ಶಿಕಾರಿಪುರ : ವಿವಿಧ ವಾರ್ಡ್ ಗಳಲ್ಲಿ ಜನರಿಗೆ ಆಹಾರ ಕಿಟ್ ವಿತರಣೆ..!

ಶಿಕಾರಿಪುರ : ವಿವಿಧ ವಾರ್ಡ್ ಗಳಲ್ಲಿ ಜನರಿಗೆ ಆಹಾರ ಕಿಟ್ ವಿತರಣೆ..!

ಶಿಕಾರಿಪುರ: ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ ಜನರಿಗೆ ಉದ್ಯೋಗ ಇಲ್ಲದೇ ಜೀವನ ನಿರ್ವಾಹಣೆ ಕಷ್ಟಕರವಾಗಿರುವ ಸಂಕಷ್ಟದ ಸಂದರ್ಭದಲ್ಲಿ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಆಹಾರ ಕಿಟ್ ವಿತರಣೆ ನಡೆಸಿದರು.

ಶಿಕಾರಿಪುರ ಪಟ್ಟದ ಪುರಸಭೆ 14ನೇ ವಾರ್ಡ್ ಪುರಸಭೆ ಸದಸ್ಯರು ಶ್ವೇತಾ ರವೀಂದ್ರ ಅವರು ತಮ್ಮ ವಾರ್ಡಿನ ಜನತೆಗೆ 200 ಪಾಕೆಟ್ ರೇಷನ್ ಕಿಟ್ ವಿತರಣೆ ನಡೆಸಿದರು.

ಲಾಕ್ ಡೌನ್ ಪರಿಣಾಮದಿಂದ ಕುಟುಂಬವಿಲ್ಲದೆ ಒಂಟಿ ಮಹಿಳೆ ಸಂಕಷ್ಟದಲ್ಲಿದ್ದು ಟೌನ್ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜು ರೆಡ್ಡಿಯವರ ಸೂಚನೆಯಂತೆ ಉಳ್ಳಿ ಫೌಂಡೇಶನ್ ವತಿಯಿಂದ ಮಹಿಳೆಗೆ 1 ತಿಂಗಳು ರೇಷನ್ ಹಾಗು 25 ಕೆಜಿ ಅಕ್ಕಿಯನ್ನು ನೀಡಿದರು.

ಕರೋನ ಸಂಕಷ್ಟದ ಸಮಯದಲ್ಲಿ ಬಡ ಜನರಿಗೆ ಅನೇಕ ಸಂಘ ಸಂಸ್ಥೆಗಳು ಪಟ್ಟಣದ, ತಾಲೂಕಿನ ಗ್ರಾಮೀಣ ಭಾಗದಲ್ಲೂ ಇರುವ ಬಡವರನ್ನು ಗುರುತಿಸಿ ಆಹಾರ ಕಿಟ್ ನೀಡಲು ಮುಂದಾಗಬೇಕಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!