ನಮಗೆ ಪ್ರೊಟೀನ್ ಬೇಕೇಬೇಕು ಆದರೆ ಸೇವಿಸುವ ಸರಿಯಾದ ವಿಧಾನ ತಿಳಿಯಿರಿ..!

ನಮಗೆ ಪ್ರೊಟೀನ್ ಬೇಕೇಬೇಕು ಆದರೆ ಸೇವಿಸುವ ಸರಿಯಾದ ವಿಧಾನ ತಿಳಿಯಿರಿ..!

ಲುಬ್ರಿಕೇಶನ್ ಇಲ್ಲದೇ ಮತ್ತು ಶಕ್ತಿ ಒದಗಿಸದೇ ನಮ್ಮ ವಾಹನದ ಇಂಜಿನ್ ಚಲಿಸುವುದಿಲ್ಲ ಅಲ್ಲವೇ? ಅದೇ ರೀತಿ ಮಾಂಸಖಂಡಗಳ ಚಲನೆಗೆ ಕೊಬ್ಬು ಎಂಬ ಲುಬ್ರಿಕೇಶನ್ ಮತ್ತು ಪೆಟ್ರೋಲ್/ಡೀಸಲ್ ಎಂಬ ಶಕ್ತಿ ಬೇಕೇಬೇಕು.

ಆತ್ಮೀಯರೇ, ಸಧ್ಯಕ್ಕೆ, ಅತಿಯಾಗಿ ಪ್ರೋಟೀನ್ ಸೇವಿಸಿ ನೂರಾರು ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಅದರ ಪರಿಹಾರಕ್ಕಾಗಿ ಈ ಪ್ರೋಟೀನ್‌ ಪದಾರ್ಥಗಳನ್ನು 45 ದಿನಗಳವರೆಗೆ ಬಿಟ್ಟು ಬಿಡುವುದು.

ನಂತರ ಪುನಃ ಆರೋಗ್ಯಕರ ರೀತಿಯಿಂದ ಸೇವನೆ ಮಾಡುವುದು
ಬಹು ಹಿಂದೆ ತಿಳಿಸಿದ್ದೇವೆ, ಜಿಮ್‌ಗಳಲ್ಲಿ ಅತಿ ಹೆಚ್ಚು ಪ್ರೋಟೀನ್ ತಿನ್ನಿಸುತ್ತಾರೆ, ಸಿಹಿ ಮತ್ತು ಕೊಬ್ಬನ್ನು ವಿಷದಂತೆ ದೂರ ಇಡುತ್ತಾರೆ. ಅದೆಷ್ಟು ಯುವಕರು ಹಠಾತ್ ಹೃದಯಸ್ಥಂಭನದಿಂದ ಪ್ರಾಣ ಕಳೆದುಕೊಂಡಿದ್ದಾರೆ ತಿಳಿದುಕೊಳ್ಳಿ. ಇದಕ್ಕೆ ಕಾರಣ, ನಮಗೆ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಶತ್ರುಗಳು ಎಂದು ತಲೆಗೆ ತುಂಬಿರುವುದು ಮತ್ತು ತಿನ್ನಲು ಕೇವಲ ಪ್ರೋಟೀನ್‌ಗಳನ್ನು ತಿನ್ನಲು ಹೇಳುವುದು.

ಕೇವಲ ಪ್ರೋಟೀನ್‌ಗಳಿಂದ ನಮ್ಮ ಮಾಂಸಖಂಡಗಳು ಗಡುಸಾಗುತ್ತವೆ… ಅವುಗಳ ಚಲನೆಗೆ ಬೇಕಾಗುವ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಇಲ್ಲದೇ ನಿಶ್ಚಲವಾಗುತ್ತವೆ.

6 ಪ್ಯಾಕರ್ ದೃಢಕಾಯದ ವ್ಯಕ್ತಿಗಳಿಗೆ ನಿರಂತರ ಕೆಲಸ ಮಾಡಲು ಅಸಾಧ್ಯ, ಅದರಿಂದ ದಣಿಯುತ್ತಾರೆ, ಅಥವಾ ಅತಿಯಾದ ನೋವು ಅನುಭವಿಸುತ್ತಾರೆ.

ಇದಕ್ಕೆ ಕಾರಣ ಮಾಂಸಖಂಡಗಳ ಗಡುಸುತನ ಮತ್ತು ಪೋಷಣಾ ಅಭಾವ!!!

ಇದು ಹೃದಯದ ಮಾಂಸಖಂಡಗಳನ್ನೂ ತಲುಪುವಷ್ಟು ಹಾಳು ಮಾಡಿಕೊಂಡರೆ ಹೃದಯಸ್ಥಂಭನ, ಹಠಾತ್ ಸಾವು ಸಂಭವಿಸುವ ಸಾಧ್ಯತೆ ಅತೀ ಹೆಚ್ಚು. ಇಂದಿನ ಯುವಕರಲ್ಲಿ ಪ್ರತ್ಯಕ್ಷವಾಗಿ ನೋಡಿಯೂ, ಪುಸ್ತಕ, ಯುಟ್ಯೂಬ್ ಮಾಹಿತಿ ಮತ್ತು ವೈದ್ಯರ ಕೇವಲ ಪುಸ್ತಕ ಜ್ಞಾನವನ್ನು ನಂಬಿ ಅಪಾಯ ಎದುರಿಸುತ್ತಿದ್ದೇವೆ.

ಒಂದು ಉದಾಹರಣೆ — ನಿಮ್ಮ ವಾಹನದ ಸರ್ವ ಸಮರ್ಥ ಇಂಜಿನ್‌ ಒಂದಕ್ಕೆ ಇಂಜಿನ್ ಆಯಿಲ್ ಎಂಬ ಲುಬ್ರಿಕೇಶನ್ ಕೊಡದೇ ಹೋದರೆ, ಇಂಧನವೆಂಬ ಶಕ್ತಿ ಒದಗಿಸದೇ ಹೋದರೆ ಆ ವಾಹನದ ಇಂಜಿನ್ ತಕ್ಷಣ ಜಾಮ್ ಆಗಿ ನಿಲ್ಲುವುದಿಲ್ಲವೇ?

ಅದೇ ರೀತೀ ಮಾಂಸಖಂಡಗಳ ಸಾಮರ್ಥ್ಯಕ್ಕೆ ಪ್ರೊಟೀನ್ ಬೇಕು, ಅವುಗಳ ಚಲನೆಗೆ ಕೊಬ್ಬು ಎಂಬ ಲುಬ್ರಿಕೇಶನ್ ಮತ್ತು ಪೆಟ್ರೋಲ್/ಡೀಸಲ್ ಎಂಬ ಶಕ್ತಿ ಬೇಕೇ ಬೇಕು.

ಪ್ರೋಟೀನ್ ಸೇವಿಸುವ ವಿಧಾನ ಏನು? ಮೊಟ್ಟೆಯ ಬಿಳಿಭಾಗ ಮಾತ್ರ ಸೇವಿಸುವ ಬದಲು, ಪ್ರಕೃತಿ ಕೊಟ್ಟಂತೆ ಅದರ ಹಳದಿ ಕೊಬ್ಬಿನ ಅಂಶವನ್ನೂ ಸೇವಿಸುವುದು ಒಳಿತು. ಎಣ್ಣೆ, ಬೆಲ್ಲ, ತುಪ್ಪ ಇಲ್ಲದೇ ಕೇವಲ ಬೇಳೆ ಹೋಳಿಗೆ(ಒಬ್ಬಟ್ಟು) ತಿಂದು ಏನಾಗುತ್ತದೆ ಎಂದು ಗಮನಿಸಿ. ಅದೊಂದು ರೋಗಕಾರಕ ವಿಧಾನ, ಹಲವು ಬಾರಿ ಸೇವಿಸಿದರೆ ಹೃದಯಸ್ಥಂಭನ ಖಚಿತ.

ಸಾಂಬಾರಿಗೂ ಸಹ ಎಣ್ಣೆ, ಬೆಲ್ಲ ಇಲ್ಲದಂತೆ ಸೇವಿಸುವವರೇ ಎಚ್ಚರ!! ಬೇಳೆ ಅತಿಯಾಗಿ ಒಣಗಿಸುತ್ತದೆ, ಪ್ರೋಟೀನ್‌ಗಳ ಸಾಮರ್ಥ್ಯಕ್ಕೆ ಸಹಕಾರ ಕೊಡುವುದೇ ಶುದ್ಧ ತುಪ್ಪ, ಶುದ್ಧ ಎಣ್ಣೆ ಮತ್ತು ಕಾರ್ಬೋಹೈಡ್ರೇಟ್‌ಗಳು. ಅವುಗಳ ಮಿಶ್ರಣ ಇಲ್ಲದೇ ಕೇವಲ ಬೇಳೆ ಕಾಳು ಅಪಾಯಕರ.

ಕೇವಲ ಬೇಳೆಕಾಳುಗಳನ್ನು ಸೇವಿಸುವ ಬದಲು ತುಪ್ಪ ಮತ್ತು ಸಿಹಿ ಪದಾರ್ಥ ಸೇರಿಸಿ ಸೇವಿಸುವುದು ಒಳಿತು.

ಹಾಗೆಯೇ, ಪ್ರೋಟೀನ್ ಸೇವನೆಯ ಪ್ರಮಾಣ ನಮ್ಮ ಶರೀರದ ಕೆಲಸವನ್ನು ಅವಲಂಬಿಸಿದೆ. ನೀವು ಶ್ರಮಿಕರಾಗಿದ್ದರೆ, ಹೆಚ್ಚು, ಇಲ್ಲದಿದ್ದರೆ ಕಡಿಮೆ ಸೇವಿಸಬೇಕು. 🤔

ಉಪಸಂಹಾರ:
ಪ್ರೋಟೀನ್ ಮತ್ತು ಅದರ ಸಮಸಮಕ್ಕೆ ಕಾರ್ಬೋಹೈಡ್ರೇಟ್ ಮತ್ತು ಸ್ವಲ್ಪ ತುಪ್ಪ ಈ ರೀತಿಯ ಸಮ್ಮಿಶ್ರಣ ಸೇವನೆ ಆರೋಗ್ಯಕ್ಕೆ, ದೀರ್ಘಾಯುಷ್ಯಕ್ಕೆ ಅತ್ಯಂತ ಅನಿವಾರ್ಯ.

ಡಾ. ಮಲ್ಲಿಕಾರ್ಜುನ ಡಂಬಳ
8792290274 9148702645
ATHARVA Ayurveda Hospital & Research Institute

Admin

Leave a Reply

Your email address will not be published. Required fields are marked *

error: Content is protected !!