ತೆಳ್ಳಗಾಗಬೇಕೇ?! ಚಪಾತಿ ನಿಲ್ಲಿಸಿ ಬಿಡಿ-ಚಪಾತಿ ಬಿಡಿ ಚನ್ನಾಗಿರಿ…!

ತೆಳ್ಳಗಾಗಬೇಕೇ?! ಚಪಾತಿ ನಿಲ್ಲಿಸಿ ಬಿಡಿ-ಚಪಾತಿ ಬಿಡಿ ಚನ್ನಾಗಿರಿ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ.

✒️ ಇಂದಿನ ವಿಷಯ:
ಚಪಾತಿ ಬಿಡಿ ಚನ್ನಾಗಿರಿ

ತೆಳ್ಳಗಾಗಬೇಕೇ?!
ಚಪಾತಿ ನಿಲ್ಲಿಸಿ ಬಿಡಿ

ಡಯಾಬಿಟೀಸ್ ನಿಯಂತ್ರಿಸಬೇಕೇ?!
ಮೊದಲು ಚಪಾತಿ ಬಿಡಿ

ಮೈಗ್ರೇನ್‌ನಿಂದ ಮುಕ್ತಿ ಬೇಕೇ?!
ಚಪಾತಿ ಕೈ ಬಿಡಿ

ಮೂಲವ್ಯಾಧಿ ಕಾಡುತ್ತಿದೆಯೇ?!
ಮೊದಲು ಚಪಾತಿ ಬಿಡಿ

ದೊಡ್ಡ ಕರುಳು ಊತ ಬಂದಿದೆಯೇ?! ಕೊಲೈಟೀಸ್ ಆಗಿದೆಯೇ?!
ಮೊದಲು ಚಪಾತಿ ಬಿಡಿ

ಅಸ್ತಮಾ ಅಸಹನೀಯವಾಗಿದೆಯೇ?!
ಮೊದಲು ಚಪಾತಿ ಬಿಡಿ

ಎದೆಯುರಿ, ಹುಳಿತೇಗು ಇದೆಯೇ?!
ಮೊದಲು ಚಪಾತಿ ಬಿಡಿ

ಮೂಡ್ ಸ್ವಿಂಗ್ ಇದೆಯೇ?!
ಮೊದಲು ಚಪಾತಿ ಬಿಡಿ

ಮೈಮೇಲೆ ಕುರುಗಳು ಏಳುತ್ತಿವೆಯೇ?!
ಮೊದಲು ಚಪಾತಿ ಬಿಡಿ

ಮಲಬದ್ಧತೆ ಮರೆಯಾಗುವ ಉಪಾಯ ಏನು?!
ಮೊದಲು ಚಪಾತಿ ಬಿಡಿ

ಇವುಗಳನ್ನು ಕೇವಲ ಓದುವುದಲ್ಲ,

ಒಂದು ತಿಂಗಳು ಅಳವಡಿಸಿಕೊಂಡು ನೋಡಿದರೆ ಆರೋಗ್ಯ ನಿಮ್ಮ ಅನುಭವಕ್ಕೆ ಬರುತ್ತದೆ.

ಕಳೆದ 21ವರ್ಷಗಳಲ್ಲಿನ ಅನುಭವದಲ್ಲಿ ನಮಗೆ ಕಂಡಿರುವ ಸತ್ಯ ಇದು.

ಒಂದರ್ಥದಲ್ಲಿ “ಆಸ್ಪತ್ರೆಗಳನ್ನು ಹೆಚ್ಚಿಸುತ್ತಿರುವುದೇ ಈ ಚಪಾತಿ”

ತಿಂದರೆ ಏನಾಗುತ್ತದೆ?
ಚಪಾತಿಯು ಜೀವಕೋಶಗಳಲ್ಲಿ ಊತವನ್ನು ಉಂಟುಮಾಡುತ್ತದೆ.

ಊತಗೊಂಡ ಜೀವಕೋಶಗಳ ಶಕ್ತಿ ಕಡಿಮೆಯಾಗುತ್ತದೆ.

ದುರ್ಬಲ ಜೀವಕೋಶಗಳು ತಮ್ಮ ಪಾಲಿನ ಕೆಲಸವನ್ನು ಸರಿಯಾಗಿ ನಿರ್ವಹಿಸುವುದಿಲ್ಲ, ಇದನ್ನೇ ಕಾಯಿಲೆ ಎನ್ನುತ್ತೇವೆ ಅಲ್ಲವೇ?

ಊತ ಬಂದ ಸ್ಥಾನಕ್ಕೆ ಅನುಗುಣವಾಗಿ ವಿಧವಿಧದ ಕಾಯಿಲೆ ಬರುತ್ತವೆ.

ಉದಾಹರಣೆಗೆ:
ಸರ್ವಶರೀರದ ಜೀವಕೋಶಗಳು ಊತಗೊಂಡರೆ ಅವುಗಳಲ್ಲಿ ನೀರು ಸಂಚಯಗೊಂಡು ದಪ್ಪವಾಗುತ್ತೇವೆ.

127Kg ತೂಕದ ಯುವಕ ಕೇವಲ 21ದಿನಗಳ ಗೋಧಿಮುಕ್ತ ಜೀವನದಿಂದ 86Kg ಗೆ ಇಳಿದರು.
ನೈಜೀರಿಯಾದಿಂದ ಭಾರತಕ್ಕೆ ರಜೆಗೆಂದು ಮರಳಿ ಬಂದ ದಂಪತಿಗಳ ಪಾಲಿಗೆ ಈ ಬಾರಿಯ ತವರು ದೇಶದ ಪ್ರಯಾಣ ಹಬ್ಬವನ್ನೇರ್ಪಡಿಸಿತ್ತು. ಏಕೆಂದರೆ ಆತನ ಮಡದಿಯೂ ಸುಮಾರು 17Kg ತೂಕ ಕಳೆದುಕೊಂಡಿದ್ದಳು.
ಮತ್ತು
ಗರ್ಭಧಾರಣೆಗೆ ಇದ್ದ ಬಹುದೊಡ್ಡ ತೊಡಕು ಅತ್ಯಂತ ಸರಳವಾಗಿ ಪರಿಹಾರವಾಗಿತ್ತು.

ಅಕ್ಕಿ ಸೇವಾನ ಪ್ರಿಯ ದಂಪತಿಗಳಿಗೆ ಮಕ್ಕಳಾಗದ ಕಾರಣ ತೂಕ ಇಳಿಸಲೆಂದು ವೈದ್ಯರ ಸಲಹೆಯಂತೆ ಸುಮಾರು ವರ್ಷ ಚಪಾತಿಗೆ ಮೊರೆಹೋಗಿದ್ದರು!!!
•••••

ಆತ್ಮೀಯರೇ,
ಏನೇನೋ ಓದುತ್ತೀರಿ, ಚಪಾತಿಯ ಬಗ್ಗೆ ಅದರ ರಾಸಾಯನಿಕ ದಾಳಿಯ ಬಗ್ಗೆ ಅಂತರ್ಜಾಲದಲ್ಲಿ ಏಕೆ ಹುಡುಕಿ ಓದಲಿಲ್ಲ?!!!
ಏಕೆಂದರೆ ಈ ಚಪಾತಿಯು-
ಮಾಡಲು ಸುಲಭ;ತಿನ್ನಲು ರುಚಿ

ಇದೊಂದೇ ಸಿದ್ಧಾಂತದಿಂದ ಇಂದು
ಅಡುಗೆಮನೆ ಆಲಸ್ಯದ ರಾಜಧಾನಿಯಾಗಿದೆ ; ಮನುಷ್ಯ ರೋಗದ ರಾಜನಾಗಿದ್ದಾನೆ

ಶಾರೀರಿಕ ಶ್ರಮವಿಲ್ಲದೇ ಜಿಡ್ಡುಗಟ್ಟಿದ ನಾಲಿಗೆ ರುಚಿ ಹೇಗೆ ಬರುತ್ತದೆ?

ಗೋಧಿಯಿಂದ ಸುಲಭದಲ್ಲಿ ಚಪಾತಿ ತಯಾರಿಸಿ ಸೇವಿಸುವ ಬದಲು, ಅತ್ಯಂತ ಆರೋಗ್ಯಕರ ಸೇವನಾ ವಿಧಾನಗಳಿವೆ.
ಇವುಗಳನ್ನು ನಾಳೆ ನೋಡೋಣ.

ಸಂಪರ್ಕಕ್ಕೆ
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!