ಶಿಕಾರಿಪುರ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಪ್ರತಿ ಬುಧವಾರ ಕೋವಿಡ್ ಲಸಿಕೆ ವಿತರಣೆ…!

ಶಿಕಾರಿಪುರ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಪ್ರತಿ ಬುಧವಾರ ಕೋವಿಡ್ ಲಸಿಕೆ ವಿತರಣೆ…!

ಶಿಕಾರಿಪುರ ಪಟ್ಟಣದ ವಿವಿಧ ಪ್ರದೇಶಗಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ಕಾರದ ಮುಂದಿನ ಆದೇಶದವರೆಗೆ ಪ್ರತಿ ಬುಧವಾರದಂದು ಶಿಕಾರಿಪುರ ಪಟ್ಟಣದಲ್ಲಿ ಬೆಳಗ್ಗೆ 7 :30 ರಿಂದ ಸಂಜೆ 4:30 ವರೆಗೆ ಕೋವಿಡ್ ಲಸಿಕೆಯನ್ನು ನೀಡಲಾಗುವುದು ಎಂದು ತಾಲೂಕ್ ಆಡಳಿತ ಪ್ರಕಟಣೆ ಹೊರಡಿಸಿದೆ.

ಪಟ್ಟಣದ ಪುರಸಭಾ ಕಾರ್ಯಾಲಯ,ಲಯನ್ಸ್ ಶಾಲೆ, ಖಾಸಗಿ ಬಸ್ ನಿಲ್ದಾಣ, ನಗರ ಆರೋಗ್ಯ ಕೇಂದ್ರ ಚನ್ನಕೇಶವ ನಗರ, ಆಶ್ರಯ ಬಡಾವಣೆ ಪ್ರಾಥಮಿಕ ಶಾಲೆ, ವಿನಾಯಕ ನಗರ ಅಂಗನವಾಡಿ ಕೇಂದ್ರ, ವಿಠ್ಠಲ ದೇವಸ್ಥಾನ ದೊಡ್ಡಪೇಟೆ, ಗಬ್ಬೂರು ಸರ್ಕಾರಿ ಪ್ರಾಥಮಿಕ ಶಾಲೆ, ಪೇಟೆ ಗಂಡು ಮಕ್ಕಳ ಶಾಲೆ ಮಂಗಳಭವನ ಪಕ್ಕ,

ವೆಂಕಟೇಶ್ವರ ಸಮುದಾಯ ಭವನ ಜಯನಗರ, ಈ ಮೇಲ್ಕಂಡ ಸ್ಥಳಗಳಲ್ಲಿ ಕೋವಿಡ್ 19 ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು,18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರು ಮೊದಲನೇ ಹಾಗೂ ಎರಡನೇ ಹಂತದ ಲಸಿಕೆ ಪಡೆಯುವ ಮೂಲಕ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಿ ಹಾಗೂ ತಮ್ಮ ಕುಟುಂಬದ ಇತರ ಸದಸ್ಯರುಗಳು ಮೇಲ್ಕಂಡ ಹತ್ತಿರದ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಪಡೆಯಲು ಪ್ರೋತ್ಸಾಹಿಸುವಂತೆ ಕೋರಿದ್ದಾರೆ.

News by: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!