ಕಸ್ತೂರಿಬಾ ಆಸ್ಪತ್ರೆ ವತಿಯಿಂದ ಮಣಿಪಾಲ್ ಆರೋಗ್ಯ ಕಾರ್ಡ್ ನೊಂದಣಿಗೆ ಚಾಲನೆ..!

ಕಸ್ತೂರಿಬಾ ಆಸ್ಪತ್ರೆ ವತಿಯಿಂದ ಮಣಿಪಾಲ್ ಆರೋಗ್ಯ ಕಾರ್ಡ್ ನೊಂದಣಿಗೆ ಚಾಲನೆ..!

ಶಿಕಾರಿಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಕಸ್ತೂರಿಬಾ ಆಸ್ಪತ್ರೆಯ ವತಿಯಿಂದ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಈ ವೇಳೆ ಕಾರ್ಡ್ ನ ಕುರಿತು ಮಾಹಿತಿ ನೀಡಿದ ಕೃಷ್ಣ ಪ್ರಸಾದ್ ಈ ಆರೋಗ್ಯ ಕಾರ್ಡ್ ಪಡೆಯುವುದರಿಂದ ಬಡ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೌಲಭ್ಯಗಳು ದೊರೆಯಲಿದೆ ಇನ್ನು ಔಷಧಿ ಮತ್ತು ಶಸ್ತ್ರಚಿಕಿತ್ಸೆ ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದು ಈ ರೀತಿ ಅನೇಕ‌ ಉಪಯುಕ್ತ ಸೌಲಭ್ಯ ನಮ್ಮ ಆರೋಗ್ಯ ಕಾರ್ಡ್ ನಿಂದ ಪಡೆಯಬಹುದು ಎಂದರು.

ಒಂದು ವರ್ಷ ಮತ್ತು ಮೂರು ವರ್ಷ ಸೇರಿದಂತೆ ಅನೇಕ ರೀತಿಯ ಕಾರ್ಡ್ ಗಳು ವೈಯಕ್ತಿಕ ಕಾರ್ಡ್ ಕೌಟುಂಬಿಕ ಮತ್ತು ವಿವಿಧ ಕಾರ್ಡ್‌ಗಳ ಇದೆ ಅತೀ ಕಡಿಮೆ ದರದಲ್ಲಿ ಸೌಲಭ್ಯಗಳನ್ನು ಪಡೆಯಬಹುದು.

ಕರ್ಕಳ ಉಡುಪಿ ಮತ್ತು ಮಂಗಳೂರು ದಂತ ವೈದ್ಯಕೀಯ ಆಸ್ಪತ್ರೆ ಕೆ.ಎಂಎಸ್ ದುರ್ಗ ಸಂಜೀವಿನಿ, ಗೋವಾ ಮಣಿಪಾಲ್ ಆಸ್ಪತ್ರೆ ಸೇರಿ 9 ಆಸ್ಪತ್ರೆಗಳಲ್ಲಿ ಸೌಲಭ್ಯ ಪಡೆಯಬಹುದು.

ನಮ್ಮ ಪ್ರತಿನಿಧಿಗಳು ಎಲ್ಲಾ ತಾಲೂಕ್ ಹೊಬಳಿ ಮಟ್ಟದಲ್ಲಿ ಇದ್ದು ಸಂಪರ್ಕ ಪಡೆದುಕೊಂಡು ನೊಂದಣಿ ಮಾಡಿಕೊಳ್ಳಬಹುದು ಜೂನ್ ನಿಂದ ನವೆಂಬರ್ ವರೆಗೆ ಮಾತ್ರ ಇರುತ್ತದೆ.

ಶಿಕಾರಿಪುರ ತಾಲೂಕಿನ ನೊಂದಣಿಗಾಗಿ ಎಸ್ .ಬಿ ಮಠದ್ : 9449100859- ಜಿ. ಶಿವಾನಂದ : 9742152404 -ಶಿರಾಳಕೊಪ್ಪ ಅರುಣ್ ಕುಮಾರ್- 9008134500 ಸಂಪರ್ಕಿಸಬಹುದು.

ಈ‌ ಸಂದರ್ಭದಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಅಧಿಕಾರಿಗಳಾದ ಸಚಿನ್ ಕಾರಂತ್, ಕೃಷ್ಣಪ್ರಸಾದ್, ಎಸ್.ಬಿ ಮಠದ್ ಶ್ರೀನಿವಾಸ ಭವವತ್,ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!