ಶಿಕಾರಿಪುರ: ಯುವ ಬ್ರಿಗೇಡ್’ನಿಂದ ಕನ್ನಡಿಗರ ಹೋರಾಟವನ್ನು ಸ್ಮರಿಸುವ ಕನ್ನಡ ತೇರಿನ ರಥಯಾತ್ರೆ

ಶಿಕಾರಿಪುರ: ಯುವ ಬ್ರಿಗೇಡ್’ನಿಂದ ಕನ್ನಡಿಗರ ಹೋರಾಟವನ್ನು ಸ್ಮರಿಸುವ ಕನ್ನಡ ತೇರಿನ ರಥಯಾತ್ರೆ

ಶಿಕಾರಿಪುರ ಪಟ್ಟಣದಲ್ಲಿ ಶುಕ್ರವಾರ ಸ್ವಾತಂತ್ರೋತ್ಸವದ ಪ್ರಯುಕ್ತ ಯುವ ಬ್ರಿಗೇಡ್ ವತಿಯಿಂದ ಸ್ವರಾಜ್ಯಕ್ಕೆ ಮುಕ್ಕಾಲ್ನೂರು ಹೆಸರಿನಲ್ಲಿ ಕನ್ನಡ ತೇರಿನ ರಥಯಾತ್ರೆ ನಡೆಯಿತು

ತಾಯಿ ಭುವನೇಶ್ವರಿ ಕನ್ನಡ ತೇರಿನ ಮೂಲಕ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಬಲಿದಾನವನ್ನು ಪರಿಚಯಿಸುವ ಕನ್ನಡದಬ ತೇರು ರಾಜ್ಯದ್ಯಂತ ಸಂಚಾರ ನಡೆಸುತ್ತಿದ್ದು ಶುಕ್ರವಾರ ಶಿಕಾರಿಪುರ ತಾಲೂಕಿಗೆ ಆಗಮಿಸಿದ್ದು ಅಭೂತಪೂರ್ವ ಸ್ವಾಗತ ಕೋರಲಾಯಿತು

ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅಂಬಾರಗೊಪ್ಪ ದಿಂದ ಪ್ರಾರಂಭಗೊಂಡು ಶ್ರೀ ಗುರುದ್ರಮನಿ ಶಿವಯೋಗಿ ಪ್ರೌಢಶಾಲೆ ಅಂಬಾರಗೊಪ್ಪ, ಸ್ವತಂತ್ರ ಪದವಿ ಪೂರ್ವ ಕಾಲೇಜು, ಸರ್ಕಾರಿ ಐಟಿಐ ಕಾಲೇಜ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆ,ಸರ್ಕಾರಿ ಪ್ರೌಢಶಾಲೆ ಈಸೂರು, ಎಂ ಡಿ ಆರ್ ಎಸ್ ಬೇಗೂರು, ಎಂ ಡಿ ಆರ್ ಎಸ್ ಹೊಸೂರು

ಈ ಎಲ್ಲಾ ಶಾಲಾ-ಕಾಲೇಜುಗಳಲ್ಲೂ ಸ್ವತಂತ್ರ ಹೋರಾಟದಲ್ಲಿ ಕನ್ನಡಿಗರ ಪಾತ್ರ ಮತ್ತು ಕನ್ನಡದ ಸ್ವತಂತ್ರ ಹೋರಾಟಗಾರರ ಕುರಿತು ಕಿರು ವಿಡಿಯೋ ಚಿತ್ರ ಪ್ರದರ್ಶನವನ್ನು ನೀಡಲಾಯಿತು.

ಈ ವೇಳೆ ಪ್ಲಾಸ್ಟಿಕ್ ಬಳಕೆಯಿಂದ ದೇಶದಲ್ಲಿ ಆಗುತ್ತಿರುವ ಅನೇಕ ಅನಾಹುತಗಳ ಕುರಿತು ಮಾಹಿತಿಯನ್ನು ನೀಡಿ ಪ್ಲಾಸ್ಟಿಕ್ ನಿಷೇಧದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿಡಿಯೋ ಕೂಡ ಪ್ರದರ್ಶನ ನೀಡಲಾಯಿತು.

ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ತಾಲೂಕು ಸಂಚಾಲಕ ನವೀನ್ ಯುವ ಕಾರ್ಯಕರ್ತರ ಗಿರೀಶ್,ಪವನ,ಅಮೀತ್ ,ಅರುಣ್ ,
ಚಂದ್ರು, ವಿನಯ್, ಆಕಾಶ್, ಮತ್ತಿತರರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!