ನೆಗಡಿ ಹರಡುತ್ತಿದೆ, ಹೆಚ್ಚು ಸಮಯ ಉಳಿಯುತ್ತಿದೆ..!

ನೆಗಡಿ ಹರಡುತ್ತಿದೆ, ಹೆಚ್ಚು ಸಮಯ ಉಳಿಯುತ್ತಿದೆ..!

ಆತಂಕಗೊಳ್ಳದಿರಿ,
ಸಾಮಾನ್ಯ ನೆಗಡಿ ದೇಶಾದ್ಯಂತ ಹರಡಿದೆ, ಇದನ್ನು ಪರೀಕ್ಷೆ ಮಾಡಿದರೆ ಕೊರೋನಾ ಎಂದೇ ಬರುತ್ತದೆ, ಹಾಗಾಗಿ ಹೆಚ್ಚು ಏರುಮುಖದಲ್ಲಿದೆ ಆದರೆ ಅದು ಸಾಂಖ್ಯಿಕ ಮಾತ್ರ….!

ಇನ್ನೂ ಈ ಸೋಂಕಿನ ಬಗ್ಗೆ ನಿಖರವಾಗಿ ಏನನ್ನೂ ಹೇಳಲು ಸಾಧ್ಯವಾಗುತ್ತಿಲ್ಲ.

ಸಧ್ಯದ ಲಕ್ಷಣಗಳು:
• ನೆಗಡಿ ಏಳು ದಿನ
• ನಂತರ 15-20 ದಿನಗಳ ಕಾಲ ಗಂಟಲು ಕೆರೆತ
• ಒಣ ಕೆಮ್ಮು
• ಆಗಾಗ ಹಸಿರು ಮಿಶ್ರಿತ ಹಳದಿ ಕಫ
• ಕೆಲವರಲ್ಲಿ ತೀವ್ರ ಜ್ವರ…
ಸಧ್ಯಕ್ಕೆ ಕಾಣಸಿಗುತ್ತಿರುವ ಲಕ್ಷಣಗಳು ಇಷ್ಟೇ

ಉಸಿರಾಟದ ಸಮಸ್ಯೆ, ಆಮ್ಲಜನಕದ ಕೊರತೆ ಯಾವುದೂ ಅಷ್ಟಾಗಿ ಕಾಣುತ್ತಿಲ್ಲ.

ಇಂದಿನ ಹರಡುವಿಕೆ ಮತ್ತು ಮೃದು ಪರಿಣಾಮ ನೋಡಿದರೆ, ಕೊರೋನಾಗೆ ಕೊನೆಯಕಾಲ ಬಂದಂತೆ ತೋರುತ್ತಿದೆ.

ಡೆಲ್ಟಾ ರೂಪಾಂತರ ವೈರಾಣು ಇನ್ನೂ ಜೀವಂತವಾಗಿದೆ, ಈ ಹಂತದಲ್ಲಿ ಅದರ ಗಾಳಿ ಬೀಸಿದರೆ ಅತ್ಯಂತ ಅಪಾಯಕರ.

ಸಂಭ್ರಮಿಸೋಣ, ನೆಮ್ಮದಿಯ ನಿಟ್ಟುಸಿರು ಬಿಡೋಣ ಆದರೆ ಎಚ್ಚರಿಕೆ ಖಂಡಿತಾ ಇರಲಿ.
ಇದರ ಅರ್ಥ ಕೇವಲ ಸಾಮಾಜಿಕ ಅಂತರ ಕೈತೊಳೆಯುವುದು, ವ್ಯಾಕ್ಸೀನ್ ಖಂಡಿತಾ ಸಾಕಾಗುವುದಿಲ್ಲ.

ಇರಲೇ ಬೇಕಾದ ಮೂಲ ಸಂಗತಿ
• ನಮ್ಮ‌ಆಹಾರ
• ಶಾರೀರಿಕ ಶ್ರಮ
ಈ ಎರಡನ್ನು ಸಮತೋಲನದಲ್ಲಿ ಇಟ್ಟುಕೊಳ್ಳಿ

ಯಾವ ರೋಗ ಬಂದರೂ ಹೊಡೆದುರುಳಿಸುವ ಶಕ್ತಿ ಈ ಶರೀರಕ್ಕೆ ಸಹಜವಾಗಿಯೇ ಇದೆ.

ನೆನಪಿರಲಿ,
ಅನಗತ್ಯ ಆಹಾರವೇ ಆರೋಗ್ಯದ ಶತ್ರು

8792290274
9148702645
ವಿಶ್ವಹೃದಯಾಶೀರ್ವಾದವಂ ಬಯಸಿ
ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

Admin

Leave a Reply

Your email address will not be published. Required fields are marked *

error: Content is protected !!