ಶಿಕಾರಿಪುರ: ತಾಲೂಕಿನಲ್ಲಿ ಶುಕ್ರವಾರ ಬೃಹತ್ ಲಸಿಕ ಅಭಿಯಾನ ..!

ಶಿಕಾರಿಪುರ:  ತಾಲೂಕಿನಲ್ಲಿ ಶುಕ್ರವಾರ ಬೃಹತ್ ಲಸಿಕ ಅಭಿಯಾನ ..!

ಶಿಕಾರಿಪುರ ತಾಲೂಕಿನಲ್ಲಿ ದಿನಾಂಕ 17-9 -2021ರ ಶುಕ್ರವಾರದಂದು ಬೆಳಗ್ಗೆ 7 ರಿಂದ ಸಂಜೆ 6:00 ಗಂಟೆಯವರೆಗೆ ತಾಲೂಕಿನ 65 ಕೇಂದ್ರಗಳಲ್ಲಿ ಕೋವಿಡ್ ಬೃಹತ್ ಲಸಿಕೆ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಡಾ. ಆರೋಗ್ಯಧಿಕಾರಿ ಡಾ.ಚಂದ್ರಪ್ಪ ತಿಳಿಸಿದ್ದಾರೆ.

12 ಸಾವಿರ ಕೋವಿಸೀಲ್ಡ್ ಲಸಿಕೆ ಮತ್ತು 3 ಸಾವಿರ ಕೋ ವ್ಯಾಕ್ಸಿನ್ ಲಸಿಕೆ ಒಟ್ಟು 15 ಸಾವಿರ ಜನರಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಸಾರ್ವಜನಿಕರು ಕೋವಿಡ್ ನಿಯಮಾನುಸಾರ ಲಸಿಕೆ ಪಡೆಯಬೇಕು ಎಂದರು.

ಶಿಕಾರಿಪುರ ಪಟ್ಟಣದಲ್ಲಿ ಏಲ್ಲೇಲ್ಲಿ ಸಿಗಲಿದೆ ಲಸಿಕೆ..?

ಶಿಕಾರಿಪುರ ಪಟ್ಟಣದ ಪುರಸಭಾ ಕಾರ್ಯಾಲಯ,
ಲಯನ್ಸ್ ಶಾಲೆ, ಖಾಸಗಿ ಬಸ್ ನಿಲ್ದಾಣ, ನಗರ ಆರೋಗ್ಯ ಕೇಂದ್ರ ಚನ್ನಕೇಶವ ನಗರ,ಆಶ್ರಯ ಬಡಾವಣೆ ಪ್ರಾಥಮಿಕ ಶಾಲೆ,
ವಿನಾಯಕ ನಗರ ಅಂಗನವಾಡಿ ಕೇಂದ್ರ,

ವಿಠ್ಠಲ ದೇವಸ್ಥಾನ ದೊಡ್ಡಪೇಟೆ, ಗಬ್ಬೂರು ಸರ್ಕಾರಿ ಪ್ರಾಥಮಿಕ ಶಾಲೆ, ಪೇಟೆ ಗಂಡು ಮಕ್ಕಳ ಶಾಲೆ ಮಂಗಳಭವನ ಪಕ್ಕ,
ಹಾಗೂ ವೆಂಕಟೇಶ್ವರ ಸಮುದಾಯ ಭವನ ಜಯನಗರ, ಈ ಮೇಲ್ಕಂಡ ಸ್ಥಳಗಳಲ್ಲಿ ಕೋವಿಡ್ 19 ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರು ಮೊದಲನೇ ಹಾಗೂ ಎರಡನೇ ಹಂತದ ಲಸಿಕೆ ಪಡೆಯುವ ಮೂಲಕ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಿ ಕೊಡಲು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರಗಳು ಹಾಗೂ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಲು ತಿಳಿಸಿದ್ದಾರೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!