ಶಿಕಾರಿಪುರ: ಪತ್ರಕರ್ತರು ಮೌಲ್ಯಯುತ ಸತ್ಯ ಸುದ್ದಿಗಳೊಂದಿಗೆ ಬದ್ಧತೆ ಇಟ್ಟುಕೊಂಡು ಕಾರ್ಯ ನಿರ್ವಹಿಸಬೇಕು:ಶಿವಾನಂದ ತಗಡೂರು…!

ಶಿಕಾರಿಪುರ: ಪತ್ರಕರ್ತರು ಮೌಲ್ಯಯುತ ಸತ್ಯ ಸುದ್ದಿಗಳೊಂದಿಗೆ ಬದ್ಧತೆ ಇಟ್ಟುಕೊಂಡು ಕಾರ್ಯ ನಿರ್ವಹಿಸಬೇಕು:ಶಿವಾನಂದ ತಗಡೂರು…!

ಶಿಕಾರಿಪುರ ಪಟ್ಟಣ ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಅಯೋಜಿಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹಿಂದಿನ ದಿನಗಳ್ಳಿ ಪತ್ರಿಕೆ ಹೊತ್ತು ತರುವುದು ವರದಿ ಮಾಡುವುದು ಕಷ್ಟಕರ ಕೆಲಸವಾಗಿತ್ತು ಈಗ ತಂತ್ರಜ್ಞಾನ ಬೆಳೆದಿದೆ ಅದರೊಂದಿಗೆ ಕ್ಷಣ ಕ್ಷಣದ ಮಾಹಿತಿ ನಮಗೆ ಲಭ್ಯವಾಗುತ್ತಿದೆ.

ಸುದ್ದಿಗಳಿಗೆ ಬರವಿಲ್ಲ ಅದರೆ ಸರಿಯಾದ ಸುದ್ದಿ‌‌ ಯಾವುದು ಸುಳ್ಳು ಯಾವುದು ಎಂಬುದು ಪರಮಾರ್ಶೆ ಮಾಡಬೇಕು.

ಸತ್ಯವಾದ ಸುದ್ದಿಯನ್ನು ತಲುಪಿಸುವ ಹೊಣೆಗಾರಿಕೆ ನಮ್ಮ ಪತ್ರಕರ್ತರ ಮೇಲಿದೆ ಟಿವಿ ಮಾಧ್ಯಮಗಳ ದಾವಂತಗಳಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವಾಗುತ್ತಿದೆ‌ ಎನ್ನುವ ಆತಂಕ ಮೂಡಿದೆ.

ಸುದ್ದಿ ಮನೆಯಲ್ಲಿ ಯಾರೋದೋ ತೆಜೋವಧೆಯಾಗಬಾರದ್ದು ಮೌಲ್ಯಯುತ ಸುದ್ದಿಗಳ ನೀಡುವುದು ನಮ್ಮ ಕರ್ತವ್ಯವಾಗಿದೆ.

ಗಾಂಧಿಜೀ ಅಂಬೇಡ್ಕರ್ ರಂತ ಮಹಾನ್ ನಾಯಕರು ಪತ್ರಿಕೆಗಳ ಆದರ್ಶ ಇಟ್ಟುಕೊಂಡು ಬಡವ ದೀನ ದಲಿತ ಪರವಾಗಿ ದ್ವನಿಯಾಗಿ‌ ಪತ್ರಕರ್ತ ನಿಲ್ಲಬೇಕಿದೆ ದಂದೆ ಮಾಡುವವರು ಪತ್ರಿಕಾ ಮಾಧ್ಯಮಕ್ಕೆ ಬರಬಾರದ್ದು ಅಂತವರಿಗೆ ಅವಕಾಶಗಳನ್ನು ನೀಡಬಾರದ್ದು ಎಂದರು.

ಪತ್ರಕರ್ತರನ್ನು ಸಮಾಜದಲ್ಲಿ ಎತ್ತರವಾದ ಸ್ಥಾನದಲ್ಲಿ ಜನರು ನೋಡುತ್ತಾರೆ ಈ‌ಸ್ಥಾನವನ್ನು ನಮ್ಮ ವೈಯಕ್ತಿಕ ಕಾರಣಕ್ಕೆ ಬಳಿಸಿಕೊಳ್ಳಬಾರದ್ದು.

ಕೋವಿಡ್ ಮೊದಲ ಅಲೆ ಸುದ್ದಿ ಮನೆಯಲ್ಲಿ ಕೆಲಸ‌ ಮಾಡುವ ಪತ್ರಕರ್ತರಿಗೆ ಮನೆಯಲ್ಲಿ ಇರಿ‌ ಎಂದು ಯಾರು ಹೇಳಿಲ್ಲ ಈ ರೀತಿ ಸಂಕಷ್ಟದಲ್ಲಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ.

ಕೋವಿಡ್ ನಿಂದ ಅನೇಕರು ಕೆಲಸ ಕಳೆದುಕೊಂಡಿದ್ದಾರೆ ಬದ್ದತೆ ಇಟ್ಟುಕೊಂಡು ಕೆಲಸ ಮಾಡಿದ ಪತ್ರಕರ್ತರಿಗೆ ನಮ್ಮ ಧನ್ಯವಾದಗಳು ಎಂದರು.

ಕೋವಿಡ್ ನಿಂದ ರಾಜ್ಯದಂತ ಅನೇಕ ಪತ್ರಕರ್ತರ ಸಾವನ್ನಪ್ಪಿದರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ವಾರ್ತ ಇಲಾಖೆ ಪತ್ರ ಬರೆದು ವಿಶೇಷ ಗಮನ ನೀಡಿ ಕೋವಿಡ್ ನಿಂದ ಮೃತಪಟ್ಟ‌ ಪತ್ರಕರ್ತರಿಗೆ ತಲಾ ಐದು ಲಕ್ಷ ನೀಡಿ ದಿಟ್ಟ ನಾಯಕ ಬಿ.ಎಸ್ ವೈ ಈವರೆಗೂ 31 ಕುಟುಂಬದ ಮಂಜೂರು ಮಾಡಿದ್ದಾರೆ ಎಂದರು.

ಸಹಾಯ ಮಾಡಿರುವವರನ್ನು ನೆನೆಯುವುದು ನಮ್ಮ ಕರ್ತವ್ಯ ವರ್ಷಗಟ್ಟಲೆ ನಿಲ್ಲುಗಡೆಯಾಗಿದ ಜಾಹೀರಾತು ಬಿಲ್ ಬಿಡುಗಡೆ ಮಾಡಿದರು ಆರೋಗ್ಯ ಕಾರ್ಡ್ ವಿತರಣೆ ಮಾಡಿದ್ದಾರೆ.

ನಾನು ನೋಡಿದಂತೆ ಈ ರೀತಿಯ ದೃಢ ನಿರ್ಧಾರ ತೆಗೆದುಕೊಳ್ಳುವ ರಾಜಕಾರಣಿ ಎಂದರೇ ದೇವೆಗೌಡ ,ಸಿದ್ದರಾಮಯ್ಯ ಬಿಟ್ಟರೇ ಬಿ.ಎಸ್ ಯಡಿಯೂರಪ್ಪ ಮಾತ್ರ ಎಂದರು.

ಎಲ್ಲಾ ಜಿಲ್ಲಾ ತಾಲೂಕ್ ಮಟ್ಟದಲ್ಲೂ ಪತ್ರಿಕಾ ಭವನ ನಿರ್ಮಾಣ ಆಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇಡೀ ದೇಶವನ್ನು ಜಾಗೃತಿ ಮೂಡಿಸವ ಕೆಲಸ‌ ಮಾಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಸ್ವತಂತ್ರ ಪೂರ್ವ ಸಂದರ್ಭದಿಂದ ಈಗಿನ ಕಾಲದ ವರೆಗೂ ಸಮಾಜವನ್ನು ತಿದ್ದುವ ಕೆಲಸ ಪತ್ರಿಕಾ ಧರ್ಮ ಮಾಡಿಕೊಂಡು ಬಂದಿದೆ ಸಂವಿಧಾನ ಆಶಾಯದಲ್ಲಿ ನಾವು ಎಲ್ಲಾ ಜೀವನ ನಡೆಸುತ್ತಿದ್ದೇವೆ .

ರಾಜಕೀಯ ಜೀವನ ಎಂದಿಗೂ ನಾವು ಯೋಚನೆ ಮಾಡಿರಲಿಲ್ಲ ಜನರ ಅಪೇಕ್ಷೆ ಜಿಲ್ಲೆಯ ಸಮಗ್ರ ‌ಅಭಿವೃದ್ದಿಗೆ ಶ್ರಮಿಸುತ್ತಿದ್ದು ಅನೇಕ‌‌ ಯೋಜಗಳು ಅಭಿವೃದ್ಧಿ ಕಾರ್ಯಗಳು ನಡೆದಿದೆ.

ಈ ಸಂದರ್ಭದಲ್ಲಿ ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಡಾ.ಅಮ್ಜದ್ ಹುಸೇನ್ ಅಫೀಜ್ ಕರ್ನಾಟಕಿ, ಜಿಲ್ಲಾ ಸಂಘದ ಶಿವಕುಮಾರ್, ದೀಪಕ್ ಸಾಗರ್,ವೈದ್ಯ, ಹುಚ್ಚರಾಯಪ್ಪ, ರವಿಕುಮಾರ್, ಎಸ್ .ಬಿ ಮಠದ್,‌ಮತ್ತಿತರರು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!