ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ” ಕೇವಲ ಪ್ರೋಟೀನ್ ಸೇವನೆ ಎಂತಹ ಅನಾಹುತ ಗೊತ್ತೇ..!?

ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ” ಕೇವಲ ಪ್ರೋಟೀನ್ ಸೇವನೆ ಎಂತಹ ಅನಾಹುತ ಗೊತ್ತೇ..!?

ಆಸ್ಪತ್ರೆ ರಹಿತ ಜೀವನಕ್ಕೆ ಆಯುರ್ವೇದ

ಇಂದಿನ ವಿಷಯ:
“ಒಂದೇ ಸೂತ್ರ ನೂರು ರೋಗಗಳಿಂದ ರಕ್ಷಣೆ”

ಕೇವಲ ಪ್ರೋಟೀನ್ ಸೇವನೆ ಎಂತಹ ಅನಾಹುತ ಗೊತ್ತೇ..!?

ಪ್ರತ್ಯಕ್ಷ ಪ್ರಮಾಣ, ಅನುಮಾನ ಅಥವಾ ಊಹೆ, ಪ್ರಮಾಣ ಉಪಮಾನ, ಪ್ರಮಾಣ ಮತ್ತು ಆಪ್ತೋಪದೇಶ ಅಥವಾ ಶಬ್ದಪ್ರಮಾಣ ಎಂಬ ನಾಲ್ಕು ಜ್ಞಾನದ ಹಾದಿಗಳಿವೆ.

ನಾವೆಲ್ಲಾ ಈ ನಾಲ್ಕರಲ್ಲಿ ಒಂದನ್ನು ಬಳಸಿ ಜ್ಞಾನ ಸಂಪಾದಿಸುತ್ತೇವೆ.

ಈಗ ಹೇಳಲು ಹೊರಟಿರುವ ಆರೋಗ್ಯ ಸೂತ್ರವು “ಆಪ್ತೋಪದೇಶ” ಪ್ರಮಾಣದ ಆಧಾರದಲ್ಲಿ “ಉಪಮಾನ ಪ್ರಮಾಣ”ವನ್ನು ಅನುಸರಿಸಿ ಆರೋಗ್ಯ ಜ್ಞಾನ ಹಂಚುವ ಕಾರ್ಯವಾಗಿದೆ. ತಾವುಗಳು, ಇದನ್ನು ಗ್ರಹಿಸಿ, ಊಹಿಸಿ, ತಾಳೆನೋಡಿ, ಇದರಿಂದ ಪ್ರತ್ಯಕ್ಷ ತೊಂದರೆ ಅನುಭವಿಸುತ್ತಿರುವವರನ್ನು ಗಮನಿಸಿ ನಂತರ ದೃಢಪಡಿಸಿಕೊಳ್ಳಿ. ಕೊನೆಗೆ ಪಾಲಿಸಿರಿ ಮತ್ತು ಆರೋಗ್ಯದಿಂದ ಇರಿ…

ಇದೊಂದು ಸೂತ್ರದಿಂದ ನಾವು ಈ ಕೆಳಗಿನ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು ಮತ್ತು ಮುಕ್ತರಾಗಲೂಬಹುದು!

ಹೃದ್ರೋಗ
ಪಾರ್ಶ್ವವಾಯು
ಯಕೃತ್ ವಿಕಾರಗಳು, ಲಿವರ್ ಸಿರೋಸಿಸ್
ಗಾಲ್‌ಬ್ಲ್ಯಾಡರ್ ತೊಂದರೆ
ಮೂತ್ರಪಿಂಡದ ಕಲ್ಲುಗಳು
ವಿವಿಧ ರೀತಿಯ ಸಂಧಿ‌ಶೂಲಗಳು
ಮಾಂಸಖಂಡಗಳ ಸೆಳೆತ
80ಕ್ಕೂ ಹೆಚ್ಚು ಅಟೋ ಇಮ್ಯೂನ್ ಕಾಯಿಲೆಗಳು
ವಿವಿಧ ಭಾಗದ ಸ್ಪಾಂಡಿಲೋಸಿಸ್
ಸ್ಪಾಂಡಿಲೈಟೀಸ್
ಹೈಪೋಥೈರಾಯ್ಡಿಸಮ್
ಮಧುಮೇಹ
ರಕ್ತದೊತ್ತಡ
ಮ್ಯಕುಲಾರ್ ಡಿಜನರೇಷನ್
ಕಣ್ಣಿನಲ್ಲಿ ರಕ್ತ ಸೋರುವಿಕೆ
ನೆನಪಿನ ಶಕ್ತಿ ಕುಂದುವಿಕೆ
ನರಗಳ ದೌರ್ಬಲ್ಯ

ಎಷ್ಟೊಂದು ಕಾಯಿಲೆಗಳ ಪಟ್ಟಿ ಇದೆ ಇಲ್ಲಿ, “ಕೇವಲ” ಪ್ರೋಟೀನ್ ಸೇವನೆಯ ದುಷ್ಪರಿಣಾಮಗಳು ಇವು..!! ಆಶ್ಚರ್ಯ ಎನಿಸಿದರೂ ಸತ್ಯ.

ಜಗತ್ತಿನ ಜನರ ತಲೆಗೆ ಆಧುನಿಕ ವಿಜ್ಞಾನ ಎಂದೂ ಇಲ್ಲದ ಒಂದು ಭೂತವನ್ನು ಬಿಟ್ಟಿದೆ…

?!# ಪ್ರತಿ ನಿತ್ಯ ಇಂತಿಷ್ಟು ಪ್ರೋಟೀನ್ ಬೇಕೇ ಬೇಕು ಎಂಬುದು

?!# ಕೊಲೆಸ್ಟರಾಲ್‌ ತಿಂದರೆ ಅಪಾಯ ಎನ್ನುವುದು

ಪ್ರೋಟೀನ್ ಮತ್ತು ಕೊಲೆಸ್ಟರಾಲ್‌‌ಗಳ ನಡುವಿನ ಬಾಂಧವ್ಯವನ್ನು ಮುರಿದು, ಇನ್ನಿಲ್ಲದ ರೋಗಗಳಿಗೆ ಅನ್ಯಾಯವಾಗಿ ತುತ್ತಾಗುತ್ತಿದ್ದೇವೆ…

ಆತ್ಮೀಯರೇ, ಸೂಕ್ಷ್ಮವಾಗಿ ಗಮನಿಸಿ ಅಳವಡಿಸಿಕೊಂಡರೆ, ಸದೃಢ ಆರೋಗ್ಯ ನಮ್ಮದಾಗುವುದು!

ಉಪಮಾನ(ಹೋಲಿಕೆ) ಎಂಬುದು “ಒಂದು ಪ್ರಮಾಣ” ಅಂದರೆ, ವ್ಯಕ್ತಿ ಹಿಂದೆ ನೋಡಿದ ಒಂದನ್ನು ಹೋಲಿಸಿ ಹೊಸದರ ಬಗ್ಗೆ ತಿಳಿವಳಿಕೆ ಅಥವಾ ಜ್ಞಾನ ಮೂಡಿಸುವುದು.

ಈ ಉಪಮಾನ ಪ್ರಮಾಣದ ಅನ್ವಯ ಇಂದಿನ ನಮ್ಮ ಆಹಾರದಲ್ಲಿನ ಪ್ರೋಟೀನ್-ಫ್ಯಾಟ್ ಅಸಮತೋಲನವು ಈ ಮೇಲೆ ಸೂಚಿಸಿದ ಅನೇಕ ಕಾಯಿಲೆಗಳ ಉತ್ಪತ್ತಿ, ಉಲ್ಬಣ, ಅಪಾಯ, ಪ್ರಾಣಹಾನಿ ಮಾಡುತ್ತಿರುವುದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ.

ತಾವೆಲ್ಲರೂ ಹೋಳಿಗೆ ಅಥವಾ ಒಬ್ಬಟ್ಟು ನೋಡಿದ್ದೀರಿ, ತಿಂದಿದ್ದೀರಿ ಹಾಗೆಯೇ, ಬಹುಜನರ ಅತ್ಯಾಪ್ಯಾಯ ಖಾದ್ಯವಾದ ಒಬ್ಬಟ್ಟು, ಆತ್ಮೀಯರನ್ನು ಉಪಚರಿಸಲು ಮಾಡುವ ಬಹುಮೂಲ್ಯ ಆಹಾರವೂ ಹೌದು. ಹೋಳಿಗೆ ತಯಾರಿಕೆಯನ್ನು ಒಮ್ಮೆ ಗಮನಿಸಿ – “ಆಯುರ್ವೇದದಲ್ಲಿ ಹೋಳಿಗೆಗೆ ಉತ್ಕಾರಿಕಾ ಎಂದು ಕರೆಯುತ್ತಾರೆ.” ಹೋಳಿಗೆಯು ಪ್ರಧಾನವಾಗಿ ಬೇಳೆಯಿಂದ ಆಗಿರುತ್ತದೆ. ಬೇಳೆ ಪ್ರೋಟೀನ್ ಪ್ರಧಾನ ಧಾನ್ಯ. ಆಯುರ್ವೇದದಲ್ಲಿ ತಿಳಿಸಲಾಗಿದೆಎಲ್ಲಾ ಬೇಳೆಗಳೂ ಅತ್ಯಂತ ಪ್ರಬಲ ಶಕ್ತಿಯನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು. ಏಕೆಂದರೆ, ಬೇಳೆಗಳು – ಒಗರು ರಸವನ್ನು ಹೊಂದಿರುತ್ತವೆ ಮತ್ತು ಅದರಿಂದ ಶರೀರದ ವಾತವು ಜಾಸ್ತಿಯಾಗಿ ಅತ್ಯಂತ ಹೆಚ್ಚು ಚಟುವಟಿಕೆಯನ್ನು ಉಂಟುಮಾಡುತ್ತದೆ. ಆದರೆ ಆ ಆಂತರಿಕ ಚಟುವಟಿಕೆಯ ಕಾರಣ ಜೀವಕೋಶಗಳು ರಸವನ್ನೂ, ದ್ರವವನ್ನೂ, ಸ್ನೇಹಾಂಶ(ಜಿಡ್ಡನ್ನೂ) ಕಳೆದುಕೊಂಡು ಒಣಗುತ್ತವೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಇದು ವಾಸ್ತವದಲ್ಲಿ ಎಲ್ಲರ ಅನುಭವಕ್ಕೆ ಬರುವ ಅತ್ಯಂತ ಸ್ಪಷ್ಟವಾದ ವಿಚಾರ.

ಉತ್ಕಾರಿಕಾ(ಹೋಳಿಗೆ)ದಲ್ಲಿ ಬಳಸುವ ಬೇಳೆಯು ತನ್ನ ವಾತವರ್ಧಕ ಗುಣದಿಂದ ಜೀವಕೋಶಗಳನ್ನು ಒಣಗಿಸಬಾರದೆಂದು ಅದಕ್ಕೆ
ಬೆಲ್ಲ(ಸಿಹಿ ರಸ) ಹಾಕುತ್ತಾರೆ
ಬೇಯಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ(ಜಿಡ್ಡು) ಹಾಕುತ್ತಾರೆ
ಅಷ್ಟು ಎಣ್ಣೆ ಹಾಕಿದರೂ ಸಹ, ಈಗಾಗಲೇ ಬೆಲ್ಲದ ಸಿಹಿಯಿಂದ ತೃಪ್ತವಾಗಿದ್ದರೂ ಸಹ ಬೇಳೆಯು ಎಲ್ಲಾ ಎಣ್ಣೆಯನ್ನು ಹೀರಿ ಇನ್ನೂ ಒಣಗಿದಂತೆಯೇ ಇರುತ್ತದೆ
ಹಾಗಾಗಿ ಊಟ ಮಾಡುವಾಗ ಅದಕ್ಕೆ ಹೆಚ್ಚು ತುಪ್ಪವನ್ನು ಬಳಸುತ್ತಾರೆ
ಇನ್ನೂ ಸಾಲದೆಂಬಂತೆ ಸಿಹಿ ಹಣ್ಣುಗಳ ಶೀ(ಸೀ)ಕರಣೆಯನ್ನು ಬಳಸುತ್ತಾರೆ. ಆ ಶೀಕರಣೆಗೆ ಮತ್ತೆ ಬೆಲ್ಲ ಬೆರೆಸುತ್ತಾರೆ!!

ಅಬ್ಬಾ ಪ್ರೋಟೀನ್(ಒಗರು ರಸ) ಪ್ರಧಾನ ಬೇಳೆ ಪದಾರ್ಥಗಳಿಗೆ ಇಷ್ಟೊಂದು ಮಧುರ(ಸಿಹಿ), ಸ್ನಿಗ್ಧ(ಜಿಡ್ಡು) ಪದಾರ್ಥಗಳ ಜೋಡು!!!

ಹಾಗೆಯೇ, ಅಡಿಕೆಯನ್ನು ಬೆಲ್ಲದಲ್ಲಿ ಬೇಯಿಸಿ ಮಾರಾಟ ಮಾಡಿದರೆ, ಅದನ್ನು ತಂದು ತುಪ್ಪದಲ್ಲಿ ಹುರಿದು, ಸಕ್ಕರೆ, ಗುಲ್ಕಂದ ಮುಂತಾಗಿ ಸೇರಿಸಿ ತಿನ್ನುತ್ತೇವೆ!! ಅಲ್ಲವೇ?

ನಮ್ಮ ನೆರೆರಾಜ್ಯದವರಾದ ಆಂಧ್ರಪ್ರದೇಶದಲ್ಲಿ ಬೇಳೆಪಪ್ಪುಗೆ ಯಥೇಚ್ಛ ಎಣ್ಣೆ ಬಳಸುತ್ತಾರೆ ಮತ್ತು ಅದನ್ನು ಕೇವಲ ಸಿಹಿ ಮತ್ತು ದ್ರವಪ್ರಧಾನ ಅಕ್ಕಿಯ ಅನ್ನದೊಂದಿಗೆ ಸೇವಿಸುತ್ತಾರೆ, ಚಪಾತಿಯೊಂದಿಗೆ ಅಲ್ಲ.

ಉತ್ತರ ಭಾರತದ ಗೋಧಿ ಪದಾರ್ಥಗಳನ್ನು ನೇರ ಬೆಂಕಿಯಲ್ಲಿ ಸುಟ್ಟು ಅದರ ವಾತ ಗುಣವನ್ನು ಕಡಿಮೆ ಮಾಡುತ್ತಾರೆ, ಬಾಟಿ, ಫುಲ್ಕಾ ತಿನ್ನುವಾಗ ಅದಕ್ಕೆ ಯಥೇಚ್ಛವಾಗಿ ತುಪ್ಪ, ಗುಡ(ಬೆಲ್ಲ) ಸೇರಿಸಿಕೊಳ್ಳುತ್ತಾರೆ, ದಾಲ್ ಸೇವಿಸುವುದಿಲ್ಲ. ಅದೇ ಸಿಹಿ-ದ್ರವ ಪ್ರಧಾನ ಅನ್ನಕ್ಕೆ ದಾಲ್(ಬೇಳೆ) ಬಳಸುತ್ತಾರೆ. ದಾಲ್-ಚಾವಲ್ ಪ್ರಚಲಿತವಾಗಿದೆಯೇ ಹೊರತು, ಪ್ರೋಟೀನ್ ಪ್ರಧಾನ ಗೋಧಿಗೆ ಇನ್ನೊಂದು ಪ್ರೋಟೀನ್ ಸೇರಿಸುವ ಅವೈಜ್ಞಾನಿಕ ಆಹಾರ ಪದ್ಧತಿಯನ್ನು ಅನುಸರಿಸುವುದಿಲ್ಲ. ಗೋಧಿ ಉತ್ಪನ್ನಗಳ ಜೊತೆಗೆ ಗುಡ-ಘೀ(ಬೆಲ್ಲ-ತುಪ್ಪ) ಬಳಸುತ್ತಾರೆ.

ಹೀಗೆ ಪ್ರೋಟೀನ್‌ನಲ್ಲಿರುವ ಶಕ್ತಿಯನ್ನು ನಿಯಂತ್ರಣದಲ್ಲಿಡಲು ದ್ರವ, ಮಧುರ, ಸ್ನಿಗ್ಧ _ಗುಣಗಳು ಅತ್ಯಂತ ಅನಿವಾರ್ಯ. ಜಿಡ್ಡಿಲ್ಲದ ಪ್ರಬಲ ಶಕ್ತಿಯ ಆಕರವಾದ ಪೆಟ್ರೋಲ್ ಬಳಸಿ ದೀಪ ಬೆಳಗಿಸಲಾಗದು, ಆ ಬೆಂಕಿ ನಿಯಂತ್ರಣಕ್ಕೆ ಸಿಗುವುದಿಲ್ಲ, ಅದರ ಬದಲು ಸ್ವಲ್ಪ ಜಿಡ್ಡು ಜಿಡ್ಡಾಗಿರುವ, ಗಟ್ಟಿ ದ್ರವದಿಂದ ಕೂಡಿ, ನಿಯಂತ್ರಿತ ಶಕ್ತಿಯನ್ನು ಹೊಂದಿರುವ ಎಣ್ಣೆಯನ್ನು ಬಳಸಿ ದೀಪ ಬೆಳಗಿಸಬಹುದು.

ನಮ್ಮ ಶರೀರದಲ್ಲಿ ನಿಯಂತ್ರಿತ ಶಕ್ತಿ ಇರಬೇಕೇ ಹೊರತು, ಅನಿಯಂತ್ರಿತ ಶಕ್ತಿ ಇರಬಾರದು, ಅದರಿಂದ ಶರೀರ ಶಕ್ತಿಯುತವಾದರೂ ರೋಗಗಳನ್ನು ಉದ್ದೀಪನಗೊಳಿಸುತ್ತದೆ, ಈ ಉದ್ದೀಪಿತ ವಾತದ ಶಕ್ತಿಯಿಂದ – ಮೇಲೆ ತಿಳಿಸಿದ ರೋಗಗಳು ಮಾನವರನ್ನು ಕಾಡುತ್ತವೆ. ಮತ್ತು ನಿಯಂತ್ರಣಕ್ಕೆ ಸಿಗುವುದೇ ಇಲ್ಲ…_

ಆತ್ಮೀಯರೇ, ಕೇವಲ ಪ್ರೋಟೀನ್ ಸೇವನೆಯ ದುಷ್ಪರಿಣಾಮ ಊಹೆಗೂ ನಿಲುಕದು, ಅದು ನಿಯಂತ್ರಿತವಾಗಿರಬೇಕಾದುದು ದೀರ್ಘಾಯುಷ್ಯಕ್ಕೆ ಅತ್ಯಾವಶ್ಯಕ. ಇಲ್ಲದಿದ್ದರೆ ಶೀಘ್ರವಾಗಿ ರಕ್ತನಾಳಗಳು ಒಣಗಿ ಅಲ್ಲಲ್ಲಿ ಕಟ್ಟಿಕೊಂಡು ವ್ಯಕ್ತಿ ಅತ್ಯಂತ ದಾರುಣ ಅವಸ್ಥೆ ತಲುಪುತ್ತಾನೆ._

ಹೆಚ್ಚಿನ ವಿವರಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ…_

ಏನು ತಿನ್ನುತ್ತೇವೆ ಎನ್ನುವುದಕ್ಕಿಂತ ಎಷ್ಟು ಪಚನವಾಗುತ್ತದೆ ಎನ್ನುವುದರ ಆಧಾರದಲ್ಲಿ ನಮಗೆ ಶಕ್ತಿ ಲಭಿಸುತ್ತದೆ.

ಸಂಪರ್ಕಕ್ಕೆ:
9148702645
8792290274

ವಿಶ್ವ ಹೃದಯಾಶೀರ್ವಾದವಂ ಬಯಸಿ

ಡಾ. ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ, ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!