ದೇಶದ 25 % ಮಕ್ಕಳಲ್ಲಿ ದೃಷ್ಟಿದೋಷ ಇದೆ….!! ಕನ್ನಡಕ ಪರಿಹಾರವೇ?!!

ದೇಶದ 25 % ಮಕ್ಕಳಲ್ಲಿ ದೃಷ್ಟಿದೋಷ ಇದೆ….!! ಕನ್ನಡಕ ಪರಿಹಾರವೇ?!!

📜 ||….ಮಜ್ಜನಿ ಭ್ರಮ ತಿಮಿರ ದರ್ಶನಮ್ ||19||
||…. ಪಿತ್ತಂ ರೂಪಾಲೋಚನತಃ ಸ್ಮೃತಮ್ ||14||
||….. ದೃಕ್ ಸ್ಪರ್ಶನಂ ಚ ಪಿತ್ತಸ್ಯ ನಾಭಿರತ್ರ ವಿಶೇಷತಃ ||02||
|| ಓಜಸ್ಯ ತು ತೇಜೋ ಧಾತೂನಾಂ…..||37||
~ಅಷ್ಟಾಂಗ ಹೃದಯ, ಸೂತ್ರ ಸ್ಥಾನ, ಅಧ್ಯಾಯ-10,11&12

ಆಚಾರ್ಯ ವಾಗ್ಭಟರ ಈ ಮೇಲಿನ ಶ್ಲೋಕಗಳನ್ನು ಒಟ್ಟುಗೂಡಿಸಿ ನೋಡಿದರೆ, ಸಹಜವಾಗಿ ಅರ್ಥವಾಗುವ ಸತ್ಯವೇನೆಂದರೆ – ಓಜಸ್ಸು ಎಂಬ ಶರೀರದ ಸರ್ವಶ್ರೇಷ್ಠ ಅಂಶವು, ಸಪ್ತ ಧಾತುಗಳ ತೇಜಸ್ಸಿನಿಂದ ಬಂದಿದೆ.

ಆದಾಗ್ಯೂ ತೇಜಸ್ಸು ಎಂಬುದು ಮಜ್ಜಾ ಧಾತುವಿನ ಸಾರಭಾಗದಿಂದ ಹೆಚ್ಚು ದೃಢವಾಗಿ ಹೊರಬರುತ್ತದೆ. ಆ ತೇಜಸ್ಸು ಶರೀರದಲ್ಲಿ ಪಿತ್ತದ ರೂಪದಲ್ಲಿ ಇರುತ್ತದೆ.

ಈ ಪಿತ್ತರೂಪದ ತೇಜಸ್ಸೇ ನಮಗೆ ದೃಷ್ಟಿಯನ್ನು ದಯಪಾಲಿಸಿದೆ, ಅದಕ್ಕೆ ಆಲೋಚಕ ಪಿತ್ತ ಎಂಬ ಹೆಸರಿದೆ.

ಆದ್ದರಿಂದಲೇ,ಮಜ್ಜಾಧಾತು ಕ್ಷಯವಾದರೆ ತಿಮಿರ ಎಂಬ ದೃಷ್ಟಿನಾಶಕ ಲಕ್ಷಣ ಪ್ರಾರಂಭವಾಗುತ್ತದೆ…! 🤔

ತಿಮಿರ ಎಂದರೇನು?

ಸರಿಯಾಗಿ ಕಣ್ಣು ಕಾಣದ ಒಂದು ಅವಸ್ಥೆಯನ್ನು ತಿಮಿರ ಎಂದು ಕರೆಯುತ್ತೇವೆ. ಇದು ತಾತ್ಕಾಲಿಕವೂ, ಚಿರಕಾಲೀನವೂ ಮತ್ತು ಶಾಶ್ವತ ಎಂಬ ಬೇಧದಿಂದ ತಿಮಿರ ರೋಗ, ಕಾಚ ರೋಗ, ಲಿಂಗನಾಶ ರೋಗ ಎಂದು ಮೂರು ಪ್ರಕಾರಗಳಾಗಿ ವಿಂಗಡಿಸಿದ್ದಾರೆ. ಈ ಎಲ್ಲಕ್ಕೂ ಕಾರಣ ಶರೀರದ ತೇಜಸ್ಸು ಕ್ಷೀಣಿಸಿದೆ ಎಂದರ್ಥ, ಅಂದರೆ ತೇಜಸ್ಸನ್ನು ದಯಪಾಲಿಸುವ ಮಜ್ಜೆಯು ದೃಢವಾಗಿ ಇಲ್ಲ ಎಂದರ್ಥ.

ಇಂದು ದೇಶದ ಶೇಕಡಾ 25 ಜನ ಮಕ್ಕಳಲ್ಲಿ ದೃಷ್ಟಿದೋಷ ಕಾಣುತ್ತಿದೆ ಎಂದು ನೇತ್ರ ತಜ್ಞರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಅವರು ಶಾಲಾ ಮಕ್ಕಳಿಗೆ ಕನ್ನಡಕ ವಿತರಿಸುತ್ತಾ ಮಾತನಾಡುವಾಗ ಈ ಹೇಳಿಕೆ ಕೊಟ್ಟಿದ್ದಾರೆ. ಅದು ಸತ್ಯವೇ ಸರಿ ಆದರೆ, ಕನ್ನಡಕ ಎಂದಿಗೂ ಪೂರ್ಣ ಪರಿಹಾರವಲ್ಲ! 🤔

ತಿಮಿರ ಎಂಬ ತಾತ್ಕಾಲಿಕ ದೃಷ್ಟಿದೋಷ ಇರುವ ಈ ಮಕ್ಕಳನ್ನು ಗಮನಿಸಿದರೆ ಅವರುಗಳಲ್ಲಿ ರಕ್ತವೂ ಸಹ ಅತ್ಯಂತ ಕ್ಷೀಣಿಸಿದೆ.

ಈ ಸೂಕ್ಷ್ಮ ಅಂಶವನ್ನು ಗಮನಿಸಿದರೆ ತೇಜಸ್ಸನ್ನು ಕೊಡುವ ಮತ್ತು ರಕ್ತ ಕಣಗಳನ್ನು ಉತ್ಪತ್ತಿ ಮಾಡುವ ಮಜ್ಜಾ ಧಾತುವು ಕ್ಷೀಣಿಸಿದೆ ಎಂದು ತಿಳಿಯುತ್ತದೆ.

ಇದನ್ನು ತಿಳಿದು ಮಜ್ಜೆಯನ್ನು ಪೋಷಿಸುವ ಬದಲು ಅದನ್ನು ಹಾಳು ಮಾಡುವ “ಹುಳಿ ಇರುವ”, “ಹುಳಿ ಬರಿಸುವ” ಆಹಾರಗಳು ಮತ್ತು ಆರ್.ಒ. ಜಲವೆಂಬ ಹುಳಿ ನೀರನ್ನೂ ಮತ್ತು ಇತರ ಹುಳಿ ಪಾನೀಯಗಳನ್ನು ಚೆನ್ನಾಗಿಯೇ ಸೇವಿಸುತ್ತಿದ್ದೇವೆ! 🙄

ಕನ್ನಡಕ ಪರಿಹಾರವೇ?

ದೃಷ್ಟಿದೋಷದ ಮೂಲ ಕಾರಣವಾದ ಮಜ್ಜಾ ಧಾತುವನ್ನು ಚಿಕಿತ್ಸಿಸದೇ, ಹುಳಿಯನ್ನು ಕೈಬಿಡದೇ, ಪ್ರತೀ ವರ್ಷ ನೇತ್ರ ತಪಾಸಣೆ ಮಾಡಿಸಿ ಹೊಸ ಕನ್ನಡಕ ತೊಡಬಹುದು, ಆದರೆ ಮಜ್ಜೆಯ ಕಾರಣದಿಂದ ಬರುವ
• ರಕ್ತಹೀನತೆ
• ಹೈಪೋಥೈರಾಯ್ಡಿಸಮ್
• ಮೂಳೆಸವೆತ
• ಅಂಧತ್ವ
• ಹೃದ್ರೋಗ
• ಯಕೃತ್ ರೋಗ
• ಕಿಡ್ನಿ ವೈಫಲ್ಯ
• ನರಗಳ ದೌರ್ಬಲ್ಯ
• ನೆನಪಿನ ಶಕ್ತಿಹ್ರಾಸತೆ
• ಉತ್ಸಾಹ ಹೀನತೆ
• ಆತ್ಮವಿಶ್ವಾಸದ ಕೊರತೆ
ಇವುಗಳನ್ನು ತಡೆಯಲು ಕನ್ನಡಕದಿಂದ ಸಾಧ್ಯವೇ?!

ನಿಮ್ಮ ಅನುಭವದಿಂದ ಗಮನಿಸಿ ನೋಡಿ, ಆಮ್ಲಪಿತ್ತ ಎಂಬ ಹುಳಿಸುಡುವ ಪಿತ್ತದ ತೊಂದರೆಯಿಂದ ಬಳಲುತ್ತಿರುವಾಗ ದೃಷ್ಟಿ ಕ್ಷೀಣಿಸಿರುತ್ತದೋ ಇಲ್ಲವೋ, ಕನ್ನಡಕ ಬಳಸುವವರಿಗೆ ಇದು ಅತ್ಯಂತ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಅಂದರೆ ಪಿತ್ತಕ್ಕೂ, ಹುಳಿಗೂ, ಮಜ್ಜೆಗೂ ನೇರ ನಂಟು ಇದೆ ಹಾಗಾಗಿ ಇದರ ಚಿಕಿತ್ಸೆ ಮಾಡಿದರೆ, ಅನೇಕ ದೃಷ್ಟಿದೋಷಗಳನ್ನು ತಡೆದಂತಾಗುವುದಷ್ಟೇ ಅಲ್ಲ, ಸದೃಢ ರಕ್ತದಿಂದ ತೇಜಸ್ಸನ್ನು ಹೆಚ್ಚಿಸಿಕೊಂಡು ಸಾಧನೆಗಳನ್ನು ಮಾಡಬಹುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೊಂದಬಹುದು!! 😃😃

ಮಜ್ಜೆಯ ಬಲವರ್ಧನೆಯೇ ನೇತ್ರ ಮತ್ತು ದೃಷ್ಟಿಯ ತೊಂದರೆಗಳನ್ನು ಶಾಶ್ವತವಾಗಿ ನಿವಾರಿಸುವ ಸರ್ವಶ್ರೇಷ್ಠ ಅಸ್ತ್ರ! 🌞

ಸಂಪರ್ಕಕ್ಕೆ:
8792290274
9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ

ಡಾ. ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research, ಶಿವಮೊಗ್ಗ-ದಾವಣಗೆರೆ
.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!