ಶಿಕಾರಿಪುರ :ಶಿವ ಶರಣೆ ಅಕ್ಕಮಹಾದೇವಿಯವರ 66 ಅಡಿ ಎತ್ತರದ ಪ್ರತಿಮೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಂದ ಶಂಕುಸ್ಥಾಪನೆ..!

ಶಿಕಾರಿಪುರ :ಶಿವ ಶರಣೆ ಅಕ್ಕಮಹಾದೇವಿಯವರ 66 ಅಡಿ ಎತ್ತರದ ಪ್ರತಿಮೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಂದ ಶಂಕುಸ್ಥಾಪನೆ..!

ಶಿಕಾರಿಪುರ : 12 ಶತಮಾನದಲ್ಲೇ ವಿವಿಧ ಸ್ಥರದಲ್ಲಿ ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದ ತಾಯಿ ಅಕ್ಕಮಹಾದೇವಿ ಅವರ 66 ಅಡಿ ಎತ್ತರದ ಪ್ರತಿಮೆಯು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮಹಿಳಾ ಪ್ರತಿಮೆ ನಮ್ಮ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ನಿರ್ಮಾಣವಾಗುತ್ತದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಶಂಕುಸ್ಥಾಪನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಅವರು ದೆಹಲಿಯ ಅಕ್ಷರಧಾಮ ರೀತಿಯಲ್ಲಿ ಅಭಿವೃದ್ಧಿಯ ಕೆಲಸ ಇಲ್ಲಿ ವೇಗವಾಗಿ ಆಗಿ ಲೋಕಾರ್ಪಣೆಗೊಳ್ಳಲಿದೆ ಜೊತೆಗೆ ಅಕ್ಕಮಹಾದೇವಿ ಜೀವನ ಚರಿತ್ರೆ ಬಿಂಬಿಸುವ 500 ಅಡಿ ಉದ್ದದ ಕದಳಿವನದ ಗುಹೆ.

ಮನುಕುಲದ ಸಮಾನತೆ ಸಾರಿದ 30 ಪ್ರಸಿದ್ಧ ಶಿವಶರಣರ ಶೀಲಾಕೃತಿ ಮಂಟಪಗಳು. ದೋಣಿ ವಿಹಾರ. ದಿಬ್ಬದ ಮೇಲೆ ಶ್ರೀ ಶರಣೆ ಅಕ್ಕಮಹಾದೇವಿ ಶಿಲ್ಪ ಕಲಾಕೃತಿಗಳು ಇಲ್ಲಿ ಆಗತ್ತದೆ ಅದನ್ನು ಸ್ಥಳೀಯರು ಉಳಿಸಿ ಬೆಳಸಬೇಕು, ಅಲ್ಲಮ ಪ್ರಭು ಅವರ ಕ್ಷೇತ್ರಕ್ಕೆ ಅಭಿವೃದ್ಧಿಗೆ 1 ಕೋಟಿ ಹಣ ಬಿಡುಗಡೆಯಾಗಲಿದೆ ಅಲ್ಲಿಯೂ ಕೂಡ ಅಭಿರುದ್ದಿ ಕೆಲಸ ಆಗಲಿದೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರು ಕ್ಷೇತ್ರದಲ್ಲಿ ಶ್ರೀ ಶರಣೆ ಅಕ್ಕ ಮಹಾದೇವಿಯ ಪ್ರತಿಮೆಯ ಶೀಲಾನ್ಯಾಸವನ್ನು ನೆರವೇರಿಸಿದರು.

ಮನ್ಮಹರಾಜಾ ಶ್ರೀ ಡಾ || ಮಲ್ಲಿಕಾರ್ಜುನ ಶ್ರೀಗಳು .ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚನ್ನವೀರಪ್ಪ. ಪದ್ಮನಾಭ ಭಟ್. ಕೊಳಗಿ ರೇವಣಪ್ಪ. ಅಗಡಿ ಅಶೋಕ್.ಪುರಸಭೆ ಅಧ್ಯಕ್ಷರಾದ ಲಕ್ಷ್ಮಿ ಮಹಲಿಂಗಪ್ಪ, ಶಿರಾಳಕೊಪ್ಪ ಪುರ ಸಭಾ ಅಧ್ಯಕ್ಷರಾದ ಮಂಜುಳಾ ರಾಜು. ಭಕ್ತಾಧಿಗಳು ಮತ್ತಿತರರು ಉಪಸ್ಥಿತರಿದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!