ಕೇವಲ ಪ್ರೋಟೀನ್ ಸೇವನೆಯಿಂದ ಬರುವ ಹೃದ್ರೋಗ…!

ಕೇವಲ ಪ್ರೋಟೀನ್ ಸೇವನೆಯಿಂದ ಬರುವ ಹೃದ್ರೋಗ…!

ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ

ಇಂದಿನ ವಿಷಯ:_
ಕೇವಲ ಪ್ರೋಟೀನ್
ಸೇವನೆಯಿಂದ ಬರುವ ಹೃದ್ರೋಗ.

ಸಹೃದಯ ಓದುಗರೆ,
ಈ ಶೀರ್ಷಿಕೆಯನ್ನು “ಪ್ರೋಟೀನ್ ಸೇವನೆಯಿಂದ ಹೃದ್ರೋಗ ” ಎಂದು ಓದಿಕೊಂಡರೆ ಅಪಾರ್ಥವಾಗುವುದರಿಂದ_ ಕೇವಲ ಪ್ರೋಟೀನ್ ಸೇವನೆಯಿಂದ ಎಂದು ಓದಿಕೊಳ್ಳಿ, ಪೂರ್ಣ ಮಾಹಿತಿ ಗ್ರಹಿಸಿ…

ನೆನ್ನೆಯ ಸಂಚಿಕೆಯಲ್ಲಿ ನೋಡಿದಂತೆ, ಎಲ್ಲಾ ದ್ವಿದಳ ಧಾನ್ಯಗಳು ಅಂದರೆ ಪ್ರೋಟೀನ್‌ಗಳು ಅತ್ಯಂತ ಪ್ರಬಲ ಶಕ್ತಿಯುತ ಆಹಾರ ಪದಾರ್ಥಗಳಾಗಿದ್ದು ಅವು ಶರೀರದಲ್ಲಿ ವಾತ ದೋಷವನ್ನು ಹೆಚ್ಚಿಸಿ ಅಗತ್ಯಕ್ಕಿಂತ ಹೆಚ್ಚು ಮನೋ ಶಾರೀರಿಕ ಚಟುವಟಿಕೆಗಳನ್ನು ವರ್ಧಿಸುತ್ತವೆ.

ಈ ಮೆಟಬಾಲಿಸಮ್ ಪ್ರಕ್ರಿಯೆಗೆ ಒಳಪಟ್ಟು ಜೀವಕೋಶಗಳು ಒಣಗುತ್ತವೆ, ಏಕೆಂದರೆ, ಎಲ್ಲಾ ರೀತಿಯ ಪ್ರೋಟೀನ್ ಪದಾರ್ಥಗಳು ರೂಕ್ಷ ಗುಣವನ್ನು (ಶುಷ್ಕ / ಒಣಗಿಸುವಿಕೆ) ಮತ್ತು ಒಗರು ರುಚಿಯನ್ನು ಹೊಂದಿರುತ್ತವೆ._

ಶರೀರದಲ್ಲಿ ಜಿಡ್ಡಿನ ಅಂಶವನ್ನು ಪ್ರದಾನವಾಗಿ ಹೊಂದಿರುವ ಧಾತು ಎಂದರೆ_ ಮೇದಸ್ಸು. ಈ ಮೇದಸ್ಸಿನ ಸಾರ ಭಾಗವು ಮಜ್ಜೆಯಲ್ಲಿ ಶೇಖರಣೆಯಾಗಿರುತ್ತದೆ. ಮಜ್ಜಾಧಾತುವಿನ‌ ಈ ಸಾರ ಮತ್ತು ಶ್ರೇಷ್ಠ ಜಿಡ್ಡಿನ ಕಣಗಳಿಂದ ರಕ್ತ ಮತ್ತು ರಕ್ತನಾಳಗಳು ಉತ್ಪತ್ತಿಯಾಗುತ್ತವೆ.

ಈ ರಕ್ತನಾಳಗಳ ಹಿಗ್ಗುವಿಕೆ ಶ್ರೇಷ್ಠ ಜಿಡ್ಡಿನ‌ ಅಂಶದಿಂದಲೂ ಮತ್ತು ಅವುಗಳ ಗಡಸುತನ ಪ್ರೋಟಿನ್‌ಗಳಿಂದಲೂ ಬಂದಿರುತ್ತವೆ. ಹಾಗಾಗಿ, ಜಿಡ್ಡು ಮತ್ತು ಪ್ರೋಟೀನ್ ಈ ಎರಡರ ಸಮತೋಲಿತ ಮಿಶ್ರಣದಿಂದ ಮಾತ್ರ ರಕ್ತನಾಳಗಳು ಸಧೃಢ ಆರೋಗ್ಯವನ್ನು ಹೊಂದಬಲ್ಲವು.

ಕೇವಲ ಪ್ರೋಟೀನ್ ಸೇವನೆಯಿಂದ ಹೃದ್ರೋಗ ಬರುವುದು ಹೇಗೆ?
ರಕ್ತನಾಳಗಳ ಹಿಗ್ಗುವಿಕೆಗೆ ಪ್ರಧಾನವಾಗಿ ಬೇಕಾದ ಜಿಡ್ಡಿನ ಅಂಶವಾದ ತುಪ್ಪ, ಶುದ್ಧ ಎಣ್ಣೆಗಳನ್ನು ಸೇವಿಸದೇ ಇರುವುದರಿಂದ
ಗಡಸುತನ ಹೆಚ್ಚು ಮಾಡುವ ಪ್ರೋಟೀನ್ ಪದಾರ್ಥಗಳಾದ ಚಪಾತಿ, ವಿವಿಧ ಬೇಳೆಕಾಳುಗಳು, ಮೊಳಕೆಕಾಳುಗಳ ನಿರಂತರ ಸೇವನೆಯಿಂದ
ಕೊಲೆಸ್ಟರಾಲ್‌ನ ಭಯದಿಂದ ಮೊಟ್ಟೆಯ ಹಳದಿ ಭಾಗವನ್ನು ಬಿಟ್ಟು ಕೇವಲ ಬಿಳಿಯ ಭಾಗವನ್ನು ತಿನ್ನುವುದರಿಂದ
ಪ್ರೋಟೀನ್ ಪ್ರಧಾನವಾದ ಮಾಂಸವನ್ನು ನಿರಂತರ ಸೇವಿಸುವುದರಿಂದ
ಕೊಲೆಸ್ಟರಾಲ್ ಹೆಚ್ಚಿತೆಂದು ಅವೈಜ್ಞಾನಿಕ ಆಧುನಿಕ‌ ಮೂಢನಂಬಿಕೆಯಿಂದ ಕೊಡುವ ಸ್ಟಾಟಿನ್ ಮಾತ್ರೆಗಳನ್ನು ಸೇವಿಸಿ ರಕ್ತನಾಳಗಳನ್ನು ಮತ್ತಷ್ಟು ಒಣಗಿಸುವುದರಿಂದ
ನಿದ್ರೆ ಕೆಡುವುದು ಮತ್ತು ತಡರಾತ್ರಿ ನಿದ್ದೆಯಿಂದ ಶರೀರದ ಜಿಡ್ಡಿನಂಶ ಕ್ಷೀಣಿಸುವುದರಿಂದ
ನಿರಂತರ ಮಲಬದ್ಧತೆಯಿಂದ

ಈ ಮೇಲಿನ ಕಾರಣಗಳಿಂದ ರಕ್ತನಾಳಗಳು Atherosclerosis ಎಂಬ ವಿಕೃತಿಯನ್ನು ಅಂದರೆ ಗಡಸುತನಕ್ಕೆ ಒಳಪಟ್ಟು ಹೃದಯದ ರಕ್ತನಾಳಗಳ ಒಳಭಾಗ ಕಟ್ಟಿಕೊಳ್ಳುವ ಮತ್ತು ಅಲೋಪತಿ ಪದ್ಧತಿಯಿಂದ ಮರಳಿ ಸರಿಮಾಡಲು ಅಸಾಧ್ಯವಾಗುವ ಒಂದು ದಾರುಣ ಅವಸ್ಥೆ. ಈ ರೀತಿ ರಕ್ತನಾಳಗಳ ಕಟ್ಟಿಕೊಳ್ಳುವಿಕೆಯಿಂದ ಮತ್ತು ಸಂಕೋಚಗೊಳ್ಳುವ ಕಾರಣದಿಂದ ಹೃದಯಕ್ಕೆ ರಕ್ತ ಪೂರೈಕೆ ಕೊರತೆಯಾಗಿ ಹೃದ್ರೋಗಗಳು ಬರುತ್ತಿವೆಯೇ ಹೊರತು ಕೇವಲ ಕೊಲೆಸ್ಟರಾಲ್ ನಿಂದ ಅಲ್ಲ.

ಅಥರ್ವ ಸಂಸ್ಥೆಯಲ್ಲಿ ಇಂಥಹ ಅನೇಕ ಹೃದ್ರೋಗಗಳನ್ನು ಪ್ರೋಟೀನ್-ಫ್ಯಾಟ್ ಸಮತೋಲನಗೊಳಿಸುವ ವಿವಿಧ ರೀತಿಯ ಚಿಕಿತ್ಸಾ ಸಂಯೋಗಗಳಿಂದ ಯಶಸ್ವಿಯಾಗಿ ತಡೆಯಲಾಗಿದೆ ಮತ್ತು ಚಿಕಿತ್ಸಿಸಲಾಗಿದೆ.

ಈ ಚಿಕಿತ್ಸೆ ಕೇವಲ ಔಷಧಗಳಿಂದ ಕೂಡಿರುವುದಿಲ್ಲ, ಬದಲಾಗಿ
ಔಷಧಿಗಳು
ಆಹಾರ ಪದ್ಧತಿಗಳು
ಜೀವನ ಶೈಲಿ
ಮನಸ್ಸಿನ ಸಾತ್ವಿಕತೆ
ಅತ್ಯುತ್ತಮ ನಿದ್ರೆ
ಭಗವತ್‌ಪ್ರಾರ್ಥನೆ

ಈ ಎಲ್ಲಾ ವಿಧಾನಗಳನ್ನು ಒಟ್ಟುಗೂಡಿಸಿ, ನಿಸ್ಸಂಶಯವಾಗಿ ಚಿಕಿತ್ಸೆ ಮಾಡಬಹುದು.

ಈ ಸಂದೇಶದ ಸಾರವನ್ನು ಗ್ರಹಿಸಿ, ಭಯವನ್ನು ಬಿಡಿ, ಕೊಲೆಸ್ಟರಾಲ್‌ ಎಂಬ ಕೃತಕ ಭೂತವನ್ನು ಹೋಗಲಾಡಿಸಿಕೊಳ್ಳಿ. ನಿಮ್ಮ ನಿಮ್ಮ ಹೃದಯಗಳನ್ನು ಸಂರಕ್ಷಿಸಿಕೊಳ್ಳಿ…_

ಸಂಪರ್ಕಕ್ಕೆ:
9148702645
8792290274

ವಿಶ್ವ ಹೃದಯಾಶೀರ್ವಾದವಂ ಬಯಸಿ

ಡಾ. ಮಲ್ಲಿಕಾರ್ಜುನ ಡಂಬಳ_
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ, ಶಿವಮೊಗ್ಗ-ದಾವಣಗೆರೆ
.

Admin

Leave a Reply

Your email address will not be published. Required fields are marked *

error: Content is protected !!