ಶಿಕಾರಿಪುರ ಪಟ್ಟಣದ ಸಂತೆ ಮಾರುಕಟ್ಟೆ 19.20 ಲಕ್ಷ ರೂಗೆ ಹರಾಜು..!

ಶಿಕಾರಿಪುರ ಪಟ್ಟಣದ ಸಂತೆ ಮಾರುಕಟ್ಟೆ 19.20 ಲಕ್ಷ ರೂಗೆ ಹರಾಜು..!

ಶಿಕಾರಿಪುರ ಪಟ್ಟಣದ ಪುರಸಭೆ ಸಂತೆ ಮಾರುಕಟ್ಟೆ ಹರಾಜು ಪ್ರಕ್ರಿಯೆ ಶುಕ್ರವಾರ ನಡೆದಿದ್ದು 19,20,000 ಲಕ್ಷ ಹಣಕ್ಕೆ ಹರಾಜು ನಡೆದಿದೆ.

ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಶಿಕಾರಿಪುರ ಪಟ್ಟಣದ ಸಂತೆ ಮಾರುಕಟ್ಟೆಯ ವಾರದ ಸಂತೆ ವ್ಯಾಪಾರಿಗಳಿಂದ ಸುಂಕ ವಸುಲಾತಿಯ ಬಹಿರಂಗ ಹರಾಜು ಕರೆಯಲಾಗಿತ್ತು.

ಹರಾಜು ಪ್ರಕ್ರಿಯೆ ಅತ್ಯಂತ ಕೂತುಹಲ‌‌ ಮೂಡಿಸಿದ್ದು ಅಂತಿಮವಾಗಿ ರೇವಪ್ಪ‌ ಆಯನೂರು ಅವರು ಹೆಚ್ಚಿನ ಬಿಡ್ ಮಾಡುವ ಮೂಲಕ‌‌ ಪಡೆದುಕೊಂಡರು.

2021ರಿಂದ 2023 ರ ವರೆಗೂ ಒಟ್ಟು 20 ತಿಂಗಳ ಅವಧಿಗೆ ಸಂತೆ ಮಾರುಕಟ್ಟೆ ಕರ ವಸೂಲಿ‌ ಮಾಡಿಕೊಳ್ಳಬಹುದು.

ಶಿಕಾರಿಪುರ ಪಟ್ಟಣ ಪುರಸಭಾ ಇತಿಹಾಸದಲ್ಲಿ ಮೊದಲ ಬಾರಿಗೆ ಸಂತೆ ಮಾರುಕಟ್ಟೆ ಕರವಸೂಲಿ ಹರಾಜು ನಡೆದಿದ್ದು ದೊಡ್ಡ ಮೊತ್ತ ಆದಾಯ ಪುರಸಭೆ ಬದಿದೆ ಎಂದು ಪುರಸಭಾ ಅಧ್ಯಕ್ಷೆ ಲಕ್ಷ್ಮಿ ‌ಮಹಾಲಿಂಗಪ್ಪ ಹೇಳಿದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!