತ್ತಿಯ ಮತಾಂಧರ ಮೂಲಕ ಅವರನ್ನು ಕೊಲ್ಲುವ ಬೆದರಿಕೆಯನ್ನು ನೀಡಲಾಗುತ್ತಿದೆ. ಅದೇ ರೀತಿ `ಸರ್ ತನ್
ಸೆ ಜುದಾ’ ದಂತಹ ಪ್ರಕ್ಷುಬ್ಧ ಮತ್ತು ಕೊಲೆ ಬೆದರಿಕೆಯ ಘೋಷಣೆಗಳನ್ನು ನೀಡುತ್ತಾ ಹಿಂಸಾತ್ಮಕ ಆಂದೋಲನಗಳನ್ನು ನಡೆಸಲಾಗುತ್ತಿದೆ.

ತೆಲಂಗಾಣದಲ್ಲಿ ಹಿಂದೂದ್ವೇಷಿ ಕಥಿತ ಹಾಸ್ಯಕಾರ ಮುನ್ವರ ಫಾರೂಕಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುನ್ವರ ಫಾರೂಕಿಯ ಇಂದಿನವರೆಗಿನ ಕಾರ್ಯಕ್ರಮಗಳ ಇತಿಹಾಸವನ್ನು ನೋಡಿದರೆ ಅವನು ಹಿಂದೂ ದೇವಿ ದೇವತೆಗಳನ್ನು ಅಗೌರವಿಸುವ ಭಾಷೆಯಲ್ಲಿ ನಡೆಸಿದ್ದಾನೆ.

ಹಾಗಾಗಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಟಿ. ರಾಜಾಸಿಂಹರು ನಿರಂತರವಾಗಿ ಬೇಡಿಕೆಯನ್ನಿಟ್ಟಿದ್ದರು. ಆದರೆ ಈ ಬೇಡಿಕೆಗೆ ಕಸದ ಬುಟ್ಟಿಯನ್ನು ತೋರಿಸಿ ಪೊಲೀಸು‌ ಸಂರಕ್ಷಣೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.

ಇದರ ನಂತರ ಟಿ. ರಾಜಾಸಿಂಹರು ಒಂದು ವಿಡಿಯೋವನ್ನು ಪ್ರಸಾರ ಮಾಡಿದ್ದರು. ನಂತರ `ಟಿ. ರಾಜಾಸಿಂಹರನ್ನು ಮುಂದಿನ 24 ಗಂಟೆಯೊಳಗೆ ಬಂಧಿಸದಿದ್ದರೆ ಅವರ ಮನೆಗೆ ಬೆಂಕಿ ಹಚ್ಚಿ’ ಎಂದು ಕಾಂಗ್ರೆಸ್ ನ ಕಾರ್ಯದರ್ಶಿ ರಶೀದ‌ ಖಾನನರು ಮುಸಲ್ಮಾನರಿಗೆ ಕರೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮುಸಲ್ಮಾನರು ಅಗಸ್ಟ್ 24 ರಂದು ನಡೆಸಿದ ಆಂದೋಲನದಲ್ಲಿ ಕಲಿಮುದ್ದೀನನು ರಾಷ್ಟ್ರೀಯ ಸ್ವಯಂಸೇವಕರನ್ನು ಹತ್ಯೆಗೈಯ್ಯುವಂತೆ ಉದ್ರೇಕಿಸಿದ್ದನು. ತೆಲಂಗಾಣದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಲು ಸಚಿವರಾದಕೆ.ಟಿ.ರಾಮಾರಾವವ್, ಮಹಮೂದ ಅಲಿ ಮತ್ತು ಎಮ್ ಐಎಮ್ ಪಕ್ಷದ ಪ್ರಮುಖ ಸಂಸದ ಅಸದುದ್ದೀನ ಒವೈಸಿಯವರು ಜವಾಬ್ದಾರರಾಗಿದ್ದಾರೆ. ತೆಲಂಗಾಣದ ಪೊಲೀಸರು ಒವೈಸಿ ಲಕೈಗೊಂಬೆಗಳಾಗಿದ್ದಾರೆ. ಒವೈಸಿಯ ಬೆಂಬಲಿಗರು ಕಲ್ಲುತೂರಾಟ ನಡೆಸುತ್ತಿದ್ದಾರೆ. ಆದರೆ ಅವರ ಮೇಲೆ ಯಾವುದೇ ಕಾನೂನಿನ ಕಾರ್ಯಾಚರಣೆ ಆಗುತ್ತಿಲ್ಲ ಎಂದರು.

ತೆಲಂಗಾಣದಲ್ಲಿ `ತೆಲಂಗಾಣ ರಾಷ್ಟ್ರ ಸಮಿತಿ’ಯ ಸರಕಾರವಿದೆ ಹಾಗೂ ಅವರು ಅಲ್ಪಸಂಖ್ಯಾತರ ಸಮರ್ಥಕರು ಹಾಗೂ ಅವರ ಒಲೈಸುವಿಕೆ ಮಾಡುವವರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ
ಹಿಂಸಾಚಾರ ಮಾಡುವವರನ್ನು ಪೊಲೀಸರು ಬಿಟ್ಟುಬಿಡುವುದರಿಂದ ರಾಜ್ಯದ ಕಾನೂನು ಮತ್ತು ಸುವ್ಯವಸೆ ಹಾಳಾಗಿದೆ ಹೀಗಾಗಿ ಕೇಂದ್ರ ಗೃಹ ಸಚಿವಾಲಯವು ಇದನ್ನು ಗಮನಕ್ಕೆ ತೆಗೆದುಕೊಂಡು ಯೋಗ್ಯ ಕಾರ್ಯಾಚರಣೆ ನಡೆಸಬೇಕು ಎಂದರು.

ಟಿ. ರಾಜಾಸಿಂಹರಿಗೆ ತೆಲಂಗಾಣ ಸರಕಾರದಿಂದ ನ್ಯಾಯ ಸಿಗುವ ಸಾಧ್ಯತೆಗಳೂ ಕಂಡುಬರುತ್ತಿಲ್ಲ. ಹಾಗಾಗಿ ಅವರ ಎಲ್ಲ ಖಟ್ಲೆಗಳನ್ನು ಮಹಾರಾಷ್ಟ್ರ ಅಥವಾ ಕರ್ನಾಟಕ ಅಥವಾ ಗೋವಾ ಮುಂತಾದ ನೆರೆಯ ರಾಜ್ಯಕ್ಕೆ ಹಸ್ತಾಂತರಿಸಬೇಕು. ಮತ್ತು ರಾಜಾಸಿಂಹರನ್ನು ಇಟ್ಟ ಕಾರಾಗೃಹದಲ್ಲಿ ಈಗಾಗಲೇ ಜಿಹಾದಿ ಭಯೋತ್ಪಾದಕರಿದ್ದಾರೆ.

ಈ ಕಾರಾಗೃಹದಲ್ಲಿ ಟಿ.ರಾಜಾಸಿಂಹರ ಪ್ರಾಣಕ್ಕೆ ಅಪಾಯವಿದೆ. ಹೀಗಾಗಿ ಅವರನ್ನು ಸುರಕ್ಷಿತ ಕಾರಾಗೃಹದಲ್ಲಿಡಬೇಕು. ಹಾಗೂ ಅವರ ಮೇಲೆ ಹಳೆಯ ಖಟ್ಲೆಗಳನ್ನು ದಾಖಲಿಸಿ ಅವರನ್ನು ಕಾರಾಗೃಹದಲ್ಲಿಡಲು ಪ್ರಯತ್ನಗಳಾಗುತ್ತಿವೆ. ಅವರಿಗೆ ನ್ಯಾಯ ಸಿಗುವ ದೃಷ್ಟಿಯಿಂದ ಕೇಂದ್ರ ಸರಕಾರವು ಮಧ್ಯ ಪ್ರವೇಶಿಬೇಕು ಎಂದರು.

ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯಪಾಲರಿಗೆ ಶಿಕಾರಿಪುರ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದ್ದರು.

ಈ ಸಂಧರ್ಭದಲ್ಲಿ ಸಮಿತಿಯ‌ಕಾವೇರಿ ರಾಯ್ಕರ್. ವಿಶ್ವ ಹಿಂದೂ ಪರಿಷತ್ತಿನ ಪ್ರಕಾಶ್ ಎಂ. ಎಸ್., ಜಯಕರ್ನಾಟಕ ಸಂಘಟನೆಯ ಶಿವಯ್ಯ ಶಾಸ್ತ್ರಿ, ಮಂಜುನಾಥ್ ಬಿ.ವಿ., ಗಿರೀಶ್, ಈರಣ್ಣಯ್ಯ, ಈರೇಶ್, ಶ್ರೀಧರ್ ಜಾಧವ್, ಪಾಂಡುರಂಗ ರಾಯ್ಕರ್, ಪ್ರಕಾಶ್, ಪುಷ್ಪ, ವನಿತಾ ಮತ್ತಿತರರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!