ಆರೋಗ್ಯಕ್ಕಾಗಿ ಹೂಡಿಕೆ ಮಾಡಬೇಕಾದ ಕ್ಷೇತ್ರಗಳು…!

ಆರೋಗ್ಯಕ್ಕಾಗಿ ಹೂಡಿಕೆ ಮಾಡಬೇಕಾದ ಕ್ಷೇತ್ರಗಳು…!

ಮಾನವ ತನ್ನ ಆರೋಗ್ಯಕ್ಕಾಗಿ ಹೂಡಿಕೆ ಮಾಡಬೇಕಾದ ಕ್ಷೇತ್ರಗಳು‌ “ಎರಡು”

ಒಂದು ಆಸ್ಪತ್ರೆ, ಎರಡು ಹೆಲ್ತ್ ಇನ್ಸೂರೆನ್ಸ್ ಕಂಪನಿ ಎಂದರೆ ಅದು ಶುದ್ಧ ಸುಳ್ಳು.

ಆರೋಗ್ಯ ಹಣದಿಂದ ಎಂದಿಗೂ ಸಿಗುವುದಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ…

ಆರೋಗ್ಯಕ್ಕಾಗಿ ಹೂಡಿಕೆ ಮಾಡಬೇಕಾದ ಎರಡು ಕ್ಷೇತ್ರಗಳೆಂದರೆ ನಮ್ಮ ಹಸಿವು ಮತ್ತು ನಿದ್ದೆ.

ಹಸಿವು:
ಹಸಿವು ಎಂದರೆ ಅದು ನಮ್ಮ ಜಠರದಿಂದ ಬರುವ ಸಂವೇದನೆಯಲ್ಲ. ಹೊಟ್ಟೆ ಖಾಲಿ ಇದ್ದರೂ ಅನೇಕ ಮಕ್ಕಳು ದಿನವೆಲ್ಲಾ ತಿನ್ನದಿದ್ದರೂ ಊಟ ಮಾಡಲು ಮೂಗು ಮುರಿಯುತ್ತಾರೆ ಏಕೆಂದರೆ ಅವರಿಗೆ ಹಸಿವು ಇರುವುದಿಲ್ಲ.

ಹಸಿವು ಎಂಬುದು ರಕ್ತದಲ್ಲಿ ಆಹಾರದ ಅಂಶ ಕ್ಷೀಣಿಸಿದರೆ ಬರುವ ಒಂದು ಸಂವೇದನೆ. ಉದಾ: ರಕ್ತದಲ್ಲಿ ಗ್ಲುಕೋಸ್ ಅಂಶ ಕಡಿಮೆಯಾದರೆ ಮನುಷ್ಯ ಸಿಹಿ ತಿನ್ನಲು ಚಡಪಡಿಸುತ್ತಾನೆ ನೋಡಿದ್ದೀರಲ್ಲವೇ? ಅದು ನಿಜವಾದ ಬೇಡಿಕೆ. ಈಗ ನಮ್ಮಲ್ಲಿ ಅನೇಕರಿಗೆ ಹಸಿವೆಯಾಗುವುದೇ ಇಲ್ಲ!! ಇದರ ಅರ್ಥ ರಕ್ತದಲ್ಲಿ ಆಹಾರದ ಅಂಶ ಖರ್ಚಾಗಿಲ್ಲ, ಅದು ರಾಸಾಯನಿಕಗಳ ರೂಪದಲ್ಲಿ ಸಂಚಯವಾಗಿದೆ, ಹಾಗಾಗಿ ಹೊಟ್ಟೆ ಖಾಲಿ ಇದ್ದರೂ ಹಸಿವೆ ಇಲ್ಲ. ಇದೇ ರಾಸಾಯನಿಕಗಳು ಮುಂದೆ ಶರೀರಕ್ಕೆ ಹಾನಿಯನ್ನು ತರುತ್ತವೆ.

ಹಾಗಾಗಿ ಆರೋಗ್ಯ ಬೇಕೇ “ಹಸಿವು” ಆಗುವಂತೆ ನೋಡಿಕೊಳ್ಳಿ. ಅಂದರೆ ರಕ್ತದಲ್ಲಿ ಸೇರಿದ ಆಹಾರ ಖರ್ಚಾಗುವವರೆಗೆ ಶಾರೀರಿಕ ಶ್ರಮದಿಂದ ಕೆಲಸ ಮಾಡಿ, ಅದು ಕರಗಿದರೆ ರೋಗ ಬರಲು ಅಸಾಧ್ಯ!

ನೆನಪಿಡಿ:
ನಮ್ಮ ಹಸಿವಿಗೆ ಕ್ಯಾನ್ಸರ್ ಕರಗಿಸುವ ಶಕ್ತಿ ಇದೆ. ಇದು ನೊಬೆಲ್ ಪ್ರಶಸ್ತಿ ಪಡೆದ ಸಂಶೋಧನೆ. ಕ್ಯಾನ್ಸರ್ ಹೋಗುತ್ತದೆ ಎಂದರೆ ಸಣ್ಣಪುಟ್ಟ ರೋಗಗಳು ಉಳಿಯುವವೇ?

ಅನೇಕರು ಹಸಿಯದೇ ಸಮಯಕ್ಕೆ ಸರಿಯಾಗಿ ಊಟ ಮಾತ್ರ ಮಾಡುತ್ತಾರೆ. ಇದು ಅಪಾಯಕರ…

ಎರಡನೇ ವಿಷಯ
“ನಿದ್ದೆ:”
ರಾತ್ರಿ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವೇ? ರಾತ್ರಿ ನಿದ್ದೆಯಿಂದ ಶೇಖರಣೆಯಾಗುವ “ಜೀವಶಕ್ತಿ” ‌ಇಲ್ಲದಿದ್ದರೆ ಹಗಲು ಏನಾದರೂ ಕೆಲಸ ಮಾಡಲು ಸಾಧ್ಯವೇ?!

ಯಾವುದೇ ಆಹಾರ ಜೀವಕೋಶಗಳಿಗೆ ಅಮೃತ ಅಥವಾ ವಿಷವಾಗಿ ಪರಿಣಮಿಸುವುದು ಪ್ರಾಕೃತಾಪ್ರಾಕೃತ ನಿದ್ದೆಯಿಂದಲೇ

ಇನ್ನೂ ಮುಂದೆ ಹೋಗಿ ಒಂದು ವಾರ ಪೂರ್ಣ ನಿದ್ದೆ ಕೆಟ್ಟರೆ ವ್ಯಕ್ತಿ ಹೃದ್ರೋಗಕ್ಕೆ ಅಥವಾ ಕ್ಯಾನ್ಸರ್‌ಗೆ ತುತ್ತಾಗುತ್ತಾನೆ.

ನಿದ್ದೆ ಇಲ್ಲದಿದ್ದರೆ ಏನಾಗುತ್ತದೆ?:

ಬುದ್ಧಿ ಮನಸ್ಸುಗಳು ಇಲ್ಲವಾದಾಗ, ಈ ಶರೀರ ವಿಶ್ವ ಪ್ರಕೃತಿಯ ಒಂದು ಭಾಗವಾಗುತ್ತದೆ, ಆಗ ಆ ವಿಶ್ವ ಪ್ರಕೃತಿಯು ಶರೀರದ ಚಯಾಪಚಯ ಕ್ರಿಯೆಯಿಂದ ಉಂಟಾಗಿದ್ದ ಅನಗತ್ಯ ಅಂಶಗಳನ್ನು(ಬೈಪ್ರಾಡಕ್ಟ್) ನಿರ್ವಿಷಗೊಳಿಸುತ್ತದೆ ಅಥವಾ ಹೊರಹಾಕುತ್ತದೆ.

ಹೀಗೆ ಬುದ್ಧಿ ಮನಸ್ಸುಗಳು ಲಯವಾಗುವ ಹಂತವೇ ಪ್ರಾಕೃತ ನಿದ್ದೆಯಾಗಿದೆ. ಹಾಗಾಗಿ ಚನ್ನಾಗಿ ನಿದ್ದೆ ಮಾಡುವ ಮಕ್ಕಳು ಚನ್ನಾಗಿ ಆರೋಗ್ಯಯುತವಾಗಿ ಬೆಳೆಯುತ್ತಾರೆ.

ಇದನ್ನು ಅನುಭವದಿಂದ ಒಮ್ಮೆ ನೋಡಿ, ನಿದ್ದೆ ಇರದ ವ್ಯಕ್ತಿಯ ಆರೋಗ್ಯ ಮತ್ತು ಬೆಳವಣಿಗೆ ಹೇಗಿರುತ್ತದೆ ಎಂದು

ಹಾಗಾಗಿ
ನಮ್ಮ ಆಹಾರ ಮತ್ತು ನಿದ್ದೆಗಳ ಮೇಲೆ ಹೂಡಿಕೆ ಮಾಡಿ ಪೂರ್ಣ ಆರೋಗ್ಯದಿಂದ ಇರೋಣ…

ನಿದ್ದೆ ಬಾರದವರು-
ನಿದ್ದೆಯ ಮೇಲೆ ಹೂಡಿಕೆ ಎಂದರೆ, ರಾತ್ರಿ ಆಹಾರ ಕಡಿಮೆ ಮಾಡಿ ಅಥವಾ ಒಂದೆರಡು ದಿನ ನಿಲ್ಲಿಸಿಬಿಡಿ, ನಿದ್ದೆ ತಾನಾಗಿಯೇ ಬರುತ್ತದೆ.

ನಿಮ್ಮ ಸಂಪರ್ಕಕ್ಕೆ:_
📞 8792290274 9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ. ಮಲ್ಲಿಕಾರ್ಜುನ ಡಂಬಳ
**ATHARVA Institute of Ayurveda Research, Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!