ನನ್ನ ಮುಖ ಕಪ್ಪಾಗುತ್ತಿದೆ ಏಕೆ?

ನನ್ನ ಮುಖ ಕಪ್ಪಾಗುತ್ತಿದೆ ಏಕೆ?

ಬಹುತೇಕ ಹರೆಯದ ಹುಡುಗ ಹುಡುಗಿಯರ ಸಮಸ್ಯೆ ಇದು.

ಬಾಲ್ಯದಲ್ಲಿ, ಪ್ರಾಥಮಿಕ ಶಾಲೆ, ಹೈಸ್ಕೂಲ್‌ನಲ್ಲಿದ್ದಾಗ, ಕಾಲೇಜಿನಲ್ಲೂ ತುಂಬಾ ಗೌರವರ್ಣದಿಂದ ಕಂಗೊಳಿಸುತ್ತಿದ್ದ ನಾನು, ಇದ್ದಕ್ಕಿದ್ದಂತೆ ಕಪ್ಪಾದದ್ದು ಏಕೆ?ಮದುವೆಗೆ ಗಂಡು/ಹೆಣ್ಣು ನೋಡುವ ಸಮಯ, ಮದುವೆ ಹತ್ತಿರ ಬರುತ್ತಿದೆ…

ಕೈಕಾಲು ಬಿಡಿ, ಏನಾದರೂ ಮಾಡಿ ಕೇವಲ ನನ್ನ ಮುಖ ಮೊದಲಿನ ಬಿಳುಪಿಗೆ ತಿರುಗಿದರೆ ಸಾಕು ಎಂದು ಕೊರಗುವ ಅನೇಕರನ್ನು ನಾವು ನೋಡಿದ್ದೇವೆ… ಇದಕ್ಕೆ ಕಾರಣ ಮತ್ತು ಪರಿಹಾರ ನೋಡೋಣ…

ಪರಿಚಯ:
ಚರ್ಮದ ಕಾಂತಿ ಹೊರಗಿನ ವಿಷಯವೇ ಅಲ್ಲ, ಸೂರ್ಯನ‌ ಶಾಖ ಸುಟ್ಟಿತು, ಬಿಸಿ ಝಳದಲ್ಲಿ ಕೆಲಸ ಮಾಡಿದೆ… ಇವೆಲ್ಲಾ ತಾತ್ಕಾಲಿಕ ಕಾರಣ, ಕಾರಣ ನಿಲ್ಲಿಸಿದ ತಕ್ಷಣ ಮರಳಿ ಸರಿ ಆಗಬೇಕು. ನೆನಪಿಸಿಕೊಳ್ಳಿ, ಬಾಲ್ಯದಲ್ಲಿ, ಶಾಲಾ ಬೇಸಿಗೆ ರಜೆಯ ಸಮಯದಲ್ಲಿ ಸುತ್ತಾಡಿ, ಆಟ ಆಡಿ, ಕಪ್ಪಾದ ಮುಖ, ಶಾಲೆ ಪ್ರಾರಂಭವಾದ ಒಂದೇ ವಾರಕ್ಕೆ ಮರಳಿ ಸಹಜ ಸ್ಥಿತಿಗೆ ಬಂದಿತ್ತಲ್ಲವೇ?

ಈಗ ಅದೇಕೆ ಸಾಧ್ಯವಾಗುತ್ತಿಲ್ಲ?!!

ಕಾರಣ ನಮ್ಮ ಹೊರ ತ್ವಚೆಯಲ್ಲಿ ಇಲ್ಲ, ಒಳಗಿನ ಪದರಗಳಲ್ಲಿ ಇದೆ, ಅದನ್ನು ಕಾಳಜಿ ಮಾಡಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ… 🤔

ಕಾರಣಗಳು:
ಚರ್ಮದ ಬಣ್ಣಕ್ಕೆ ಕಾರಣ ನಮ್ಮ‌ ರಕ್ತಧಾತು —
ಜೀವನಂ ವರ್ಣಪ್ರಣಾದನಂ ಧಾತುಪೋಷಣಂ ಸ್ಪರ್ಶಜ್ಞಾನಂ ಅಸಂಹತಮ್||
ಇದು ರಕ್ತದ ಕಾರ್ಯ, ತ್ವಚೆಯ ಮೂಲ ಪದರವಾದ “ರೋಹಿಣಿ ತ್ವಚಾ” ದಲ್ಲಿ ಇರುವ ಸೂಕ್ಷ್ಮ‌ ರಕ್ತನಾಳಗಳು ಯಾವ ಬಣ್ಣವನ್ನು ಹೊರಸೂಸುವವೋ ಅದೇ ಬಣ್ಣ ನಮ್ಮ ತ್ವಚೆಯದು ಮತ್ತು ರೋಹಿಣಿ ತ್ವಚಾ ಪದರದ ನಂತರ ಮೇಲ್ಭಾಗದಲ್ಲಿ ಇನ್ನೂ 5 ಪದರಗಳಿದ್ದು, ಸಂವೇದಿನಿ, ಲೋಹಿತಾ, ತಾಮ್ರ, ಶ್ವೇತ ಮತ್ತು ಅವಭಾಸಿನಿ ಎಂಬ ಪದರಗಳ ನಡುವೆ ದ್ರವರೂಪದ “ರಸಧಾತು” ಇರುತ್ತದೆ.

ರಕ್ತದ ಆರೋಗ್ಯ ಮತ್ತು ಇತರ ಪದರುಗಳ ನಡುವಿನ ದ್ರವಾಂಶವಾದ ರಸಧಾತುವಿನ‌ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಶರೀರದ ಬಣ್ಣ ಶಾಶ್ವತವಾಗಿ ಉಳಿಯುತ್ತದೆ.

ಹಾಳಾಗಲು ಕಾರಣ — ಅತಿಯಾದ ಹುಳಿ ಸೇವನೆ ಪ್ರಧಾನ ಕಾರಣವಾಗಿದೆ. ಇಲ್ಲಿ ಹುಳಿ ಎಂದರೆ — ಉಪ್ಪಿನಕಾಯಿ, ಮಸಾಲೆ, ಎಣ್ಣೆ ಕಲಸಿದ ತಿಂಡಿಗಳು(ಕಲಸನ್ನಗಳು), ಗಡುಸಾದ ಅನ್ನ, ಹುಳಿ ಮೊಸರು, ಹೊರಗೆ ತಿನ್ನುವ ಜಂಕ್‌ಗಳು. ಇವು ಜಠರದಲ್ಲಿ ಹುಳಿಯ ಜೊತೆಗೆ ತಾನೂ ಸೇರಿ ರಸಧಾತುವಿನ ಶ್ವೇತವರ್ಣವನ್ನು(ಪಾರದರ್ಶಕ) ಕೆಡಿಸುತ್ತವೆ. ರಕ್ತ ಎಷ್ಟೇ ಶುದ್ಧವಾಗಿ ಉಳಿದರೂ ಅದರ ಮೂಲ ಸ್ವರೂಪವನ್ನು ಹೊರಹಾಕಲು ಇತರ ಪದರಗಳಲ್ಲಿನ ದ್ರವಾಂಶವಾದ ರಸಧಾತುವು ಅವಕಾಶ ಕೊಡದೇ ತನ್ನಲ್ಲಿ ಅವಿಲ(ಮಾಸಲು ಬಣ್ಣ)ತೆಯನ್ನೇ ಹೊರ ಹಾಕಿ ವ್ಯಕ್ತಿಯ ಮುಖದ ಬಣ್ಣವನ್ನು ಕುಗ್ಗಿಸುತ್ತದೆ.

ಸ್ವಭಾವತಃ ಮಾಧುರ್ಯ ಭಾವದ ರಸಕ್ಕೆ ನಮ್ಮ ಆಹಾರದ ಮೂಲಕ ಹುಳಿಯನ್ನೂ, ಮಸಾಲೆಯನ್ನೂ ಸೇರಿಸಿ ಬಣ್ಣ ಕೆಡಿಸುತ್ತೇವೆ. ಇಂತಹ ರಸವು ಹೊರ ವಾತಾವರಣಕ್ಕೆ ಬಂದ ತಕ್ಷಣ ಮತ್ತಷ್ಟು ಶ್ಯಾವ(ಶಾಮ ಅಥವಾ ಕಪ್ಪು) ವರ್ಣಕ್ಕೆ ತಿರುಗುತ್ತದೆ. ಇದೇ ಕಾರಣದಿಂದ ಬಿಸಿಲು-ಗಾಳಿಗಳಿಗೆ ಹೊರ ಒಡ್ಡಿದ ಮೈ ಕಪ್ಪಾಗಿಯೂ, ಇತರ ಭಾಗ ಬಿಳುಪಾಗಿಯೂ ಇರುತ್ತದೆ.

ಒಂದೊಮ್ಮೆ, ರಕ್ತದ ಕಾರಣದಿಂದ ಬಣ್ಣಗೆಟ್ಟರೆ ಅದು ಸರ್ವ ಶರೀರವನ್ನೂ ವ್ಯಾಪಿಸಿಬಿಟ್ಟಿರುತ್ತದೆ. ಬಿಸಿಲಿಗೆ ಇರಲಿ, ಇಲ್ಲದಿರಲಿ ಸರ್ವಶರೀರವೂ ಮಾಸಲು ವರ್ಣವನ್ನು ಪಡೆಯುತ್ತದೆ.

ಹೀಗೆ ರಸಧಾತು ಮತ್ತು ರಕ್ತಧಾತುಗಳು ನಮ್ಮ ಬಣ್ಣಕ್ಕೆ ಕಾರಣವಾಗಿವೆ.

ಪರಿಹಾರ: ನಿನ್ನೆಯ ಸಂಚಿಕೆಯಲ್ಲಿ ತಿಳಿಸಲಾಗಿದೆ

ಡಾ. ಮಲ್ಲಿಕಾರ್ಜುನ ಡಂಬಳ
••••••••••••••••••••••••••••••••••

8792290274
9148702645

ATHARVA Ayurveda Hospital & Research Institute

Admin

Leave a Reply

Your email address will not be published. Required fields are marked *

error: Content is protected !!