ಆಹಾರದಲ್ಲಿ ಪ್ರೊಟೀನ್ ಬೇಡವೇ?!

ಆಹಾರದಲ್ಲಿ ಪ್ರೊಟೀನ್ ಬೇಡವೇ?!

ನಿನ್ನೆಯ ಇಬ್ಬರು ಮುಗ್ಧ ರೋಗಿಗಳನ್ನು ನೋಡಿ ನಮ್ಮ ಕರುಳು ಹಿಂಡಿಹೋಯ್ತು…

ಓದುಗರೊಬ್ಬರು ದಿನಾಂಕ 03.07.2022 ರ ಸಂಚಿಕೆ ಓದಿ ಕೇಳಿದ್ದಾರೆ — ಹಾಗಾದರೆ “ಇವುಗಳನ್ನು ಬಿಟ್ಟು ಏನನ್ನು ಸೇವಿಸಬೇಕು?!”

ಇದು ನಿಮ್ಮಲ್ಲಿನ ಬಹುಜನರ ಪ್ರಶ್ನೆ ಆಗಿದ್ದಲ್ಲಿ, ಈ ಸಂಚಿಕೆ ನಿಮಗಾಗಿ —

ಆತ್ಮೀಯರೇ, ನಮ್ಮಲ್ಲೊಂದು ತಪ್ಪುಗ್ರಹಿಕೆ ಮನೆಮಾಡಿದೆ…

ಯಾವುದೋ ಒಂದು ಆಹಾರ ಒಳ್ಳೆಯದು ಎಂದರೆ, ಮನಸೋ ಇಚ್ಛೆ ತಿಂದುಬಿಡುವುದು!!ಪರಿಣಾಮವನ್ನೂ ಲೆಕ್ಕಿಸದೇ!!!

ಹಾಗೆಯೇ, ಏನನ್ನೇ ಆದರೂ ಕೆಟ್ಟದ್ದೆಂದರೆ ಪೂರ್ಣವಾಗಿ ಬಿಟ್ಟುಬಿಡುವುದು!! ಕೊರತೆಯನ್ನೂ ಪೂರೈಸದೇ….!!!

ದಾವಣಗೆರೆಯ ಕೇಂದ್ರದಲ್ಲಿ ರೋಗಿಗಳ ತಪಾಸಣೆಯಲ್ಲಿ, ಎರಡು ಮನ ಕಲಕಿದ ವಿಷಯಗಳನ್ನು ಹಂಚಿಕೊಳ್ಳುವೆ. ನಿಮಗೆ ಖಂಡಿತಾ ಸಹಾಯವಾಗುತ್ತದೆ…

ತಪಾಸಣೆ 1:
ಒಬ್ಬರು ಅಮ್ಮನಿಗೆ 66 ವರ್ಷ, ಅವರಿಗೆ 2 ತಿಂಗಳಿನಿಂದ ನಡೆಯಲು ಆಗುತ್ತಿಲ್ಲ, ಪ್ರತಿದಿನ ಇಷ್ಟಿಷ್ಟೇ ಕ್ಷೀಣಿಸುತ್ತಾ ಸಾಗಿದ್ದಾರೆ. ಮಣಿಪಾಲ, ಕಿದ್ವಾಯ್ ಮತ್ತು ಇತರೆಡೆ ತೋರಿಸುತ್ತಿದ್ದಾರೆ.

ಗುಣವಾಗುವ ಸೂಚನೆಯೇ ಇಲ್ಲ… “ಮೆದುಳಬಳ್ಳಿ ಕತ್ತಿನ ಬಳಿ ಸಂಕುಚಿತವಾಗಿದೆ”, ಇಡೀ ಅರ್ಧ ಶರೀರ ಚಲನಾರಹಿತ ಅವಸ್ಥೆಯತ್ತ ಸಾಗುತ್ತಿದೆ!!!

ಯಾರೊಬ್ಬರೂ ಕಾರಣ ಹುಡುಕಲು ತಯಾರಿಲ್ಲ, ಕೇವಲ ರೆಡಿಯಾಲಜಿ ರಿಪೋರ್ಟ್ ನೋಡಿ, ಔಷಧಿ ಮಾಡೋಣ, ಶಸ್ತ್ರಚಿಕಿತ್ಸೆ ತುಂಬಾ ಕಷ್ಟಕರ, ಅದರೂ ನೋಡೊಣ, ಎಂದಿದ್ದಾರೆ!!

ಪ್ರತಿದಿನದ ಈ ನಿಶ್ಚಲತ್ವಕ್ಕೆ ಮನೆಯವರೆಲ್ಲಾ ಗಾಬರಿಗೊಂಡಿದ್ದಾರೆ…

ಎಂದಿನಂತೆ ಅಥರ್ವ ವಿಧಾನದಲ್ಲಿ ಕಾರಣ ಹುಡುಕಿದೆವು — “ಆರೋಗ್ಯಕ್ಕಾಗಿ ಪ್ರತಿದಿನ ಮನೆಯವರೆಲ್ಲಾ ವಿವಿಧ ಮೊಳಕೆಕಾಳುಗಳನ್ನು ಸೇವಿಸುತ್ತಿದ್ದಾರೆ!!”

ಯಾವ ದುಶ್ಚಟವೂ ಇಲ್ಲದ ಕುಟುಂಬ ಅದು! ಆರೋಗ್ಯ ರಕ್ಷಣೆಗೆ ನಿತ್ಯವೂ ಸೇವಿಸಿದ ಮೊಳಕೆಕಾಳುಗಳು ಇಂದು ರಿಪೇರಿ ಇಲ್ಲದ ಮತ್ತು ಕಾರಣ ಅರಿಯದ ಹಂತದಲ್ಲಿ ಬಂದು ಕುಳಿತಿವೆ.

ಈಗ ಆಯುರ್ವೇದ ಚಿಕಿತ್ಸೆ ಮುಂದುವರಿದಿದೆ ಮತ್ತು ಅವರು ಖಂಡಿತಾ ಗುಣವಾಗುತ್ತಾರೆ, ಅದರ ವಿಷಯ ಬೇರೆ. ಆದರೆ ಇಂತಹ ಶೇ.99 ರಷ್ಟು ಜನರು ನರರೋಗ ತಜ್ಞರಲ್ಲಿ ದಿಕ್ಕು ಕಾಣದೇ ಅಳುತ್ತಿದ್ದಾರಲ್ಲ, ಅವರಿಗೆಲ್ಲಾ ಏನಿದೆ ಉತ್ತರ?!! ಇದು ನಮ್ಮ ಕರುಳನ್ನೇ ಹಿಂಡಿತು.

ತಪಾಸಣೆ 2:
ಒಬ್ಬ 31 ವರ್ಷದ ವ್ಯಾಪಾರಸ್ಥ, ಒಳ್ಳೆಯ ವ್ಯಾಪಾರ ಇದೆ, ಹಣ ಎಷ್ಟು ಖರ್ಚಾದರೂ ಸರಿ, ಗುಣಮಾಡಿಕೊಡಿ, ಎಂದು ಕರ್ನಾಟಕದ ಹತ್ತಾರು, ರಾಜಸ್ಥಾನದ ಮೂರು ಆಸ್ಪತ್ರೆ ಸುತ್ತಿದ್ದಾರೆ.

ಒಮ್ಮೆಗೇ ಎದೆಯಲ್ಲಿ ಬಿಗಿಹಿಡಿತ, ವಿದ್ಯುತ್ ಶಾಕ್ ಆಗುತ್ತದೆ, ತಕ್ಷಣ ಅತಿಯಾದ ಬೆವರು ಇಳಿಯುತ್ತದೆ, ವಿಪರೀತ ಆಯಾಸ, ತಲೆಸುತ್ತು… ಖಂಡಿತಾ ಹೃದಯ ರೋಗವಾಗಿಲ್ಲ ಎಂದು ಹತ್ತಾರು ಪರೀಕ್ಷೆಗಳು ಹೇಳಿವೆ, ಇ.ಎನ್.ಟಿ. ವೈದ್ಯರೂ ಏನೂ ತೊಂದರೆ ಇಲ್ಲ ಎಂದಿದ್ದಾರೆ… ಹಾಗೆಯೇ, ಬಿ.ಪಿ. ಒಮ್ಮೆ ಮಿತಿ ಇಲ್ಲದಂತೆ ಹೆಚ್ಚು, ಮಾತ್ರೆ ಕೊಟ್ಟರೆ ಲೋ ಬಿ.ಪಿ!!

ಕೊನೆಗೆ ಮನೋರೋಗಿ ಎಂಬ ಪಟ್ಟ ಕಟ್ಟಿದ್ದಾರೆ.
ಆತನಿಗೆ ಆರ್ಥಿಕ, ಕೌಟುಂಬಿಕ ಒತ್ತಡ ಇಲ್ಲ, ಮನೋರೋಗಕ್ಕೆ ಕಾರಣವೇ ಇಲ್ಲ, ಎಲ್ಲಾ ವ್ಯವಹಾರ ಚೆನ್ನಾಗಿ ನಡೆದಿವೆ…!!

ಅಥರ್ವದ ಶೋಡಶ ಮತ್ತು ದಶವಿಧ ಪರೀಕ್ಷೆಯಿಂದ ತಿಳಿದ ಸತ್ಯವೆಂದರೆ — ಪ್ರತಿದಿನ ಮೊಳಕೆಕಾಳು, ಬೇಳೆ ಸೇವನೆ, ಜಿಮ್ ಪ್ರೋಟೀನ್ ಪೌಡರ್ ಸೇವನೆ ನಡೆಯುತ್ತಿವೆ.

ಆತ ಹೇಳಿದ, ಯಾರೂ ಈ ವಿಷಯ ಕೇಳಿಲ್ಲ, ಪ್ರೋಟೀನ್ ಬಿಡಲೂ ತಿಳಿಸಿಲ್ಲ…

ದಯಮಾಡಿ ನನ್ನ ಜೀವನವನ್ನು ಈ ನರಕದಿಂದ ಹೊರತನ್ನಿ ಈ ಮಾತು ಕರುಳನ್ನು ಹಿಂಡತೊಡಗಿತು…

ಆತ್ಮೀಯರೇ, ಸಧ್ಯಕ್ಕೆ, ಅತಿಯಾಗಿ ಪ್ರೋಟೀನ್ ಸೇವಿಸಿ ನೂರಾರು ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಅದರ ಪರಿಹಾರಕ್ಕಾಗಿ ಈ ಪ್ರೋಟೀನ್‌ ಪದಾರ್ಥಗಳನ್ನು 45 ದಿನಗಳವರೆಗೆ ಬಿಟ್ಟುಬಿಡಿ…

ನಂತರ ಪುನಃ ಆರೋಗ್ಯಕರ ರೀತಿಯಿಂದ ಸೇವನೆ ಮಾಡುವುದನ್ನು ನಾಳೆ ತಿಳಿಸುತ್ತೇವೆ…

ಡಾ. ಮಲ್ಲಿಕಾರ್ಜುನ ಡಂಬಳ
8792290274 9148702645_
ATHARVA Ayurveda Hospital & Research Institute

Admin

Leave a Reply

Your email address will not be published. Required fields are marked *

error: Content is protected !!